Headlines

ಗೆಳೆಯನ ಬರ್ತ್‌ಡೇ ಪಾರ್ಟಿಯಲ್ಲಿ ಧೋನಿ ಮಾಡಿದ ಕಾಮೆಂಟ್‌ ಈಗ ಸಖತ್ ವೈರಲ್ | Ms Dhonis Hilarious Moment At Friends Birthday Party Goes Viral

ಗೆಳೆಯನ ಬರ್ತ್‌ಡೇ ಪಾರ್ಟಿಯಲ್ಲಿ ಧೋನಿ ಮಾಡಿದ ಕಾಮೆಂಟ್‌ ಈಗ ಸಖತ್ ವೈರಲ್ | Ms Dhonis Hilarious Moment At Friends Birthday Party Goes Viral



ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ತಮ್ಮ ಸ್ನೇಹಿತನ ಹುಟ್ಟುಹಬ್ಬದಲ್ಲಿ ಭಾಗವಹಿಸಿ, ಮೊದಲು ಪತ್ನಿಗೆ ಕೇಕ್ ತಿನ್ನಿಸುವಂತೆ ಹಾಸ್ಯದ ಮಾತುಗಳನ್ನಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Cricket Legend MS Dhoni:ಕ್ರಿಕೆಟ್ ದಂತಕತೆ ಭಾರತ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಮ್ಮ ಸರಳತೆಯ ಕಾರಣಕ್ಕೆ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಕ್ಯಾಪ್ಟನ್ ಕೂಲ್ ತಮ್ಮ ಹಳೆಯ ಆಪ್ತ ಸ್ನೇಹಿತರ ಜೊತೆ ತಾನೊಬ್ಬ ಕ್ರಿಕೆಟಿಗ ಎನ್ನುವುದನ್ನು ಮರೆತು ಸಾಮಾನ್ಯ ಸ್ನೇಹಿತರಂತೆ ಸಮಯ ಕಳೆಯುತ್ತಾರೆ. ಇಂತಹ ವೀಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಅದೇ ರೀತಿ ಇತ್ತೀಚೆಗೆ ಧೋನಿ ಸ್ನೇಹಿತನೋರ್ವನ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದು, ಈ ವೇಳೆ ಆ ಸಮಯದಲ್ಲಿ ಅವರಾಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಈ ಕಿಂಗ್ಸ್ (Chennai Super Kings)ತಂಡದ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ತಮ್ಮ ಆತ್ಮೀಯ ಸ್ನೇಹಿತರಾದ ಸುರೇಂದ್ರ ಕುಮಾರ್ ಅವರ ಹುಟ್ಟುಹಬ್ಬದಲ್ಲಿ (Birthday Party)ಭಾಗಿಯಾಗಿದ್ದರು. ಈ ಹುಟ್ಟುಹಬ್ಬದ ವೀಡಿಯೋವನ್ನು ಅವರ ಆಪ್ತ ಬರ್ತ್‌ಡೇ ಬಾಯ್‌ @surenderk.kaka ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ವಿಶೇಷ ದಿನದಂದು ಆನಂದದ ಕಣ್ಣೀರು ಎಂದು ಬರೆದು ಅವರು ವೀಡಿಯೋ ಪೋಸ್ಟ್‌ ಮಾಡಿದ್ದರು. ಆದರೆ ಈ ವೀಡಿಯೋ ವೈರಲ್ ಆಗುವುದಕ್ಕೆ ಕಾರಣವಾಗಿದ್ದು, ಬರ್ತ್ಡೆ ಬಾಯ್ ಅಲ್ಲ, ಬದಲಾಗಿ ಕ್ರಿಕೆಟರ್ ಎಂಎಸ್ ಧೋನಿ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅವರು ವೀಡಿಯೋದಲ್ಲಿ ಸಾಮಾನ್ಯರಂತೆ ಹಿಂಭಾಗದಲ್ಲಿ ನಿಂತು ತನ್ನ ಗೆಳೆಯನಿಗೆ ಶುಭ ಹಾರೈಸಿದರು.

 

 

ಮೊದಲು ಹೆಂಡ್ತಿಗೆ ತಿನ್ಸು, ನೀ ಈ ಮನೆಲೇ ಇರ್ಬೇಕು ಎಂದ ಧೋನಿ:

ಆದರೆ ಈ ವಿಡಿಯೋಗೆ ರೋಚಕ ಟ್ವಿಸ್ಟ್ ನೀಡಿದ್ದು, ಧೋನಿ ಅವರ ಮಾತು. ಧೋನಿ ಅವರ ಸ್ನೇಹಿತ ಸುರೇಂದ್ರ ಕುಮಾರ್, ಅವರು ಕೇಕ್ ಕತ್ತರಿಸಿ ತಮ್ಮ ಆತ್ಮೀಯ ಸ್ನೇಹಿತ ಗ್ರೇಟ್ ಕ್ಯಾಪ್ಟನ್ ಧೋನಿ ಅವರಿಗೆ ಮೊದಲಿಗೆ ಕೇಕ್ ನೀಡಿದ್ದಾರೆ. ಕೇಕ್ ಅನ್ನು ಮೊದಲು ಗೆಳೆಯ ಧೋನಿಗೆ ತಿನ್ನಿಸುವುದು ಸುರೇಂದ್ರ ಕುಮಾರ್ ಅವರ ಉದ್ದೇಶವಾಗಿತ್ತು. ಆದರೆ ಧೋನಿ ಅವರು ತಮ್ಮ ಸ್ನೇಹಿತನಿಗೆ, ಮೊದಲು ಹೆಂಡ್ತಿಗೆ ತಿನ್ನಿಸು, ಏಕೆಂದರೆ ನೀವು ಈ ಮನೆಯಲ್ಲೇ ಇರಬೇಕು. ನಾವಾದರೋ ಇಲ್ಲಿಂದ ಹೊರಟು ಹೋಗುತ್ತೇವೆ.(ಪೆಹ್ಲೆ ಕಾಕಿ ಕೋ ಖಿಲಾವ್, ಆಪ್ಕೊ ಘರ್ ಮೇ ರೆಹನಾ ಹೈ. ಹಮ್ ತೋ ಚಲೇ ಜಾಯೇಂಗೇ) ಎಂದು ಹೇಳುತ್ತಾರೆ. ಧೋನಿ ಅವರ ಈ ಹಾಸ್ಯದ ಮಾತು ಅಲ್ಲಿದ ಎಲ್ಲರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.

ಮಕ್ಕಳಿಗೂ ಮೊದಲು ನೀಡುವಂತೆ ಮನವಿ

ಧೋನಿಯ ಸ್ನೇಹಿತ ಎರಡನೇ ಬಾರಿ ಕೇಕ್ ಅನ್ನು ಅವರಿಗೆ ನೀಡಲು ಮುಂದಾದಾಗ ಅವರು ಆಗಲೂ ನಿರಾಕರಿಸಿದ್ದು, ಮೊದಲು ಮುಂದೆ ನಿಂತಿರುವ ಪುಟ್ಟ ಮಕ್ಕಳಿಗೆ ತಿನ್ನಿಸುವಂತೆ ಹೇಳುತ್ತಾರೆ. ಮೊದಲು ಮಕ್ಕಳು ತಿನ್ನಲಿ ನನಗೆ ಕೊನೆಯಲ್ಲಿ ಕೊಡಿ ಎಂದು ಹೇಳುತ್ತಾರೆ. ಬಳಿಕ ಕೊನೆಯಲ್ಲಿ ಕೇಕ್ ಸ್ವೀಕರಿಸುವ ಧೋನಿ ನಂತರ ತಮ್ಮ ಪ್ರೀತಿಯ ಸ್ನೇಹಿತನಿಗೆ ಅದರಲ್ಲೊಂದು ತುಂಡು ಕೇಕ್ ಅನ್ನು ತಿನ್ನಿಸುತ್ತಾರೆ.

 

 

ಧೋನಿ ದೊಡ್ಡತನಕ್ಕೆ ಎಲ್ಲರ ಮೆಚ್ಚುಗೆ

ಧೋನಿಯವರ ಈ ಎಲ್ಲರೊಳಗೊಂದಾಗುವ ಸರಳತೆಗೆ ಅಭಿಮಾನಿಗಳು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಲವು ರೀತಿಯಲ್ಲಿ ಕಾಮೆಂಟ್ ಮಾಡಿ ತಮ್ಮ ನಾಯಕನ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧೋನಿ ಇರುವ ಈ ವೀಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ. ಇದೇ ಕಾರಣಕ್ಕೆ ಧೋನಿ ನಮಗೆ ಇಷ್ಟವಾಗುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೂ ಕೆಲವರು ಧೋನಿಯಂತಹ ಸ್ನೇಹಿತನ ಪಡೆದ ಸುರೇಂದ್ರ ಕುಮಾರ್ ಅದೃಷ್ಟವಂತ ಎಂದು ಹೇಳಿದ್ದಾರೆ. ಈ ಮನುಷ್ಯ ತನ್ನ ಕನಸನ್ನು ಬದುಕುತ್ತಾ ಇತರರ ಕನಸುಗಳನ್ನು ನನಸಾಗಿಸುತ್ತಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸರಳತೆಗೆ ಮತ್ತೊಂದು ಹೆಸರೇ ಧೋನಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಧೋನಿ ಅಭಿಮಾನಿಗಳ ಮೊಗದಲ್ಲಿ ನಗು ತರಿಸಿದೆ.



Source link

Leave a Reply

Your email address will not be published. Required fields are marked *