Karnataka Groundwater Report 2025 ಕರ್ನಾಟಕದಲ್ಲಿ ಅಂತರ್ಜಲ ಬಳಕೆ ಗಣನೀಯ ಇಳಿಕೆ, ಭೂಗರ್ಭದಲ್ಲಿ ಅಚ್ಚರಿಯ ತಿರುವು! | Groundwater Use Declines In Karnataka As Conservation Efforts Show Results Gdp
2025ನೇ ಸಾಲಿನ ಅಂತರ್ಜಲ ಮೌಲ್ಯಮಾಪನ ವರದಿಯ ಪ್ರಕಾರ, ರಾಜ್ಯದಲ್ಲಿ ಉತ್ತಮ ಮಳೆ ಮತ್ತು ಜಲಸಂರಕ್ಷಣಾ ಕ್ರಮಗಳಿಂದಾಗಿ ಅಂತರ್ಜಲ ಬಳಕೆಯು ಗಣನೀಯವಾಗಿ ಕಡಿಮೆಯಾಗಿದೆ. ಇದರ ಪರಿಣಾಮವಾಗಿ, ಅಂತರ್ಜಲ ಮರುಪೂರಣ ಸಾಮರ್ಥ್ಯವು ಹೆಚ್ಚಾಗಿದ್ದು, 11 ತಾಲೂಕುಗಳ ಅಂತರ್ಜಲ ಸ್ಥಿತಿಗತಿಯಲ್ಲಿ ಸುಧಾರಣೆ ಕಂಡುಬಂದಿದೆ. ಬೆಂಗಳೂರು: ರಾಜ್ಯದಲ್ಲಿ ಅಂತರ್ಜಲ ಬಳಕೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಜಲಸಂರಕ್ಷಣಾ ಕ್ರಮಗಳು ಮತ್ತು ಉತ್ತಮ ಮಳೆಯ ಪರಿಣಾಮವಾಗಿ ಅಂತರ್ಜಲ ಮರುಪೂರಣ ಸಾಮರ್ಥ್ಯದಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ. ಈ ಮಾಹಿತಿಯನ್ನು 2025ನೇ ಸಾಲಿನ ಅಂತರ್ಜಲ ಮೌಲ್ಯಮಾಪನ ವರದಿಯಲ್ಲಿ ಬಹಿರಂಗಪಡಿಸಲಾಗಿದ್ದು,…