Headlines

ಕರ್ನಾಟಕದಲ್ಲಿ ನಾಯಕ ಸಮಾಜವನ್ನು ಕಡೆಗಣಿಸುತ್ತಿರುವ ನಮ್ಮನಾಳುವ ಸರ್ಕಾರಗಳು

ಕೆ ಎನ್. ರಾಜಣ್ಣ ನವರನ್ನು ಸಚಿವ ಸ್ಥಾನದಿಂದ ರಾಜೀನಾಮೆ ಪಡೆದುಕೊಂಡು ನಾಯಕ ಸಮುದಾಯಕ್ಕೆ ಅನ್ಯಾಯ ಮಾಡಿರುವ ಖಂಡನೀಯ ಮಂಜುನಾಥ್ ಪಾಳೇಗಾರ ಪಾವಗಡ ಕಾರ್ಯಧ್ಯಕ್ಷರು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಮಿತಿ.

2018 ವಿಧಾನಸಭಾ ಚುನಾವಣೆಯಲ್ಲಿ ಬಿ ಜೆ ಪಿ ಪಕ್ಷ ಬಳ್ಳಾರಿ ಬಿ ಶ್ರೀ ರಾಮುಲು ರವನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ ಅಂತ ಅಧಿಕಾರಕ್ಕೆ ಬಂದ್ರು. ಬಿ ಜೆ ಪಿ ಪಕ್ಷ ನಾಯಕ ಸಮುದಾಯದಕ್ಕೆ ಮಾಡಿದ ಮೋಸಕ್ಕೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ನಾಯಕ ಸಮುದಾಯ ಬಹುಮುಖ್ಯ ಪಾತ್ರವಹಿಸಿ 15 ಮೀಸಲು ಕ್ಷೆತ್ರಗಳಲ್ಲಿ 14 ಕ್ಷೆತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರನ್ನ ಗೆಲ್ಲಿಸುವ ಮಖಾಂತರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾಯಕ ಸಮಾಜ ಬಹುಮುಖ್ಯ ಪಾತ್ರ ವಹಿಸಿತ್ತು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ನಾಯಕ ಸಮಾಜಕ್ಕೆ 3ಸಚಿವ ಸ್ಥಾನ ಕೊಟ್ಟಿದ್ದು.ಸ್ವಾಗತ ಆದರೆ. ವಿ ಎಸ್ ಉಗ್ರಪ್ಪ ನವರು ಕಾಂಗ್ರೆಸ್ ಪಕ್ಷಕ್ಕೆ ಜೀವನ ಮೂಡಿಪಾಗಿಟ್ಟದ್ದರು ಅವರನ್ನು ಸೌಜನ್ಯಕ್ಕಾದ್ರೂ MLC ಯನ್ನ ಮಾಡದೆ ಮೂಲೆಗುಂಪು ಮಾಡಿದ್ದಲ್ಲದೆ . ಕೆಲ ದಿನಗಳ ನಂತರ ಶ್ರೀ ವಾಲ್ಮೀಕಿ ಅಭಿರುದ್ದಿ ನಿಗಮದಲ್ಲಿ 187 ಕೋಟಿ ಹಗರಣ ಮಾಡಿದ ಹಣವನ್ನ ಬಳ್ಳಾರಿ ಲೋಕಸಭಾ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗೆ ಬಳಸಿಕೊಂಡು ಬಿ ನಾಗೇಂದ್ರ ರವರನ್ನು ಬಲಿಪಶು ಮಾಡಿ ಈಗ ಕೆ ಎನ್. ರಾಜಣ್ಣ ನವರನ್ನು ಸಚಿವ ಸ್ಥಾನದಿಂದ ರಾಜೀನಾಮೆ ಪಡೆದುಕೊಂಡು ನಾಯಕ ಸಮುದಾಯಕ್ಕೆ ಅನ್ಯಾಯ ಮಾಡಿರುವ ಖಂಡನೀಯ. ಮಾನ್ಯ ಮಂತ್ರಿ ಸಿದ್ದರಾಮಯ್ಯ ನವರೇ ಕರ್ನಾಟಕದ ರಾಜ್ಯದಲ್ಲಿ ಸರ್ಕಾರ ಬಿಳಿಸೋದು ಗೊತ್ತು ಮತ್ತೊಂದು ಸರ್ಕಾರ ಅಧಿಕಾರಕ್ಕೆ ತರೋದು. ನಾಯಕ ಸಮಾಜಕ್ಕೆ. ಗೊತ್ತಿದೆ. ಅದರ ಅನುಭವ ರಾಜ್ಯದ ಮಾಜಿ ಮುಖ್ಯಮಂತ್ರಿ ಗಳಾದ HD ಕುಮಾರಸ್ವಾಮಿ ಯವರಿಗೆ ಮತ್ತು ಬಿ ಎಸ್ ಯಡಿಯೂರಪ್ಪ ನವರಿಗೂ. ಹಾಗೂ ನಿಮಗೂ ಮಾನ್ಯ ರಮೇಶ್ ಜಾರಕಿಹೊಳಿ ಸಾಹೇಬ್ರ ರವರಿಂದ ಆಗಿರಬೇಕು ಅನಿಸುತ್ತೆ .ಕಾಂಗ್ರೆಸ್ ಪಕ್ಷದಲ್ಲಿ ಇರುವ ಬೇರೆ ಸಮಾಜದ ಶಾಸಕರು ಮತ್ತು ಸಚಿವರು ನಿಮ್ಮ ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ಕೊಡಲಿಲ್ಲವಾ ❓ಅವರಿಗೆಲ್ಲ ಇದೆ ತರ ರಾಜೀನಾಮೆ ಕೊಡುವ ತಲೆದಂಡ ಹಾಕಿದಿದ್ದಾರಾ ❓ ನಾಯಕ ಸಮಾಜವನ್ನು ಕೇವಲ ಓಟ್ ಬ್ಯಾಂಕ್ ಗೆ ಮಾತ್ರ ಬಳಸಿಕೊಂಡಿದ್ದೀರಾ ❓. ಮೂರು ಪಕ್ಷದಲ್ಲಿ ನಾಯಕರನ್ನ ಯಾವ ರೀತಿ ಕಡೆಗಣಿಸಿದ್ದಾರೆ ಅಂತ ಸಮಾಜದ ಜನಪ್ರತಿನಿದಿನಗಳಿಗೆ ಅರಿವಿರಲಿ..
ಬಿ ನಾಗೇಂದ್ರ ಮತ್ತು ಕೆ ಎನ್. ರಾಜಣ್ಣ ನವರಿಂದ ತೆರವಾದ ಸಚಿವ ಸ್ಥಾನಗಳಿಗೆ ನಾಯಕ ಸಮಾಜದವರಿಗೆ ಕೊಡಬೇಕು ಒಂದುವೇಳೆ ಕೊಡದಿದ್ದಲ್ಲಿ. ನಾಯಕ ಸಮಾಜವನ್ನು ಕಡೆಗಣಿಸಿದ್ದರೆ ಆದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಿ ಮುಂಬರುವ 2028 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ನಾಯಕ ಸಮಾಜ ಹೆಚ್ಚರಿಕೆ ಕೊಡುತ್ತೇವೆ.

Leave a Reply

Your email address will not be published. Required fields are marked *