ಹಿಂದೂ ಯುವತಿ ಜೊತೆ ವಿವಾಹಿತ ಮುಸ್ಲಿಂ ವ್ಯಕ್ತಿ ಪರಾರಿ: ಲವ್ ಜಿಹಾದ್ಗೆ ಒಳಗಾದ ಮಗಳನ್ನು ಹುಡುಕಿಕೊಡಿ ಎಂದು ತಾಯಿಯ ಅಳಲು
ಹುಬ್ಬಳ್ಳಿ, ಏಪ್ರಿಲ್ 08: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾಲು ಸಾಲು ಲವ್ ಜಿಹಾದ್ ಆರೋಪ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಇವುಗಳ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ, ತನ್ನ ಮಗಳನ್ನು ಮುಸ್ಲಿಂ ಸಮುದಾಯದ ವಿವಾಹಿತ ವ್ಯಕ್ತಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಜೊತಗೆ ಮನೆ ಖರೀದಿಸಲು ನೀಡಿದ್ದ ಹತ್ತು ಲಕ್ಷ ಹಣ ಕೂಡ ತೆಗೆದುಕೊಂಡಿದ್ದಾನೆ. ಈಗ ಹಣವೂ ಇಲ್ಲ, ಮಗಳೂ ಇಲ್ಲ ಎಂಬಂತಾಗಿದೆ. ದಯವಿಟ್ಟು ಮಗಳನ್ನು ಹುಡುಕಿ ಕೊಡಿ ಎಂದು ತಾಯಿಯೊಬ್ಬಳು ಮನವಿ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ…