ಅರ್ಜೆಂಟೀನಾದ ಆಸ್ಪತ್ರೆಯೊಂದರಲ್ಲಿ ಮಧ್ಯರಾತ್ರಿ ಸಿಸಿಟಿವಿಯಲ್ಲಿ ಸೆರೆಯಾದ ವಿಚಿತ್ರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಸ್ಪತ್ರೆಗಳಲ್ಲಿ ದೆವ್ವ ಪ್ರೇತಾತ್ಮಗಳ ಕತೆಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಕೆಲವು ಪ್ರಸಿದ್ಧ ಸ್ಥಳಗಳಲ್ಲಿ ಪ್ರೇತಾತ್ಮಗಳು ಓಡಾಡುತ್ತಿವೆ ಎಂದು ಅನೇಕರು ಹೇಳಿಕೊಂಡಿದ್ದಾರೆ. ಕೆಲವು ಸೆಲೆಬ್ರಿಟಿಗಳು ಕೂಡ ತಮಗೆ ಪ್ರೇತಾತ್ಮಗಳ ಇರುವಿಕೆಯ ಅನುಭವ ಆದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಜನರ ನಂಬಿಕೆಗಳಿಗೆ ಪುಷ್ಠಿ ನೀಡುವಂತೆ ಇಂತಹ ಕೆಲವು ಘಟನೆಗಳು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಆಸ್ಪತ್ರೆಯೊಂದರ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡುಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕಣ್ಣಿಗೆ ಕಾಣದ ವ್ಯಕ್ತಿ ಜೊತೆ ಗಾರ್ಡ್ ಮಾತು
ಸಾಮಾನ್ಯವಾಗಿ ಆಸ್ಪತ್ರೆಗೆ ನೀವು ಭೇಟಿ ನೀಡಿದ ಕೂಡಲೇ ಅಲ್ಲಿರುವ ರಿಸೆಪ್ಷನ್‌ನಿಶ್ಟ್‌ಗಳು ಅಥವಾ ಅಲ್ಲಿರುವ ಇತರ ಯಾರಾದರೂ ನಿರ್ವಾಹಕರು ನಿಮ್ಮನ್ನು ಕೂಡಲೇ ವಿಚಾರಿಸಿ ಮುಂದಿನ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾರೆ. ಯಾವುದೇ ಸಮಯದಲ್ಲಿ ಹೋದರೂ ಆಸ್ಪತ್ರೆಯಲ್ಲಿ ರೋಗಿಗಳ ನೋಡುವುದಕ್ಕಾಗಿ ಒಬ್ಬರು ಇದ್ದೇ ಇರುತ್ತಾರೆ. ಅದು ನಡುರಾತ್ರಿಯಾದರೂ ಆಗಿರಬಹುದು. ಆದರೆ ಇಲ್ಲಿ ಸಿಸಿಟಿವಿಯಲ್ಲಿ ರೆಕಾರ್ಡ್ ಅಗಿರುವ ದೃಶ್ಯಾವಳಿಯೊಂದರಲ್ಲಿ ಆಸ್ಪತ್ರೆಯೊಂದರ ರಿಸೆಪ್ಷನ್‌ನಲ್ಲಿ ಕುಳಿತಿರುವ ವ್ಯಕ್ತಿಯೊಬ್ಬರು ಕಣ್ಣಿಗೆ ಕಾಣದ ವ್ಯಕ್ತಿಗೆ ಸಹಾಯ ಮಾಡುವಂತೆ ವರ್ತಿಸುತ್ತಿದ್ದು, ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ರೆಕಾರ್ಡ್ ಆಗಿದೆ. ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಈ ವೀಡಿಯೋ ನೋಡಿದ ಪ್ರತಿಯೊಬ್ಬರು ಗೊಂದಲಕ್ಕೊಳಗಾಗಿದ್ದಾರೆ.
ಇದಕ್ಕಿದ್ದಂತೆ ತೆರೆದುಕೊಂಡ ಆಟೋಮೇಡೆಡ್ ಡೋರ್
ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಅಲ್ಲಿನ ಗಾರ್ಡ್ ಇದ್ದಕ್ಕಿದ್ದಂತೆ ತಾವು ಕುಳಿತಿದ್ದ ಚೇರ್‌ನಿಂದ ಎದ್ದು ನಿಂತಿದ್ದಾರೆ. ಅವರು ತಮ್ಮ ಕೈನಲ್ಲಿ ಎರಡು ಪೇಪರ್‌ಗಳನ್ನು ಹಿಡಿದುಕೊಂಡಿದ್ದು, ತಮ್ಮ ಮುಂದೆ ಯಾರೋ ಇರುವಂತೆ ಅವರು ಮಾತನಾಡುವುದನ್ನು ಕಾಣಬಹುದಾಗಿದೆ. ಆದರೆ ಆ ಪ್ರದೇಶದಲ್ಲಿ ಆತನ ಹೊರತಾಗಿ ಬೇರೆ ಯಾರೂ ಕೂಡ ಕಾಣಿಸುತ್ತಿಲ್ಲ, ಇನ್ನು ಅಚ್ಚರಿಯ ವಿಚಾರ ಎಂದರೆ ವೀಡಿಯೋದ ಆರಂಭದಲ್ಲಿ ಆಸ್ಪತ್ರೆಯ ಆಟೋಮೇಟೆಡ್ ಡೋರ್‌ಗಳು ಕೂಡ ಅಲ್ಲಿ ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತವೆ. ಇದಾದ ನಂತರ ಗಾರ್ಡ್ ತಾವು ಕುಳಿತ ಚೇರ್‌ನಿಂದ ಪೇಪರ್‌ಗಳನ್ನು ಹಿಡಿದು ನಿಂತಿದ್ದು, ಸ್ವಲ್ಪ ಮುಂದೆ ಹೋಗಿ ಮಾತನಾಡುವಂತೆ ಕಾಣಿಸುತ್ತಿದೆ.
ಅರ್ಜೆಂಟೀನಾದ ಆಸ್ಪತ್ರೆಯಲ್ಲಿ ನಡೆದ ಘಟನೆ
2022ರಲ್ಲಿ ಅರ್ಜೆಂಟೀನಾದ ಆಸ್ಪತ್ರೆಯೊಂದರಲ್ಲಿ ನಡೆದ ಘಟನೆ ಇದಾಗಿದೆ. ಈ ವೀಡಿಯೋವನ್ನು @_vatsalasingh ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 8 ಲಕ್ಷಕ್ಕೂ ಅಧಿಕ ಜನ 39 ಸೆಕೆಂಡ್‌ನ ಈ ವೀಡಿಯೋವನ್ನು ನೋಡಿದ್ದಾರೆ. ಅನೇಕರು ಇದು ದೆವ್ವ ಪ್ರೇತಾತ್ಮಗಳ ಚಮತ್ಕಾರ ಇರಬಹುದು ಎಂದು ಈ ವೀಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಇದನ್ನು ಫೇಕ್ ವೀಡಿಯೋ ಎಂದಿದ್ದಾರೆ.
ಇನ್ನು ಕೆಲವರು ಇಂತಹ ವೀಡಿಯೋವನ್ನು ಏಕೆ ಪೋಸ್ಟ್ ಮಾಡಿದ್ದೀರಿ ಇದು ಬಹುಶಃ ಸ್ಕ್ರಿಪ್ಟೆಡ್ ಇರಬೇಕು ಅಥವಾ ಆ ವ್ಯಕ್ತಿ ನಿದ್ದೆಯಲ್ಲಿ ಆ ರೀತಿ ವರ್ತಿಸುತ್ತಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ನೋಡಿ ನಿಮಗೇನನಿಸಿತು ಕಾಮೆಂಟ್ ಮಾಡಿ.
Scroll to load tweet…