ಅಂಡರ್‌ವೇರ್‌ಗೂ ಇದ್ಯಾ ಎಕ್ಸ್‌ಪೈರಿ ಡೇಟ್? ಒಂದು ಒಳ ಉಡುಪನ್ನು ಎಷ್ಟು ಬಾರಿ ಧರಿಸಬಹುದು
ಒಳ ಉಡುಪು (Undergarment) ದೇಹವನ್ನು ಮುಚ್ಚುವುದು ಮಾತ್ರವಲ್ಲದೆ ಖಾಸಗಿ ಅಂಗಗಳ ಆರೋಗ್ಯವನ್ನು ಕಾಯ್ದುಕೊಳ್ಳುವ ವಸ್ತ್ರವೂ ಆಗಿದೆ. ಆದರೆ ಅನೇಕರು ಒಳ ಉಡುಪುಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಹೌದು ಹೆಚ್ಚಿನವರು ಇದರ ಗುಣಮಟ್ಟದ ಬಗ್ಗೆ ಗಮನ ಹರಿಸುವುದಿಲ್ಲ, ಸ್ವಚ್ಛಗೊಳಿಸದೇ ಒಂದೇ ಅಂಡರ್‌ವೇರನ್ನು ಪದೇ ಪದೇ ಹಾಕಿಕೊಳ್ಳುತ್ತಾರೆ. ಹೀಗೆ ಒಂದಷ್ಟು ಬೇಜವಾಬ್ದಾರಿ ತೋರುತ್ತಾರೆ. ಈ ರೀತಿ ಮಾಡುವುದರಿಂದ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಒಳಉಡುಪಿನ ಸರಿಯಾದ ಆಯ್ಕೆ ಮತ್ತು ಸ್ವಚ್ಛತೆಯ ಬಗ್ಗೆ ಗಮನ ಹರಿಸುವಂತೆ, ಒಂದು…