ರೀಲ್ಸ್‌ಗಾಗಿ ರೈಲು ಪ್ರಯಾಣಿಕರ ಮೇಲೆ ಹಲ್ಲೆ: ಸ್ಕೂಟರ್ ಮೇಲೆ ಉರುಳಿ ಬಿದ್ದ ಕರೆಂಟ್ ಕಂಬ: ವೈರಲ್ ವೀಡಿಯೋ | Railway Police Crack Down On Youths For Attacking Passengers For Reels
ರೈಲಿನಲ್ಲಿ ಪ್ರಯಾಣಿಕರ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ ಘಟನೆ, ಚಲಿಸುತ್ತಿದ್ದ ಸ್ಕೂಟರ್ ಮೇಲೆ ಕರೆಂಟ್ ಕಂಬ ಬಿದ್ದ ಘಟನೆ ಹಾಗೂ ಪಂಜಾಬ್‌ನಲ್ಲಿ ನೀರಿನಲ್ಲಿ ಕೊಚ್ಚಿಹೋದ ಯುವಕರು ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೆಲ ಘಟನೆಗಳ ವೀಡಿಯೋ ಇಲ್ಲಿದೆ ನೋಡಿ. ದೆಹಲಿ/ಪಂಜಾಬ್/ಬಿಹಾರ: ರೈಲಿನ ಬಾಗಿಲಲ್ಲಿ ನಿಂತು ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಹೊರಗೆ ನಿಂತು ಕೋಲಿನಿಂದ ಹಲ್ಲೆ ಮಾಡಿದ ಇಬ್ಬರು ದುರುಳರನ್ನು ಪೊಲೀಸರು ಬಂಧಿಸಿದ್ದಾರೆ. ರೀಲ್ಸ್‌ಗಾಗಿ ಆರೋಪಿಗಳು ಈ ಕೃತ್ಯವೆಸಗಿದ್ದು, ರೀಲ್ಸ್ ನೋಡಿದ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿ ಕಂಬಿ…