ಬೇರೆ ಧರ್ಮದವನನ್ನು ಮದುವೆಯಾದ ಮಗಳ ಶ್ರಾದ್ಧ ಮಾಡಿದ ಅಪ್ಪ-ಅಮ್ಮ!
ಕೊಲ್ಕತ್ತಾ, ಜೂನ್ 24: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಯುವತಿಯೊಬ್ಬಳು ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಇದರಿಂದ ಆ ಯುವತಿಯ ಕುಟುಂಬ ಸದಸ್ಯರು ಆಕ್ರೋಶಗೊಂಡಿದ್ದಾರೆ. ಹೀಗಾಗಿ, ಆ ಯುವತಿ ಜೀವಂತವಾಗಿರುವಾಗಲೇ ಅವರು ಸಾಂಪ್ರದಾಯಿಕ ಹಿಂದೂ ಆಚರಣೆಗಳಂತೆ ಶ್ರಾದ್ಧ ಕಾರ್ಯ ಮಾಡಿದ್ದಾರೆ. ತಮ್ಮ ಮಗಳು ಇನ್ನೂ ಶಿಕ್ಷಣವನ್ನು ಪೂರ್ಣಗೊಳಿಸಿಲ್ಲ, ಆಕೆಯನ್ನು ಮರುಳು ಮಾಡಿ ಮದುವೆ ಮಾಡಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪದವಿಯನ್ನೂ ಪೂರ್ಣಗೊಳಿಸದ ತಮ್ಮ ಮಗಳು, ತಮ್ಮ ಒಪ್ಪಿಗೆಯಿಲ್ಲದೆ ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಅವರ ಕುಟುಂಬಕ್ಕೆ…