ಸ್ವಂತ ಮಗಳಿಗೆ ತಾಯಿಯೇ ದೈಹಿಕವಾಗಿ ದೌರ್ಜನ್ಯ ಮಾಡಿದಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆ ಮಗಳು ಕೌನ್ಸೆಲರ್ ಬಳಿ ಹೇಳಿದ್ದೇನು?

ಬೆಂಗಳೂರು: ನಗರದ ಆರ್‌ಟಿ ನಗರದಲ್ಲಿ 45 ವರ್ಷದ ಮಹಿಳೆಯು ಮಗಳಿಗೆ ದೈಹಿಕ ಕಿರುಕುಳ ನೀಡುತ್ತಿದ್ದಳು ಎಂದು ದೂರು ದಾಖಲಿಸಿದ್ದಾರೆ. ಹದಿಹರೆಯದ ಮಗಳಿಗೆ ಹಲವು ವರ್ಷಗಳಿಂದ ದೈಹಿಕ ಕಿರುಕುಳ ನೀಡುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. POCSO ಕಾಯಿದೆ ಅಡಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ.

ಕಳೆದ ಶುಕ್ರವಾರದಂದು ಸ್ಥಳೀಯ ಖಾಸಗಿ ಶಾಲೆಯ ಕೌನ್ಸೆಲರ್ ಒಬ್ಬರು ಔಪಚಾರಿಕವಾಗಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಆಮೇಲೆ ಈ ಪ್ರಕರಣವನ್ನು ಅಧಿಕೃತವಾಗಿ ದೂರು ದಾಖಲಿಸಲಾಗಿದೆ. 9ನೇ ತರಗತಿ ವಿದ್ಯಾರ್ಥಿನಿಗೆ ಈಗ 15 ವರ್ಷ ವಯಸ್ಸು. ಶಾಲಾ ಕೌನ್ಸೆಲರ್‌ಗೆ ಈ ಸಂತ್ರಸ್ತೆಯು ತನ್ನ ತಾಯಿಯಿಂದ ನಡೆಯುತ್ತಿರುವ ದೈಹಿಕ ಕಿರುಕುಳದ ಬಗ್ಗೆ ಹೇಳಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಸಂತ್ರಸ್ತೆಯು ದೂರಿನಲ್ಲಿ "ನನ್ನ ತಾಯಿ ನನಗೆ ದೈಹಿಕವಾಗಿ ಕಿರುಕುಳ ಕೊಡುತ್ತಿದ್ದಳು. ಮದುವೆಯಾದ ಬಳಿಕ ನಾನು ನನ್ನ ಗಂಡನ ಜೊತೆ ಹೇಗೆ ಬಿಹೇವ್ ಮಾಡ್ಬೇಕು ಅಂತ ತಾಯಿ ಹೇಳಿಕೊಡ್ತೀನಿ ಅಂತ ಹೇಳಿದ್ದಳು” ಎಂದು ತಿಳಿಸಿದ್ದಾರೆ.

ಕಳೆದ ಆರು ವರ್ಷಗಳಿಂದ ಈ ತಾಯಿಯು ಮಗಳಿಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಸಂತ್ರಸ್ತೆಯು ಆರೋಪಿಸಿದ್ದಾಳೆ. ಆ ತಾಯಿಯು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳಂತೆ. ಅಷ್ಟೇ ಅಲ್ಲದೆ ಆ ಮಹಿಳೆಯು ತನ್ನ ಪತಿಯಿಂದ ದೂರವಿದ್ದಾಳೆ. ಅಂದಹಾಗೆ ಅವರ ಮಗಳು ಮನೆಯ ಸಮೀಪದ ಶಾಲೆಯಲ್ಲಿ ಓದುತ್ತಿದ್ದಾಳೆ.

ಅಧಿಕಾರಿಯೊಬ್ಬರು ಈ ಬೆಳವಣಿಗೆ ನಡೆದಿರೋದು ಸತ್ಯ ಎಂದು ದೃಢಪಡಿಸಿದ್ದಾರೆ. "ಕೌನ್ಸೆಲರ್‌ನಿಂದ ಈ ಘಟನೆಯ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು, ಹೀಗಾಗಿ ಪ್ರಕರಣ ದಾಖಲಾಗಿದೆ” ಎಂದಿದ್ದಾರೆ. ಆರೋಪಿಯನ್ನು ಬಂಧಿಸದೆ, ವಿಚಾರಣೆ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೆ ಕೌನ್ಸಿಲರ್‌ರನ್ನು ಕೂಡ ವಿಚಾರಣೆ ಮಾಡಲಾಗ್ತಿದೆ ಎನ್ನಲಾಗಿದೆ.

Source link
‘ಗಂಡನ ಜೊತೆ ದೈಹಿಕ ಸಂಬಂಧ ಬೆಳೆಸೋದು ಹೇಳಿಕೊಡ್ತೀನಿ’-ಮಗಳ ಮೇಲೆಯೇ ಬೆಂಗಳೂರಿನ ತಾಯಿ ದೌರ್ಜನ್ಯ!