ತೊರೆದು ಹೋಗುತ್ತಿರುವುದಕ್ಕೆ ಕ್ಷಮಿಸಿಬಿಡು ಕಂದ : ಪತ್ರದೊಂದಿಗೆ ನವಜಾತ ಕಂದನ ಬಿಟ್ಟು ಹೋದವರಾರು? | Mumbai Couple Leaves Newborn With Emotional Note Police Trace Parents
ಮುಂಬೈನಲ್ಲಿ ಮದುವೆಯಾಗದ ಜೋಡಿಯೊಂದು ತಮ್ಮ ನವಜಾತ ಶಿಶುವನ್ನು ಅನಾಥಾಶ್ರಮದ ಬಳಿ ಬಿಟ್ಟು ಹೋಗಿರುವ ಘಟನೆ ನಡೆದಿದೆ. ಪೊಲೀಸರು ಮಗುವಿನ ಪೋಷಕರನ್ನು ಪತ್ತೆ ಹಚ್ಚಿದ್ದು, ಮಗುವಿನ ಭವಿಷ್ಯದ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿ ನಿರ್ಧರಿಸಲಿದೆ. ಮದುವೆಯಾಗಿ ಮಕ್ಕಳಿಲ್ಲದವರದ್ದು ಮಕ್ಕಳಿಲ್ಲ ಎಂದು ಗೋಳಾದರೆ ಮಕ್ಕಳಿರುವ ಪೋಷಕರದ್ದು ಮಕ್ಕಳ ಸಾಕಲಾಗುತ್ತಿಲ್ಲ ಎಂಬ ಗೋಳು. ಹೀಗಿರುವಾಗ ಮದುವೆಯಾಗದೇ ಮಕ್ಕಳಾದ ಜೋಡಿಯೊಂದು ಸಮಾಜ ನಮ್ಮನ್ನೆಲ್ಲಿ ಕಳಂಕಿತರೆಂದು ಭಾವಿಸುವುದೋ ಎಂದು ತಮಗೆ ಜನಿಸಿದ ಪುಟ್ಟ ಕಂದನನ್ನು ಕ್ಷಮಿಸಿಬಿಡು ಕಂದ ಎಂದು ಬರೆದು ಅನಾಥಾಶ್ರಮವೊಂದರ ಮುಂದೆ ಬಿಟ್ಟು…