ರಾತ್ರಿ ಮಲಗಿದ್ದವರ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ! ಆರು ಜನರ ಸ್ಥಿತಿ ಗಂಭೀರ
ಗದಗ, ಏಪ್ರಿಲ್ 08: ಜಿಲ್ಲೆಯ ಮುಂಡರಗಿ (ಗದಗ) ತಾಲೂಕಿನ ಡೋಣಿ ತಾಂಡಾದಲ್ಲಿ ನಡುರಾತ್ರಿ ನಡೆದ ಭೀಕರ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮನೆಯ ಮುಂಭಾಗ ನಿದ್ರೆಯಲ್ಲಿ ಮಲಗಿದ್ದ ಆರು ಜನರ ಗ್ರಾಮದ ವ್ಯಕ್ತಿಯೊಬ್ಬನು ಮಾರಣಾಂತಿಕ ಹಲ್ಲೆ ನಡೆಸಿರುವುದು ಆತಂಕ ಸೃಷ್ಟಿಸಿದೆ. ಹಲವರ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಂಡಾ ನಿವಾಸಿಗಳು ಕಂಗಾಲು ಘಟನೆ ತಡರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ನಡೆದಿದ್ದು, ಹರ್ಜಪ್ಪ ಲಮಾಣಿ ಎಂಬ ವ್ಯಕ್ತಿ ದೊಣ್ಣೆಯಿಂದ ಮಲಗಿದ್ದವರ ಹಲ್ಲೆ ಮನಸೋಇಚ್ಛೆ ಮಾಡಿದ್ದಾನೆ. ಹಲ್ಲೆಗೊಳಗಾದ ಎಲ್ಲರೂ ರಕ್ತದ ಮಡುವಿನಲ್ಲಿ…