Headlines

ಗಡಿನಾಡಿಗೆ ಇಂದು ಸಿಎಂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕರ‍್ಪಣೆ: ಸಕಲ ಸಿದ್ಧತೆಗಳನ್ನ ಪರಿಶೀಲಿಸಿದ ಜಿಲ್ಲಾಡಳಿತ

ಸೂರ್ಯಪ್ರಗತಿ ನ್ಯೂಸ್,ಕಾಂ

ಪಾವಗಡದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕರ‍್ಪಣೆ ಮಾಡಿ, ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು. ಇಂದು ಪಾವಗಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿ ಹಿನ್ನೆಲೆ ತುಮಕೂರು ಡಿಸಿ ಶುಭಾಕಲ್ಯಾಣಕ್, ಸಿಇಓ ಪ್ರಭು.ಜಿ ಹಾಗೂ ಎಸ್ ಪಿ ಕೆ.ವಿ.ಅಶೋಕ್ ಪಾವಗಡ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪಾವಗಡ ಜಿಲ್ಲೆಗೆ ಭೇಟಿ ನೀಡಿದ

ಡಿಸಿ, ಎಸ್‌ಪಿ, ಸಿಇಓ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಇದೇ ವೇಳೆ ಶಾಸಕರು ಹಾಗೂ ತುಮುಲ್ ಅಧ್ಯಕ್ಷರಾದ ಹೆಚ್.ವಿ.ವೆಂಕಟೇಶ್ ಮತ್ತು ಮಾಜಿ ಸಚಿವ ವೆಂಕಟರಮಣಪ್ಪ ಅವರೊಂದಿಗೆ ಕರ‍್ಯಕ್ರಮ ಆಯೋಜನೆ ಕುರಿತು ರ‍್ಚೆ ನಡೆಸಿದರು. ಈ ವೇಳೆ ಹಲವು ಇಲಾಖೆಯ ಅಧಿಕಾರಿಗಳು ಕೂಡ ಹಾಜರಿದ್ದು, ತಮ್ಮ ಇಲಾಖೆಯಿಂದ ಮಾಡುತ್ತಿರುವ ಕಾಮಗಾರಿಗಳ ಕುರಿತಾಗಿ ಮಾಹಿತಿಯನ್ನು ನೀಡಿದರು. ನಂತರ ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ವೇದಿಕೆ ನರ‍್ಮಾಣ ಮತ್ತು ನಾಗಲಮಡಿಕೆ ಕ್ರಾಸ್ ನಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಬಳಿಯ ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಮತ್ತು ಹಾಸ್ಟೆಲ್ ಲೋಕರ‍್ಪಣೆ ಮಾಡುವ ಸ್ಥಳಗಳನ್ನು ಪರಿಶೀಲನೆ ನಡೆಸಿದರು.

ಕರ‍್ಯಕ್ರಮದ ವೇದಿಕೆ ಸುಂದರವಾಗಿ ಮೂಡಿ ಬಂದಿದ್ದು ಆಸನ ವ್ಯವಸ್ಥೆ, ಧ್ವನಿ ಮತ್ತು ಬೆಳಕಇನ ವ್ಯವಸ್ಥೆಗಳನ್ನ ಮಾಡಲಾಗಿದ್ದು ಸರ‍್ವಜನಿಕರಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌರ‍್ಯ, ವ್ಯವಸ್ಥೆ, ಆಂಬುಲೆನ್ಸ್, ಆಗ್ನಿಶಾಮಕ ವಾಹನ ವ್ಯವಸ್ಥೆ ಒದಗಿಸುವ ಕರ‍್ಯದ ಹೊಣೆಗಾರಿಕೆಯನ್ನು ಸಂಬಂಧಿಸಿದ ಅಧಿಕಾರಿಗಳು ಪರ‍್ವ ಸಿದ್ಧತೆಗಳನ್ನು ಕೈಗೊಂಡಿದ್ದು

ವೇದಿಕೆ ಕರ‍್ಯಕ್ರಮದ ಸ್ಥಳದಲ್ಲಿ ರ‍್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಜನಪರ ಯೋಜನೆಗಳ ಕುರಿತು ಮಳಿಗೆಗಳನ್ನು ತೆರೆದು ಜನರಿಗೆ ಅರಿವು

ಮೂಡಿಸಲು ವಿವಿಧ ವ್ಯವಸ್ಥೆಗಳನ್ನ ಮಾಡಲಾಗಿದೆ. ಮುಖ್ಯಮಂತ್ರಿಗಳ ಕರ‍್ಯಕ್ರಮವು ಅಚ್ಚುಕಟ್ಟಾಗಿ ಮೂಡಿ ಬರಲಿದ್ದು ಕರ‍್ಯಕ್ರಮದಲ್ಲಿ ರ‍್ಹ ಫಲಾನುಭವಿಗಳಿಗೆ ಭೌತಿಕ ಸವಲತ್ತುಗಳನ್ನು ವಿತರಿಸಲಾಗುವುದು ಸವಲತ್ತು ವಿತರಣೆಗೆ ಸಂಬಂಧಿಸಿದಂತೆ ಆಯ್ಕೆಯಾದ ಫಲಾನುಭವಿಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನರ‍್ದೇಶನ ನೀಡಿದ್ದಾರೆ

ತುಮಕೂರಿನಿಂದ ಪಾವಗಡದವರೆಗೆ ರಸ್ತೆ ಬದಿಯಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ ನೀಡಿ ಕರ‍್ಯಕ್ರಮಕ್ಕೆ ಬರುವ ಸರ‍್ವಜನಿಕರು ಹಾಗೂ ಗಣ್ಯರಿಗೆ ಭೋಜನ, ಕುಡಿಯುವ ನೀರು, ಮೊಬೈಲ್ ಶೌಚಾಲಯದ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಸಂರ‍್ಭದಲ್ಲಿ ಪುರಸಭಾ ಅಧ್ಯಕ್ಷರಾದ ಸುದೇಶ್ ಬಾಬು, ಮಾಜಿ ಅಧ್ಯಕ್ಷರಾದ ರಾಜೇಶ್, ಸದಸ್ಯರಾದ ಎನ್ ರವಿ ಮತ್ತು ಬತ್ತಿನೇನಿ ನಾನಿ, ಉಪ ವಿಭಾಗಧಿಕಾರಿ ಶಿವಪ್ಪ ಕಡಕೋಳ, ಸೇರಿ ಜಿಲ್ಲಾ ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಗಡಿನಾಡಿಗೆ ಮೂಲಭೂತ ಸೌರ‍್ಯ ಕಲ್ಪಿಸಲು ಮುಖ್ಯಮಂತ್ರಿಗೆ ಮನವಿ

ತಾಲ್ಲೂಕಿಗೆ ಮೂಲ ಸೌರ‍್ಯಗಳನ್ನು ಕಲ್ಪಿಸಿ ಮುಖ್ಯಮಂತ್ರಿಗಳು ತಾಲ್ಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಬಡ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ೭೪ ಹುದ್ದೆ ಖಾಲಿ ಇವೆ. ತಾಲ್ಲೂಕಿನ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಉನ್ನತ ಶಿಕ್ಷಣಕ್ಕೆ ತುಮಕೂರು, ಬೆಂಗಳೂರು, ಇತರೆಡೆ ಹೋಗಲಾಗದೆ ಶಿಕ್ಷಣ ಮೊಟಕುಗೊಳಿಸಲಾಗುತ್ತಿದೆ. ಹೀಗಾಗಿ ತಾಲ್ಲೂಕಿನಲ್ಲಿ ಪಾಲಿಟೆಕ್ನಿಕ್, ಎಂಜನಿಯರಿಂಗ್, ನಸಿಂಗ್ ಕಾಲೇಜು ಆರಂಭಿಸಬೇಕು ಎಂಬುದು ಈ ಭಾಗದ ನಾಗರಿಕರ ಒತ್ತಾಯವಾಗಿದೆ.

ನಮ್ಮ ತಾಲ್ಲೂಕು ಬರಪೀಡಿತ ಪ್ರದೇಶವಾಗಿರುವುದರಿಂದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ದೇಗ ಹೆಚ್ಚಿಸಬೇಕು. ಎತ್ತಿನಹೊಳೆ ಯೋಜನೆಯಲ್ಲಿ ತಾಲ್ಲೂಕಿಗೆ ನೀರು

ಮಾರುಕಟ್ಟೆ ಸೌಲಭ್ಯ, ಸರ‍್ಪಕ ರಸ್ತೆ, ಸಾರಿಗೆ ಸಂರ‍್ಕ ಕಲ್ಪಿಸಬೇಕು. ದೊಮೃತಮರಿಯಲ್ಲಿ ಪೊಲೀಸ್ ಠಾಣೆ ಆರಂಭಿಸಬೇಕು. ರೈತರ ಕೃಷಿ ಪಂಪ್ ಸೆಟ್ ಗಳಿಗೆ ಸೋಲಾರ್ ಯೋಜನೆಯಡಿ ಸೋಲಾರ್ ಪಂಪ್ ಸೆಟ್ ನೀಡಬೇಕು. ಬಾಬು ಜಗಜೀವನರಾಮ್ ಭವನ ನರ‍್ಮಾಣ ಮಾಡಿ, ಪಟ್ಟಣದ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಬೈಪಾಸ್ ನರ‍್ಮಿಸಬೇಕು. ನಾಗಲಮಡಿಕೆ, ಶನೈಶ್ಚರ ದೇಗುಲ, ನಿಡಗಲ್ ಪ್ರದೇಶಗಳಿಗೆ ಮೌಲ ಸೌರ‍್ಯ ಕಲ್ಪಿಸಿ ಪ್ರವಾಸೋದ್ಯಮ ಪ್ರದೇಶಗಳೆಂದು ಘೋಷಿಸಬೇಕು ಈ ಭಾಗದ ನಾಗರಿಕರ ಮನವಿಯಾಗಿದೆ.

ವರದಿ.: ಪಾವಗಡ ಕುಮಾರ್

Leave a Reply

Your email address will not be published. Required fields are marked *