ಬೆಂಗಳೂರಲ್ಲಿ ‘ಮೆಟ್ರೋ ಇನ್ ದಿನೋ’ ಸಿನಿಮಾ ಪ್ರಚಾರ ಮಾಡಿದ ಸಾರಾ, ಆದಿತ್ಯ ರಾಯ್ ಕಪೂರ್
ಹಿಂದಿ ಸಿನಿಮಾಗಳಿಗೆ ಬೆಂಗಳೂರಲ್ಲಿ ದೊಡ್ಡ ಮಾರುಕಟ್ಟೆ ಇದೆ. ಹಲವು ಮಲ್ಟಿಪ್ಲೆಕ್ಸ್ಗಳಲ್ಲಿ ಬಾಲಿವುಡ್ (Bollywood) ಸಿನಿಮಾಗಳು ಉತ್ತಮವಾಗಿ ಪ್ರದರ್ಶನ ಕಾಣುತ್ತವೆ. ಹಾಗಾಗಿ ಚಿತ್ರತಂಡಗಳು ಬೆಂಗಳೂರಿಗೂ ಬಂದು ಪ್ರಚಾರ ಮಾಡುತ್ತವೆ. ಇತ್ತೀಚೆಗೆ ‘ಮೆಟ್ರೋ ಇನ್ ದಿನೋ’ (Metro in Dino) ಸಿನಿಮಾ ತಂಡ ಕೂಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿತು. ಈ ಸಿನಿಮಾಗೆ ಅನುರಾಗ್ ಬಸು ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಆದಿತ್ಯ ರಾಯ್ ಕಪೂರ್, ಸಾರಾ ಅಲಿ ಖಾನ್ ಮುಂತಾದವರು ನಟಿಸಿದ್ದಾರೆ. ಬೆಂಗಳೂರಿಗೆ ಬಂದು ಸಾರಾ ಅಲಿ ಖಾನ್ ಮತ್ತು…