ಯಶ್ ಶೆಟ್ಟಿ ನಟನೆಯ ‘ಜಂಗಲ್ ಮಂಗಲ್’ ಸಿನಿಮಾಗೆ ಶೀರ್ಷಿಕೆ ಕೊಟ್ಟ ಯೋಗರಾಜ್ ಭಟ್
ಜುಲೈ 4ರಂದು ‘ಜಂಗಲ್ ಮಂಗಲ್’ (Jungle Mangal) ಸಿನಿಮಾ ಬಿಡುಗಡೆ ಆಗಲಿದೆ. ರಕ್ಷಿತ್ ಕುಮಾರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಯಶ್ ಶೆಟ್ಟಿ (Yash Shetty) ಮತ್ತು ಹರ್ಷಿತಾ ರಾಮಚಂದ್ರ (Harshitha Ramachandra) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಇತ್ತೀಚೆಗೆ ‘ಜಂಗಲ್ ಮಂಗಲ್’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ನಿರ್ದೇಶಕ ರಕ್ಷಿತ್ ಕುಮಾರ್ ಅವರು ಇಂಟರೆಸ್ಟಿಂಗ್ ವಿಷಯ ಹಂಚಿಕೊಂಡರು. ‘ನಾನು ಇಬ್ಬರು ಖ್ಯಾತ ನಿರ್ದೇಶಕರಿಗೆ ಮೊದಲು ಧನ್ಯವಾದ ಹೇಳಬೇಕು’ ಎಂದು ಅವರು…