‘ಅಪ್ರಾಪ್ತೆಯೂ ಸೇರಿ 11 ಮಹಿಳೆಯರ ಮೇಲೆ ಅತ್ಯಾಚಾರ’; ವಿಂಡೀಸ್ ಸ್ಟಾರ್ ಕ್ರಿಕೆಟಿಗನ ಮೇಲೆ ಗಂಭೀರ ಆರೋಪ
ಪ್ರಸ್ತುತ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ (West Indies vs Australia) ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಇದರ ನಡುವೆ ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿರುವ ಗಂಭೀರ ಆರೋಪವೊಂದು ಇದೀಗ ಬೆಳಕಿಗೆ ಬಂದಿದೆ. ವಾಸ್ತವವಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಿರುವ ವಿಂಡೀಸ್ ಕ್ರಿಕೆಟ್ ತಂಡದ ಆಟಗಾರನ ವಿರುದ್ಧ ಅತ್ಯಾಚಾರದ ಆರೋಪ ಕೇಳಿಬಂದಿದೆ. ಕೆರಿಬಿಯನ್ ಮಾಧ್ಯಮಗಳಲ್ಲಿನ ವರದಿಯ ಪ್ರಕಾರ, ವೆಸ್ಟ್ ಇಂಡೀಸ್ ಕ್ರಿಕೆಟಿಗನ ಮೇಲೆ 11 ಮಹಿಳೆಯರು ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಅವರಲ್ಲಿ…