ಸೀತಾರಾಮ, ಅಗ್ನಿಸಾಕ್ಷಿ, ದೇವಿ ಧಾರಾವಾಹಿಗಳಲ್ಲಿ ನಟಿಸಿದ್ದ ವೈಷ್ಣವಿ ಗೌಡ ಅವರು 32ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈಗ ಅವರು ಹನಿಮೂನ್ ಮೂಡ್‌ನಲ್ಲಿದ್ದಾರೆ.

ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಉತ್ತರ ಪ್ರದೇಶದ ಹುಡುಗನ ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥ, ಮದುವೆ ಮಾಡಿಕೊಂಡಿದ್ದರು. ಈ ಅದ್ದೂರಿ ಮದುವೆಗೆ ಚಿತ್ರರಂಗದ ಗಣ್ಯರು ಆಗಮಿಸಿದ್ದರು.

ನಟಿ ವೈಷ್ಣವಿ ಗೌಡ ಅವರು ಅನುಕೂಲ್ ಮಿಶ್ರಾ ಜೊತೆ ಮದುವೆಯಾಗಿದ್ದಾರೆ. ಇಂಡಿಯನ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಮ್ಯಾಟ್ರಿಮೋನಿಯಲ್ಲಿ ಹುಡುಕಿದ ಸಂಬಂಧ ಇದಾಗಿತ್ತು. ಪಕ್ಕಾ ಅರೇಂಜ್ ಮ್ಯಾರೇಜ್ ಅಂತೆ. ಒಂದು ವರ್ಷದ ಹಿಂದೆಯೇ ಇವರ ಮದುವೆ ಫಿಕ್ಸ್ ಆಗಿತ್ತು.

ಸೀತಾರಾಮ ಧಾರಾವಾಹಿ ಮುಗಿಯುತ್ತಿದ್ದಂತೆಯೇ ವೈಷ್ಣವಿ ಗೌಡ ಅವರ ಮದುವೆ ನಡೆಯಿತು. ಈಗ ಉತ್ತರಾಖಂಡದಲ್ಲಿ ಅವರು ಗಂಡನ ಜೊತೆ ಒಂದಷ್ಟು ಸುಂದರ ಸಮಯ ಕಳೆಯುತ್ತಿದ್ದಾರೆ.

ಅಂದಹಾಗೆ ಅನುಕೂಲ್ ಮಿಶ್ರಾ, ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ.

ಅನುಕೂಲ್ ಮಿಶ್ರಾ ಅವರು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವೈಷ್ಣವಿ ಗೌಡ ಕೂಡ ಬೆಂಗಳೂರಿನಲ್ಲಿಯೇ ನೆಲೆಸುತ್ತಾರೆ. ಮುಂದಿನ ದಿನಗಳಲ್ಲಿ ಅವರು ಸಿನಿಮಾ, ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲೂಬಹುದು.

Source link
ಉತ್ತರಾಖಂಡಕ್ಕೆ ಹಾರಿದ ಸೀತಾರಾಮ ಧಾರಾವಾಹಿ Actress Vaishnavi Gowda; ಹನಿಮೂನ್ PHOTOS!