Headlines

ಕಡಿಮೆ ಹಣದುಬ್ಬರ, ಹೆಚ್ಚು ಉದ್ಯೋಗ, ಉತ್ತಮ ರಫ್ತು: ಉತ್ತಮ ಮುನ್ನಡೆಯಲ್ಲಿ ಭಾರತದ ಆರ್ಥಿಕತೆ

ಕಡಿಮೆ ಹಣದುಬ್ಬರ, ಹೆಚ್ಚು ಉದ್ಯೋಗ, ಉತ್ತಮ ರಫ್ತು: ಉತ್ತಮ ಮುನ್ನಡೆಯಲ್ಲಿ ಭಾರತದ ಆರ್ಥಿಕತೆ


ನವದೆಹಲಿ, ಜೂನ್ 29: ಜಾಗತಿಕವಾಗಿ ಅನಿಶ್ಚಿತ ಪರಿಸ್ಥಿತಿ ನೆಲಸಿದ್ದರೂ ಭಾರತದ ಸ್ಥಿತಿ ಹೆಚ್ಚು ಆಶಾದಾಯಕ ಎನಿಸಿದೆ ಎಂದು ಹೇಳಲಾಗುತ್ತಿದೆ. ಈ ಅಭಿಪ್ರಾಯಕ್ಕೆ ಇಂಬು ನೀಡುವಂತೆ ಭಾರತದ ವಿವಿಧ ಆರ್ಥಿಕ ಸೂಚಕಗಳು (India’s economic indicators) ಭರವಸೆ ಮೂಡಿಸುವಂತಿವೆ. ಹಣಕಾಸು ಸಚಿವಾಲಯವು ಈ ವಾರಾಂತ್ಯದಲ್ಲಿ ಬಿಡುಗಡೆ ಮಾಡಿದ ಮೇ ತಿಂಗಳ ಮಾಸಿಕ ಆರ್ಥಿಕ ಪರಾಮರ್ಶೆ (Monthly economic review) ವರದಿಯಲ್ಲಿ ಸಕಾರಾತ್ಮಕ ಅಭಿಪ್ರಾಯ ನೀಡಿದೆ.

ಇ-ವೇ ಬಿಲ್, ಇಂಧನ ಬಳಕೆ ಇತ್ಯಾದಿ ಹೈ ಫ್ರೀಕ್ವೆನ್ಸಿ ಸೂಚಕಗಳು ಉತ್ತಮ ಮಟ್ಟದಲ್ಲಿದ್ದು, ತೀವ್ರ ಆರ್ಥಿಕ ಚಟುವಟಿಕೆ ನಡೆಯುತ್ತಿರುವುದರ ದಟ್ಟ ಸುಳಿವನ್ನು ನೀಡಿವೆ. ಉದ್ದಿಮೆಗಳ ಚಟುವಟಿಕೆ ತೀವ್ರತೆಯನ್ನು ತೋರಿಸುವ ಪಿಎಂಐ ಸೂಚಕಗಳೂ ಕೂಡ ಆಶಾದಾಯಕ ಎನಿಸಿವೆ ಎಂದು ಆರ್ಥಿಕ ಪರಾಮರ್ಶೆ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ನೌಕರರ ಭವಿಷ್ಯ ನಿಧಿ: ಹೈಯರ್ ಪೆನ್ಷನ್ ಸಮಸ್ಯೆಗೆ ಶೀಘ್ರ ಪರಿಹಾರ, ಸಚಿವೆ ಶೋಭಾ ಕರಂದ್ಲಾಜೆ ಭರವಸೆ

ಮುಂಗಾರು ಸೀಸನ್ ಭರವಸೆ ಮೂಡಿಸಿದೆ. ಮುಂಗಾರು ಬೆಳೆ ಕಟಾವು ಉತ್ತಮವಾಗಿ ಆಗಿದೆ. ಇದರಿಂದ ಗ್ರಾಮೀಣ ಬೇಡಿಕೆ ಹೆಚ್ಚಿದೆ. ಮೇ ತಿಂಗಳಲ್ಲಿ ಆಹಾರ ಹಣದುಬ್ಬರ ಕೆಳಗಿನ ಮಟ್ಟದಲ್ಲೇ ಇದೆ. ಆಂತರಿಕ ಆರ್ಥಿಕ ಸೂಚಕಗಳು ಸಕಾರಾತ್ಮಕವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸರ್ಕಾರದ ಬಾಂಡ್​​ಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಆರ್​​ಬಿಐನಿಂದ ಸರ್ಕಾರಕ್ಕೆ ಭರ್ಜರಿ ಡಿವಿಡೆಂಡ್ ದೊರಕಿದೆ. ಒಟ್ಟು ರಫ್ತು ಮೇ ತಿಂಗಳಲ್ಲಿ ಶೇ. 2.8ರಷ್ಟು ಏರಿದೆ. ಟ್ಯಾರಿಫ್ ಅನಿಶ್ಚಿತತೆಯ ಸ್ಥಿತಿ ಇರುವುದು ಮತ್ತು ಜಾಗತಿಕ ಆರ್ಥಿಕತೆ ಮಂದಗೊಂಡಿರುವುದು ಇತ್ಯಾದಿ ಹಿನ್ನಡೆಗಳ ನಡುವೆಯೂ ರಫ್ತು ಹೆಚ್ಚಿರುವುದು ಗಮನಾರ್ಹ ಎಂದು ಗುರುತಿಸಿದೆ.

ಇದನ್ನೂ ಓದಿ: ಭಾರತ ಮತ್ತು ಅಮೆರಿಕ ಮಧ್ಯೆ ದೊಡ್ಡ ವ್ಯಾಪಾರ ಒಪ್ಪಂದ? ಸುಳಿವು ನೀಡಿದ ಡೊನಾಲ್ಡ್ ಟ್ರಂಪ್

ಭಾರತದ ಫಾರೆಕ್ಸ್ ಕೂಡ ಆರೋಗ್ಯಕರ ಮಟ್ಟದಲ್ಲಿ ಇದೆ. ಜೂನ್ 13ರಂದು ಫಾರೆಕ್ಸ್ ರಿಸರ್ವ್ಸ್ 699 ಬಿಲಿಯನ್ ಡಾಲರ್​​ನಷ್ಟು ಇತ್ತು. ಅಂದರೆ ಸುಮಾರು 11-12 ತಿಂಗಳಿಗಾಗುವಷ್ಟು ಆಮದನ್ನು ಇದು ತಡೆದುಕೊಳ್ಳಬಹುದು.

ಕಾರ್ಮಿಕ, ಉದ್ಯೋಗ ಸೂಚಕಗಳೂ ಕೂಡ ಉತ್ತಮ ಎನಿಸಿವೆ. ಖಾಸಗಿ ಅನುಭೋಗ ಚೆನ್ನಾಗಿ ಆಗುತ್ತಿದೆ. ಸರ್ವಿಸ್ ಸೆಕ್ಟರ್​​ನಲ್ಲಿ ತೀವ್ರ ಚಟುವಟಿಕೆ ಆಗುತ್ತಿದೆ. ಇವೆಲ್ಲವೂ ಭಾರತದ ಆರ್ಥಿಕತೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದೆ ಎಂದು ಹಣಕಾಸ ಸಚಿವಾಲಯದ ಮಾಸಿಕ ಪರಾಮರ್ಶೆ ವರದಿಯಲ್ಲಿ ಗುರುತಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *