
ಇತರ ರಾಜ್ಯಗಳ ಹೋಲಿಕೆ: ತಮಿಳುನಾಡು ಮುಂಚೂಣಿಯಲ್ಲಿ
2024-25ರಲ್ಲಿ ಕರ್ನಾಟಕದ ಒಟ್ಟಾರೆ ಸರಕು ರಫ್ತುಗಳು ಶೇ. 14.46ರಷ್ಟು ಏರಿಕೆಯಾಗಿದ್ದು, $30.5 ಬಿಲಿಯನ್ ಮೌಲ್ಯವನ್ನು ತಲುಪಿದೆ. ಆದರೆ ಇತರ ಪ್ರಮುಖ ರಾಜ್ಯಗಳೊಂದಿಗೆ ಹೋಲಿಸಿದರೆ, ಕರ್ನಾಟಕ ಹಾಲಿ ಸ್ಪರ್ಧಾತ್ಮಕತೆಯಲ್ಲಿ ಹಿಂದಿದೆ:
- ತಮಿಳುನಾಡು: ಶೇ. 19.5ರಷ್ಟು ಏರಿಕೆಯೊಂದಿಗೆ ಮೊದಲ ಸ್ಥಾನ
- ಗುಜರಾತ್: ಶೇ. 13.4ರಷ್ಟು ಇಳಿಕೆ
- ಮಹಾರಾಷ್ಟ್ರ: ಶೇ. 2ರಷ್ಟು ಕುಸಿತ
ಬದಲಾಯುತ್ತಿರುವ ಜಾಗತಿಕ ವಾಣಿಜ್ಯ ಪರಿಸ್ಥಿತಿಯಲ್ಲಿ ಕರ್ನಾಟಕ ತನ್ನದೇ ಆದ ಗುರುತನ್ನು ನಿರ್ಮಿಸುತ್ತಿದೆ. ಕಾಫಿ, ಎಂಜಿನಿಯರಿಂಗ್, ಮಸಾಲೆ ಹಾಗೂ ರಾಸಾಯನಿಕ ವಲಯಗಳಲ್ಲಿ ಉತ್ಸಾಹದ ಬೆಳವಣಿಗೆಯು ರಫ್ತು ಮೌಲ್ಯವನ್ನು ಮುನ್ನಡೆಸಿದರೆ, ಇತರ ಕೆಲವು ವಲಯಗಳ ಕುಸಿತ ಮುಂದಿನ ಯೋಜನೆಗೆ ಎಚ್ಚರಿಕೆಯ ಸೂಚನೆಯಾಗಿದೆ. ಮುಂದಿನ ಹಂತಕ್ಕೆ ರಫ್ತು ಬೆಳವಣಿಗೆಯನ್ನು ತಲುಪಿಸಲು, ಸರ್ಕಾರ ಮತ್ತು ಖಾಸಗಿ ವಲಯ ಮೂಲಸೌಕರ್ಯ ಹೂಡಿಕೆಯಲ್ಲಿ ಕೈಜೋಡಿಸಬೇಕಾದ ಅವಶ್ಯಕತೆಯಿದೆ.