Headlines

ಕ್ರೀಡೆ ಯುವಕರ ಜೀವನೋತ್ಸಾಹ ದ್ವಿಗುಣಗೊಳಿಸುವಲ್ಲಿ ಸಹಕಾರಿ.

ಶಿರಾ : ಕ್ರೀಡೆ ಯುವಕರ ಜೀವನೋತ್ಸಾಹ ದ್ವಿ ಗುಣಗೊಳಿಸುವಲ್ಲಿ ಸಹಕಾರಿಯಾಗಲಿದ್ದು, ಇಂತಹ ಕ್ರಿಕೆಟ್ ಟೂರ್ನಿಮೆಂಟ್ ಗಳು ಯುವಕರಲ್ಲಿ ಪರಸ್ಪರ ಸ್ನೇಹ-ಬಾಂಧವ್ಯ ಗಟ್ಟಿಗೊಳಿಸಿ ಒಗ್ಗೂಡಿಸುವಂತಹ ಕೆಲಸದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು
ಸಮಾಜಸೇವಕ, ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಹೇಳಿದರು.
ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಜಿ.ರಂಗನಹಳ್ಳಿ ಗ್ರಾಮದಲ್ಲಿ ಶ್ರೀ ಸೇವಾಲಾಲ್ ಕ್ರಿಕೆಟರ್ಸ್ ಹಾಗೂ ಶಿವು ಚಂಗಾವರ ಅಭಿಮಾನಿ ಬಳಗ ಅಯೋಜಿಸಿದ್ದ 2. ದಿನಗಳ ಕ್ರಿಕೆಟ್ ಟೂರ್ನಿಮೆಂಟ್ ಉದ್ಘಾಟಿಸಿ ಮಾತನಾಡಿದರು.
ಕ್ರಿಕೆಟ್ ಜೊತೆಗೆ ಗ್ರಾಮೀಣ ಪ್ರದೇಶದ ಕ್ರೀಡೆಗಳಾದ ಕಬ್ಬಡಿ, ಕೊಕ್ಕೋ ದಂತಹ ಕ್ರೀಡೆಗಳನ್ನು ಪ್ರೋತ್ಸಾಹಿಸಿ ಬೆಳೆಸುವಂತಹ ಕೆಲಸ ಮಾಡಬೇಕು. ಜಿ. ರಂಗನಹಳ್ಳಿ ಗ್ರಾಮ ಚಿಕ್ಕದಾದರೂ ಶೈಕ್ಷಣಿಕವಾಗಿ ದೊಡ್ಡ ಸ್ಥಾನ ಪಡೆದಿರುವುದು ಹೆಮ್ಮೆ ಎನಿಸುತ್ತದೆ ಎಂದರು.

ಯುವ ಮುಖಂಡ ಮೋಹನ್ ಬೊಮ್ಮಣ್ಣ ಮಾತನಾಡಿ ಸಮಾಜಮುಖಿ ಚಿಂತನೆ ಯೊಂದಿಗೆ ಉತ್ತಮ ಕಾರ್ಯಗಳನ್ನು ಮಾಡುತ್ತಿರುವ ಶಿವು ಚಂಗಾವರವರ ಸೇವಾದಕ್ಷತೆ ಮೆಚ್ಚುವಂತಹದ್ದು, ಉಳ್ಳವರು ಕ್ರೀಡೆ, ನಾಟಕ ಸೇರಿದಂತೆ ನಮ್ಮ ನಾಡಿನ ನೈಜ ಕಲೆಗಳನ್ನು ಉಳಿಸಿ ಬೆಳೆಸುವಂತಹ ಆದಾಗ ತಾವು ಮಾಡುವ ಸೇವೆ ಸಾರ್ಥಕತೆ ಪಡೆಯಲಿದೆ. ಬಡವರ ಕಷ್ಟ ನೋವುಗಳಿಗೆ ಸ್ಪಂದಿಸುವ ಶಿವು ಚಂಗಾವರ ರವರಿಗೆ ರಾಜಕೀಯ ಪ್ರಾತಿನಿಧ್ಯ ಅವಶ್ಯಕತೆ, ಇಂತಹ ಯುವಕರು ರಾಜಕಾರಣಕ್ಕೆ ಬರಬೇಕು ಜನ ಪ್ರೋತ್ಸಾಹಿಸಬೇಕು ಎಂದರು.
ಯುವ ಮುಖಂಡರಾದ ಚಂದ್ರ ನಾಯ್ಕ, ವಾಲ್ಯನಾಯ್ಕ, ಪರಮೇಶ್, ಧನರಾಜ್, ಪ್ರಸನ್ನ, ವಿನಾಯಕ ಆಗ್ರೋ ನೆಟ್ವರ್ಕ್ ನ ಚಂದ್ರ ಶೆಟ್ಟಿ, ಶಾಗದಡು ಸತೀಶ್, ಶಶಿಕುಮಾರ್, ಸುರೇಶ್ ನಾಯ್ಕ ಸೇರಿದಂತೆ ಹಲವಾರು ಯುವಕರು ಇದ್ದರು.

Leave a Reply

Your email address will not be published. Required fields are marked *