ಲಟ್ಟಿಸುವಾಗ ಒಣ ಹಿಟ್ಟಲ್ಲ, ಈ ಪದಾರ್ಥ ಬಳಸಿ ಚಪಾತಿ ಹೂವಿನಂತೆ ಅರಳಿ 2-3 ದಿನದವರೆಗೆ ಮೃದುವಾಗಿರುತ್ತೆ
<p>Soft Roti Hacks: ಬೆಳಗಿನ ಉಪಹಾರವಿರಲಿ ಅಥವಾ ರಾತ್ರಿಯ ಊಟವಿರಲಿ, ಬಿಸಿಬಿಸಿ ಚಪಾತಿ ಇದ್ದರೆ ಆ ಮಜವೇ ಬೇರೆ. ಅಂದಹಾಗೆ ಚಪಾತಿ ತಯಾರಿಸುವುದು ಕೂಡ ಒಂದು ಕಲೆ. ಸರಿಯಾದ ಕ್ರಮ ಅನುಸರಿಸಿದರೆ ಮಾತ್ರ ಅದು ದೀರ್ಘಕಾಲದವರೆಗೆ ಮೃದುವಾಗಿರಲು ಸಾಧ್ಯ. </p><p> </p><img><p>ಎಲ್ಲರಿಗೂ ತಿಳಿದಿರುವಂತೆ ಚಪಾತಿ ಭಾರತೀಯ ಆಹಾರದ ಒಂದು ಪ್ರಮುಖ ಭಾಗ. ಎಲ್ಲರ ಕೈಗುಣ ಒಂದೇ ರೀತಿ ಇರುವುದಿಲ್ಲ. ಕೆಲವರು ಮಾಡಿದ ಚಪಾತಿ ತುಂಬಾ ಮೃದುವಾಗಿದ್ದರೆ, ಇನ್ನು ಕೆಲವರು ಮಾಡಿದ್ದು ಖಡಕ್ ಆಗಿರುತ್ತದೆ. ಆದರೆ ಕೆಲವು ಸಣ್ಣ ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ…