Headlines

ಈ ರಾಜ್ಯದ ಹೆಣ್ಮಕ್ಕಳು ಬಹಳ ಬೇಗ ಸಾಯ್ತಾರೆ!

ಈ ರಾಜ್ಯದ ಹೆಣ್ಮಕ್ಕಳು ಬಹಳ ಬೇಗ ಸಾಯ್ತಾರೆ!

ಭಾರತದ ಈ ರಾಜ್ಯದಲ್ಲಿ ಮಹಿಳೆಯರ ಸರಾಸರಿ ಜೀವಿತಾವಧಿ ತುಂಬಾನೆ ಕಡಿಮೆ ಇದೆಯಂತೆ. ಆ ರಾಜ್ಯ ಯಾವುದು? ಅಲ್ಲಿ ಮಹಿಳೆಯರ ಜೀವಿತಾವಧಿ ಎಷ್ಟಿದೆ ಅನ್ನೋದನ್ನು ನೋಡೋಣ.

ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದು ಜನರು ಹೇಳುವುದನ್ನು ನೀವು ಹೆಚ್ಚಾಗಿ ಕೇಳಿರಬೇಕು. ಸಾಮಾನ್ಯವಾಗಿ ನಾವು ನೋಡಿದ್ರೆ, ಗಂಡಸರೇ ಬೇಗನೆ ಸಾವನ್ನಪ್ಪುತ್ತಾರೆ. ಆದರೆ ಮಹಿಳೆಯರು ತುಂಬಾ ಸಮಯದವರೆಗೂ ಆರೋಗ್ಯವಾಗಿರೋದನ್ನು ನಾವು ನೋಡ್ತೀವಿ.

ಹೆಚ್ಚಾಗಿ ನಮ್ಮ ಫ್ಯಾಮಿಲಿಯನ್ನೇ ತೆಗೆದುಕೊಂಡರೆ, ಅಲ್ಲಿ ಅಜ್ಜಿ ಮುತ್ತಜ್ಜಿಯರು ಬದುಕಿರೋದನ್ನು ಕಾಣುತ್ತೇವೆ. ಆದರೆ ಹೆಚ್ಚಿನ ಕುಟುಂಬಗಳಲ್ಲಿ ಅಜ್ಜಂದಿರು ಇರೋದೆ ಇಲ್ಲ. ಅದಕ್ಕಾಗಿಯೇ ಹೇಳೋದು ಹೆಣ್ಣುಮಕ್ಕಳ ಜೀವಿತಾವಧಿ ಹೆಚ್ಚು ಎಂದು.

ಆದರೆ ಮಹಿಳೆಯರ ಸರಾಸರಿ ಜೀವಿತಾವಧಿ (lifespan) ಅತ್ಯಂತ ಕಡಿಮೆ ಇರುವ ಭಾರತದ ಆ ರಾಜ್ಯದ ಬಗ್ಗೆ ನಿಮಗೆ ತಿಳಿದಿದೆಯೇ? ಇವತ್ತು ಆ ರಾಜ್ಯದ ಬಗ್ಗೆ ನಾವು ಮಾಹಿತಿ ನೀಡುತ್ತೇವೆ. ಈ ರಾಜ್ಯದಲ್ಲಿ ಮಹಿಳೆಯರು ಬೇಗನೆ ಸಾಯುತ್ತಾರಂತೆ.

ಆ ರಾಜ್ಯ ಯಾವುದು ಅನ್ನೋದು ಗೊತ್ತಾಗಿದ್ಯಾ? ಇವತ್ತು ನಾವು ಮಾತನಾಡುತ್ತಿರುವ ರಾಜ್ಯ ಜಾರ್ಖಂಡ್ (Jarkhand). ಹಾಗಿದ್ರೆ ಈ ರಾಜ್ಯದಲ್ಲಿ ಮಹಿಳೆಯರ ಜೀವಿತಾವಧಿ ಎಷ್ಟು? ಹಾಗೂ ಪುರುಷರ ಜೀವಿತಾವಧಿ ಎಷ್ಟು ಅನ್ನೋದನ್ನು ನೋಡೋಣ.

ಪುರುಷರಿಗಿಂತ ಮಹಿಳೆಯರ ಜೀವಿತಾವಧಿ ಕಡಿಮೆ ಇರುವ ರಾಜ್ಯ ಜಾರ್ಖಂಡ್ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಭಾರತ ವೃದ್ಧಾಪ್ಯದ ವರದಿಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ.

2016 ಮತ್ತು 2020 ರ ನಡುವೆ, ಜಾರ್ಖಂಡ್‌ನಲ್ಲಿ ಪುರುಷರ ಸರಾಸರಿ ವಯಸ್ಸು 70.5 ವರ್ಷಗಳು ಮತ್ತು ಮಹಿಳೆಯರ ಸರಾಸರಿ ವಯಸ್ಸು 68.9 ವರ್ಷಗಳು, ಆದರೆ 2017 ಮತ್ತು 2021 ರ ನಡುವೆ, ಪುರುಷರ ವಯಸ್ಸು 69.5 ವರ್ಷಗಳು ಮತ್ತು ಮಹಿಳೆಯರ ವಯಸ್ಸು 69.6 ವರ್ಷಗಳು ಎಂದು ದಾಖಲಾಗಿದೆ.

Source link

Leave a Reply

Your email address will not be published. Required fields are marked *