ತಮ್ಮ ಪಾಲಿನ ಆಹಾರ ತಿನ್ತಿದ್ದ ನಾಯಿಗಳಿಗೆ ಆನೆಗಳೆರಡು ಸೇರಿ ಮಾಡಿದ್ದೇನು ನೋಡಿ: ವೀಡಿಯೋ ವೈರಲ್ | Clever Elephants Use Dirt To Deter Hungry Dogs Video Viral
ತಮ್ಮ ಪಾಲಿನ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಿದ್ದ ನಾಯಿಗಳನ್ನು ಓಡಿಸಲು ಆನೆಗಳು ಸೊಂಡಿಲಿನಿಂದ ಮಣ್ಣನ್ನು ಬಾಚಿ ಎಸೆದವು. ಈ ತಮಾಷೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆನೆಗಳು ಬಹಳ ಬುದ್ಧಿವಂತ ಪ್ರಾಣಿಗಳು. ತಮ್ಮ ಮರಿಗಳನ್ನು ರಕ್ಷಿಸುವುದರಿಂದ ಹಿಡಿದು ತಮ್ಮ ಪರಿವಾರವನ್ನು ಜೋಪಾನ ಮಾಡುವುದು ಆಹಾರವನ್ನು ಹುಡುಕುವುದು ಹೀಗೆ ಪ್ರತಿಯೊಂದರಲ್ಲೂ ಬಾಯಿ ಬರುವ ಮನುಷ್ಯಗಿಂತ ಮಾತು ಬಾರದ ಮೂಕ ಪ್ರಾಣಿಗಳು ತಮಗೂ ಬುದ್ಧಿ ಇದೆ ಎಂಬುದನ್ನು ಹಲವು ಬಾರಿ ಸಾಬೀತುಪಡಿಸಿವೆ. ತಮಗೆ ಹಾನಿ ಮಾಡದ ಹೊರತು ಇತರ ಪ್ರಾಣಿಗಳಿಗೆ…