ಗ್ಯಾಸ್ ಉಳಿಸೋಕೆ ಹೋಗಿ ಕರೆಂಟ್ ಬಿಲ್ ಹೆಚ್ಚಾಯ್ತು, ಇಂಡಕ್ಷನ್ ಬಳಕೆ ಮುನ್ನ ಇದು ತಿಳಿದುಕೊಳ್ಳಿ
<p>ಗ್ಯಾಸ್ ಸಿಗ್ತಿಲ್ಲ, ಜನ ಇಂಡಕ್ಷನ್ ಸ್ಟೌವ್ ಮೊರೆ ಹೋಗ್ತಿದ್ದಾರೆ. ಪ್ರತಿ ದಿನ ಅನೇಕ ಸಮಯ ಇಂಡಕ್ಷನ್ ಸ್ವೌವ್ ಉರಿಸಿದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ. ಇಂಡಕ್ಷನ್ ಕುಕ್ಟಾಪ್ಗಳನ್ನು ಬುದ್ಧಿವಂತಿಕೆಯಿಂದ ಬಳಸುವುದರಿಂದ ಅಡುಗೆ ಸುಲಭವಾಗುವುದಲ್ಲದೆ ಕರೆಂಟ್ ಉಳಿಸ್ಬಹುದು.</p><p> </p><img><p>ಇಂಡಕ್ಷನ್ ಕುಕ್ಟಾಪ್ಗಳಲ್ಲಿ ಅಡುಗೆ ಮಾಡೋದು ಗ್ಯಾಸ್ ನಷ್ಟು ಸುಲಭವಲ್ಲ. ಆದ್ರೆ ಇಂಡಕ್ಷನ್ ಕುಕ್ ಟಾಪ್ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇದ್ರೆ ಅದನ್ನು ಬಳಸೋದು ಸುಲಭ. ಸರಿಯಾದ ವಿಧಾನ ಬಳಸಿದ್ರೆ ಕಡಿಮೆ ಸಮಯದಲ್ಲಿ ರುಚಿಕರವಾದ ಆಹಾರ ತಯಾರಿಸ್ಬಹುದು. ಇಂಡಕ್ಷನ್ ಕುಕ್ಟಾಪ್ಗಳಲ್ಲಿ ಕರೆಂಟ್…