ವಿದ್ಯುತ್ ಕನಿಷ್ಠ ಶುಲ್ಕಕ್ಕೆ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು, ಜೂನ್ 25: ವಿದ್ಯುತ್ ಕನಿಷ್ಠ ಶುಲ್ಕಗಳ ಮೇಲೆ ತೆರಿಗೆ (Minimum electricity charges Tax) ವಿಧಿಸುವಂತಿಲ್ಲ. ಬಳಸಿದ ವಿದ್ಯುತ್ ಶುಲ್ಕಕ್ಕೆ ಮಾತ್ರ ತೆರಿಗೆ ವಿಧಿಸಬಹುದು. ಬಳಸದ ವಿದ್ಯುತ್ಗೆ ಗ್ರಾಹಕರು ತೆರಿಗೆ ಕಟ್ಟಬೇಕಿಲ್ಲ ಎಂದು ಹೈಕೋರ್ಟ್ (High Court) ಆದೇಶ ನೀಡಿದೆ. ಜೊತೆಗೆ ಕರ್ನಾಟಕ ವಿದ್ಯುತ್ ಕಾಯ್ದೆ ಸೆಕ್ಷನ್ 3 (1) ರ ತಿದ್ದುಪಡಿಯನ್ನು ನ್ಯಾ.ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಹೈಕೋರ್ಟ್ ಪೀಠ ರದ್ದುಪಡಿಸಿದೆ. ಏನಿದು ಪ್ರಕರಣ? ಕರ್ನಾಟಕ ವಿದ್ಯುತ್ (ಬಳಕೆಯ ಮೇಲಿನ ತೆರಿಗೆ) ಕಾಯ್ದೆ 1959ರ…