ಬೆಳಗ್ಗೆದ್ದು 90 ನಿಮಿಷ ಇದಕ್ಕೆ ಮೀಸಲಿಡಿ, ಬೇಡ ಅಂದರೂ ಯಶಸ್ಸು ಹುಡುಕಿ ಬರುತ್ತೆ!
<p>ಬೆಳಗ್ಗೆ ಸರಿಯಾಗಿ ಆರಂಭವಾಗದಿದ್ದರೆ ಇಡೀ ದಿನ ವ್ಯರ್ಥ ಎಂದು ನೀವು ಎಂದಾದರೂ ಭಾವಿಸಿದ್ದೀರಾ?. ಅದು ನಿಜವೂ ಹೌದು. ನಿದ್ದೆಯಿಂದ ಎದ್ದ ನಂತರದ ಮೊದಲ 90 ನಿಮಿಷಗಳು ನಿಮ್ಮ ಮನಸ್ಥಿತಿ, ಶಕ್ತಿಯ ಮಟ್ಟ, ಮಾನಸಿಕ ಸ್ಪಷ್ಟತೆ ಮತ್ತು ಕೆಲಸದ ದಿಕ್ಕನ್ನು ನಿರ್ಧರಿಸುತ್ತವೆ ಎಂದು ವಿಜ್ಞಾನಿಗಳು ಮತ್ತು ಮಾನಸಿಕ ಆರೋಗ್ಯ ತಜ್ಞರು ಒಪ್ಪುತ್ತಾರೆ. ಈ ಸಮಯವನ್ನು ಸರಿಯಾಗಿ ನಿರ್ವಹಿಸಿದರೆ ಉತ್ಪಾದಕತೆ ಹೆಚ್ಚಾಗುವುದಲ್ಲದೆ, ಮಾನಸಿಕ ಆರೋಗ್ಯ ಮತ್ತು ದೇಹದ ಗಡಿಯಾರವೂ ಸ್ಥಿರವಾಗಿರುತ್ತದೆ. ಸಂಶೋಧನೆ ಮತ್ತು ತಜ್ಞರ ಅಭಿಪ್ರಾಯದಲ್ಲಿ ಬೆಳಗಿನ ಅಭ್ಯಾಸಗಳು ಇಡೀ…