ಕೊನೆರು ಹಂಪಿ ಚೆಸ್ ವಿಶ್ವಕಪ್ ಸೋತಿದ್ದೇಗೆ? ದಿವ್ಯಾ ದೇಶ್‌ಮುಖ್ ಗೆಲುವಿನ ಗುಟ್ಟೇನು?
38 ವರ್ಷದ ಕೊನೆರು ಹಂಪಿಯವರಿಗೆ ನೂರಾರು ಅಂತರರಾಷ್ಟ್ರೀಯ ಪಂದ್ಯಗಳ ಅನುಭವವಿದೆ. ಆದರೆ, ಆತ್ಮವಿಶ್ವಾಸ, ತಾಳ್ಮೆ, ಯೋಜನೆ ವಿಷಯದಲ್ಲಿ ದಿವ್ಯಾ ಉತ್ತಮ ಪ್ರದರ್ಶನ ನೀಡಿದರು. ಹಂಪಿ ಪಂದ್ಯದ ನಂತರ “ನನಗೆ ಸಮಯದ ಸಮಸ್ಯೆಗಳು ಎದುರಾದವು” ಎಂದು ಒಪ್ಪಿಕೊಂಡಿದ್ದೇ ಇದಕ್ಕೆ ಸಾಕ್ಷಿ. ದಿವ್ಯಾ ಪ್ರತಿಯೊಂದು ಸಣ್ಣ ಅವಕಾಶವನ್ನು ಕರಾರುವಾಕ್ಕಾಗಿ ಬಳಸಿಕೊಂಡರು. ಚೆಸ್ ವಿಶ್ಲೇಷಕ ಆರ್‌ಜೆ ನಾರಾಯಣ್ ಮಾತನಾಡಿ, ಹಂಪಿ ಸಮಯ ನಿರ್ವಹಣೆಯಲ್ಲಿ ವಿಫಲರಾದರು. ರ‍್ಯಾಪಿಡ್ ಮಾದರಿಯಲ್ಲಿ ಅವರಲ್ಲಿ ಸ್ಪಷ್ಟತೆ ಕಾಣಲಿಲ್ಲ ಎಂದರು. ಇದೇ ಅವರ ಸೋಲಿಗೆ ಕಾರಣ ಎಂದು ತಿಳಿಸಿದರು….