2024ರ ಮೈಸೂರು-ದರ್ಭಂಗಾ ಭಾಗಮತಿ ಎಕ್ಸ್‌ಪ್ರೆಸ್ ರೈಲು ದುರಂತ ವಿಧ್ವಂಸಕ ಕೃತ್ಯ ಎಂದ ತನಿಖೆ! | Mysuru Darbhanga Bagmati Express Derailment Ruled Sabotage San
ಕಳೆದ ವರ್ಷದ ಅಕ್ಟೋಬ್ 11 ರಂದು ಮೈಸೂರು-ದರ್ಭಂಗಾ ಭಾಗಮತಿ ಎಕ್ಸ್‌ಪ್ರೆಸ್ ತಮಿಳುನಾಡಿನಲ್ಲಿ ದುರಂತಕ್ಕೆ ಈಡಾಗಿತ್ತು. ಇದರ ತನಿಖೆ ನಡೆಸಿದ ರೈಲ್ವೆ ಇಲಾಖೆ ಇದು ವಿಧ್ವಂಸಕ ಕೃತ್ಯ ಎಂದು ತಿಳಿಸಿದೆ. ನವದೆಹಲಿ (ಜು.31): 2024 ರ ಅಕ್ಟೋಬರ್‌ನಲ್ಲಿ ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗದ ಕವರೈಪೆಟ್ಟೈ ನಿಲ್ದಾಣದಲ್ಲಿ ನಡೆದ ಮೈಸೂರು-ದರ್ಭಂಗಾ ಬಾಗಮತಿ ಎಕ್ಸ್‌ಪ್ರೆಸ್ ಅಪಘಾತದ ತನಿಖೆ ಮುಕ್ತಾಯವಾಗಿದೆ. ದುಷ್ಕರ್ಮಿಗಳು ಹಳಿಗಳ ಇಂಟರ್‌ಲಾಕಿಂಗ್ ವ್ಯವಸ್ಥೆಯ ಘಟಕಗಳನ್ನು ಬಲವಂತವಾಗಿ ತೆಗೆದುಹಾಕಿದ್ದರಿಂದ ಈ ದುರಂತ ಸಂಭವಿಸಿದೆ. ಅಲ್ಲದೆ, ಇದು ಉದ್ದೇಶಪೂರ್ವಕವಾಗಿ ರೈಲನ್ನು ಹಳಿ ತಪ್ಪಿಸುವ…