ಹೈ ಲೆವೆಲ್ ಸೆಕ್ಯೂರಿಟಿ ಇರುವ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲೇ ಚಿನ್ನ ಕಳ್ಳತನ | Theft At Kerala High Court Judges Home Raises Security Concerns
ಕೇರಳ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ಆರು ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ಈ ಚಿನ್ನಾಭರಣವು ನ್ಯಾಯಾಧೀಶರ ಖಾಸಗಿ ಕಾರ್ಯದರ್ಶಿಗೆ ಸೇರಿದ್ದಾಗಿದೆ. ಕೊಚ್ಚಿಯ ಕಲಮಸ್ಸೆರಿಯಲ್ಲಿರುವ ಭಾರಿ ಭದ್ರತೆ ಇರುವ ನಿವಾಸದಲ್ಲಿ ಈ ಘಟನೆ ನಡೆದಿದೆ. ದೇಶದ ಸುಪ್ರೀಂಕೋರ್ಟ್ ಹೈಕೋರ್ಟ್ ಜಿಲ್ಲಾ ಕೋರ್ಟ್ ಸೇರಿದಂತೆ ಎಲ್ಲಾ ನ್ಯಾಯಾಲಗಳ ನ್ಯಾಯಾಧೀಶರಿಗೆ ಅತ್ಯಂತ ಉನ್ನತ ದರ್ಜೆಯ ಭದ್ರತೆಯನ್ನು ನೀಡಿರಲಾಗಿರುತ್ತದೆ. ಆದರೆ ಇಂತಹ ಭದ್ರತೆಯನ್ನು ದಾಟಿ ಬಂದು ನ್ಯಾಯಾಧೀಶರೊಬ್ಬರ ಮನೆಯಲ್ಲಿ ಕಳ್ಳತನ ನಡೆದಿದೆ. ಹೌದು ಅಚ್ಚರಿ ಆದರೂ ಸತ್ಯ, ಕೇರಳ ಹೈಕೋರ್ಟ್‌ನ ನ್ಯಾಯಾಧೀಶರ ಮನೆಯಲ್ಲೇ ಕಳ್ಳತನ…