ಭಾರತ ಎದುರಿನ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ಪಾಲಾದ ಅಪರೂಪದ ದಾಖಲೆಗಳಿವು!
<p>ಇಂಡಿಯಾ-ಇಂಗ್ಲೆಂಡ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಇಂಗ್ಲೆಂಡ್ನ ಜೋ ರೂಟ್ ಎರಡನೇ ಸ್ಥಾನದಲ್ಲಿದ್ದಾರೆ. ಮೂರು ಶತಕಗಳೊಂದಿಗೆ 537 ರನ್ಗಳನ್ನು ರೂಟ್ ಗಳಿಸಿದ್ದಾರೆ. ಇದರೊಂದಿಗೆ ಹಲವು ದಾಖಲೆಗಳು ರೂಟ್ರನ್ನು ಹುಡುಕಿಕೊಂಡು ಬಂದಿವೆ.</p><p> </p><img><p>ಓವಲ್ ಟೆಸ್ಟ್ನಲ್ಲಿ ತಮ್ಮ ವೃತ್ತಿಜೀವನದ 39ನೇ ಶತಕವನ್ನು ರೂಟ್ ಪೂರ್ಣಗೊಳಿಸಿದರು.</p><img><p>ಈಗ ಅತಿ ಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕರ ಅವರನ್ನು ರೂಟ್ ಹಿಂದಿಕ್ಕಿದ್ದಾರೆ. ಸಂಗಕ್ಕರ 38 ಶತಕಗಳನ್ನು ಗಳಿಸಿದ್ದಾರೆ.</p><img><p>ಈಗ ರೂಟ್ಗಿಂತ ಮುಂದೆ ಇರುವವರು ರಿಕಿ ಪಾಂಟಿಂಗ್ (41), ಜಾಕ್ ಕಾಲಿಸ್ (45),…