ICC: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 8 ನಿಯಮಗಳಲ್ಲಿ ಬದಲಾವಣೆ ತಂದ ಐಸಿಸಿ
ಜುಲೈ 2 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಬಹಳಷ್ಟು ಬದಲಾವಣೆಗಳು ಸಂಭವಿಸಲಿವೆ. ವಾಸ್ತವವಾಗಿ ಐಸಿಸಿ (ICC) ಅಂತರರಾಷ್ಟ್ರೀಯ ಕ್ರಿಕೆಟ್ಗಾಗಿ ಹಲವು ಹೊಸ ನಿಯಮಗಳನ್ನು ಅನುಮೋದಿಸಿದ್ದು, ಆಟದ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಗಳಲ್ಲಿ ಏಕದಿನ ಪಂದ್ಯಗಳಲ್ಲಿ 35 ನೇ ಓವರ್ನಿಂದ ಕೇವಲ ಒಂದು ಚೆಂಡನ್ನು ಬಳಸುವ ನಿಯಮವೂ ಸೇರಿದೆ. ಇದರೊಂದಿಗೆ ಐಸಿಸಿ ಟೆಸ್ಟ್ಗಳಲ್ಲಿ ಸ್ಟಾಪ್ ಕ್ಲಾಕ್ (Stop clock) ನಿಯಮವನ್ನು ಜಾರಿಗೆ ತಂದಿದೆ. ಪ್ರಮುಖವಾಗಿ ಐಸಿಸಿ 8 ನಿಯಮಗಳಲ್ಲಿ ಬದಲಾವಣೆ ತಂದಿದ್ದು, ಅದರಲ್ಲಿ ಯಾವ ಪ್ರಮುಖ ನಿಯಮಗಳನ್ನು ಬದಲಾಯಿಸಿದೆ…