ಕುಮಾರಾಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಗಣಿಗಾರಿಕೆ ವರದಿಗಳನ್ನು ಇಟ್ಟುಕೊಂಡು ಅಭಿಷೇಕ ಮಾಡ್ತಿದ್ರಾ? ಹೆಚ್​ಕೆ ಪಾಟೀಲ್

ಕುಮಾರಾಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಗಣಿಗಾರಿಕೆ ವರದಿಗಳನ್ನು ಇಟ್ಟುಕೊಂಡು ಅಭಿಷೇಕ ಮಾಡ್ತಿದ್ರಾ? ಹೆಚ್​ಕೆ ಪಾಟೀಲ್


ಗದಗ, ಜೂನ್ 24: ಅಕ್ರಮ ಗಣಿಗಾರಿಕೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವುದನ್ನು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಗೇಲಿ ಮಾಡಿದ್ದು ರಾಜ್ಯ ಕಾನೂನು ಸಚಿವ ಹೆಚ್ ಕೆ ಪಾಟೀಲ್​ಗೆ ತೀವ್ರ ಅಸಮಾಧಾನ ಉಂಟುಮಾಡಿದೆ. ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು; ತನ್ನ ಪತ್ರದ ಬಗ್ಗೆ ಉಲ್ಲೇಖಿಸುವಾಗ ಕುಮಾರಸ್ವಾಮಿ, ಪೌರಾಣಿಕ ಹೆಸರುಗಳು-ಕುಂಭಕರ್ಣ, ರಾವಣ ಬಳಸುತ್ತಾರೆ. ಕುಮಾರಸ್ವಾಮಿ ದೊಡ್ಡ ಸ್ಥಾನದಲ್ಲಿರುವವರು, ರಾಜ್ಯಕ್ಕೆ ₹ 1.50 ಲಕ್ಷ ಕೋಟಿ ನಷ್ಟವಾಗಿರುವ ಬಗ್ಗೆ ಯೋಚಿಸಬೇಕು ಎಂದು ಹೇಳುತ್ತಾರೆ. ಅಕ್ರಮ ಗಣಿಗಾರಿಕೆ ವರದಿ ತಮ್ಮಲ್ಲೇ ಇದ್ದರೂ ಸಿಎಂ ಸಿದ್ದರಾಮಯ್ಯ ಪೂಜೆ ಮಾಡ್ತಿದ್ರಾ ಅಂತ ಕುಮಾರಸ್ವಾಮಿ ಕೇಳುತ್ತಾರೆ, ಅವರೂ ಸಿಎಂ ಆಗಿದ್ದರು ಮತ್ತು ಅವರ ಬಳಿಯೂ ಅಕ್ರಮ ಗಣಿಗಾರಿಕೆಯ ವರದಿಗಳಿದ್ದವು, ಆಗೇನೂ ಕುಮಾರಾಸ್ವಾಮಿ ಅಭಿಷೇಕ ಮಾಡ್ತಿದ್ರಾ ಅಂತ ಪಾಟೀಲ್ ಕೇಳುತ್ತಾರೆ.

ಇದನ್ನೂ ಓದಿ:  ಉದ್ಧಟತನ ಪ್ರದರ್ಶಿಸಿದಾಗ ಜಮೀರ್ ರಾಜೀನಾಮೆ ಅಂಗೀಕರಿಸಬೇಕೆಂದು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದೆ: ಕುಮಾರಸ್ವಾಮಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *