ಪ್ರವಾಹದ ನಡುವೆ ಪ್ರವಾಸಿಗರ ಜೀವ ಜೊತೆ ಚಲ್ಲಾಟ; ಹಣದಾಸೆಗೆ ನಾಡದೋಣಿ ಚಾಲಕರ ಹುಚ್ಚಾಟ | Koppal Flood Tourists Lives At Risk In Tungabhadra River
ತುಂಗಭದ್ರಾ ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಿಂದಾಗಿ ಗಂಗಾವತಿ ತಾಲೂಕಿನಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಕೆಲವು ನಾಡದೋಣಿ ಚಾಲಕರು ಪ್ರವಾಸಿಗರನ್ನು ಪ್ರವಾಹದ ನಡುವೆಯೂ ತೆಪ್ಪದಲ್ಲಿ ಕರೆದೊಯ್ಯುತ್ತಿದ್ದು, ಜಿಲ್ಲಾಡಳಿತದ ಎಚ್ಚರಿಕೆಯನ್ನು ಉಲ್ಲಂಘಿಸುತ್ತಿದ್ದಾರೆ. ಕೊಪ್ಪಳ (ಜುಲೈ.29) ತುಂಗಭದ್ರಾ ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ ಕಡೆಬಾಗಿಲದ ಬೇಲಿ ಬಳಿಯ ತುಂಗಭದ್ರಾ ನದಿಯಲ್ಲಿ ಪ್ರವಾಹದ ಸನ್ನಿವೇಶ ನಿರ್ಮಾಣವಾಗಿದೆ. ಈ ಸ್ಥಿತಿಯಲ್ಲೂ ಕೆಲವು ನಾಡದೋಣಿ ಚಾಲಕರು ಹಣದ ಆಸೆಗೆ ಬಿದ್ದು, ಪ್ರವಾಸಿಗರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ…