Headlines

ಚಂದ್ರಶೇಖರ್ ಅಜಾದ್ ಹಾಗೂ ಲೋಕಮಾನ್ಯ ಬಾಲ ಗಂಗಾಧರ್ ತಿಲಕ್ ರವರುಗಳ ಜನ್ಮದಿನಾಚರಣೆ..

ತುಮಕೂರು : ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ಚಂದ್ರಶೇಖರ್ ಅಜಾದ್ ಹಾಗೂ ಲೋಕಮಾನ್ಯ ಬಾಲ ಗಂಗಾಧರ್ ತಿಲಕ್ ರವರುಗಳ ಜನ್ಮದಿನಾಚರಣೆಯನ್ನು ಜಿಲ್ಲಾ ಕೇಂದ್ರ ಕಛೇರಿಯಲ್ಲಿ ಅವರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಣೆ ಮಾಡುವುದರ ಮೂಲಕ ಆಚರಿಸಲಾಯಿತು.

ಈ ಕುರಿತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್‌ರವರು ಮಾತನಾಡುತ್ತಾ ನಮ್ಮ ಸಂಘಟನೆಗಳಿAದ ನಮ್ಮ ಭಾರತ ದೇಶದ ಪ್ರತಿಯೊಬ್ಬ ಮಹನೀಯರ ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮಗಳನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ, ಇದರಿಂದ ಜನರಿಗೆ ಅವರು ಮಾಡಿದಂತಹ ಘನ ಸಾಧನೆಗಳು, ಅವರ ಆದರ್ಶಗಳು, ನಮ್ಮ ದೇಶದ ಇತಿಹಾಸವನ್ನು ಮೆಲುಕು ಹಾಕುವ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದು, ಅದರಂತೆಯೇ ಜುಲೈ ೨೩ರಂದು ಲೋಕಮಾನ್ಯ ಬಲಗಂಗಾಧರ ತಿಲಕ್ ಮತ್ತು ಚಂದ್ರಶೇಖರ್ ಆಜಾದ್ ರವರುಗಳ ಜನ್ಮದಿನಾಚರಣೆಯಿದ್ದು ಇಂದು ನಾವು ಆ ಮಹಾನೀಯರುಗಳ ಜನ್ಮವರ್ಧಂತಿ ಕಾರ್ಯಕ್ರಮವನ್ನು ಆಚರಿಸುತ್ತಿರುವುದ ನಮಗೆ ಹರ್ಷದಾಯಕವಾಗಿದೆ ಎಂದರು.

ಮುಂದೆ ಮಾತನಾಡುತ್ತಾ ಮಾನ್ಯ ಬಾಲಗಂಗಾಧರ ತಿಲಕ್‌ರವರ ಮೂಲ ಹೆಸರು ಕೇಶವ ಗಂಗಾಧರ ತಿಲಕ್ ಆದರೆ ಅವರು ಮಾಡಿದಂತಹ ಕೆಲಸ ಕಾರ್ಯಗಳಿಂದಲೇ ಇಂದಿಗೂ ಅವರು ಲೋಕಮಾನ್ಯ ಎಂದೇ ಖ್ಯಾತಿಗಳಿಸಿದಂತಹ ವ್ಯಕ್ತಿ ಅವರು ಭಾರತೀಯ ರಾಷ್ಟಿçÃಯತಾವಾದಿ, ಶಿಕ್ಷಕ ಲಾಲ್ ಬಾಲ್ ಪಾಲ್ಮೂರನೇ ಒಂದು ಭಾಗವಾಗಿದ್ದರು. ಅವರು ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳು ಅವರನ್ನು “ಭಾರತೀಯ ಅಶಾಂತಿಯ ಪಿತಾಮಹ” ಎಂದು ಸಹ ಕರೆದರಲ್ಲದೇ. ಅವರಿಗೆ “ಲೋಕಮಾನ್ಯ ಎಂಬ ಬಿರುದನ್ನು ಸಹ ನೀಡಲಾಯಿತು, ಇದರರ್ಥ “ಜನರು ತಮ್ಮ ನಾಯಕರಾಗಿ ಸ್ವೀಕರಿಸಿದರು”. ಇದೇ ತಿಲಕರು ಸ್ವರಾಜ್ಯದ (‘ಸ್ವ-ಆಡಳಿತ’) ಮೊದಲ ಮತ್ತು ಪ್ರಬಲ ಪ್ರತಿಪಾದಕರಲ್ಲಿ ಒಬ್ಬರಾಗಿದ್ದಂತಹ ವ್ಯಕ್ತಿ ಮತ್ತು ಭಾರತೀಯ ಪ್ರಜ್ಞೆಯಲ್ಲಿ ಬಲವಾದ ಆಮೂಲಾಗ್ರರಾಗಿದ್ದರು. ಅವರು ಮರಾಠಿಯಲ್ಲಿ “ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಮತ್ತು ನಾನು ಅದನ್ನು ಹೊಂದುತ್ತೇನೆ” ಎಂಬ ದೇಹವಾಖ್ಯದಿಂದಲೇ ಹೆಸರುವಾಸಿಯಾಗಿದ್ದಾರೆ. ಅವರು ಬಿಪಿನ್ ಚಂದ್ರಪಾಲ್, ಲಾಲಾ ಲಜಪತ್ ರಾಯ್, ಅರಬಿಂದೋ ಘೋಷ್, ಚಿದಂಬರA ಪಿಳ್ಳೆöÊ ಮತ್ತು ನಂತರ ಬ್ರಿಟಿಷ್ ಆಳ್ವಿಕೆಯಿಂದ ಪಾಕಿಸ್ತಾನದ ಸ್ವಾತಂತ್ರ÷್ಯವನ್ನು ಮೇಲ್ವಿಚಾರಣೆ ಮಾಡಿದ ಮುಹಮ್ಮದ್ ಅಲಿ ಜಿನ್ನಾ ಸೇರಿದಂತೆ ಅನೇಕ ಭಾರತೀಯ ರಾಷ್ಟಿçÃಯ ಕಾಂಗ್ರೆಸ್ ನಾಯಕರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದAತಹ ವ್ಯಕ್ತಿ ಅವರನ್ನು ನಾವು ಇಂದು ನೆನೆಯುತ್ತಿದ್ದೇವೆಂದರೆ ನಮ್ಮ ಜನ್ಮ ಧನ್ಯವೆಂದು ಭಾವಿಸಿದ್ದೇನೆ ಎಂದು ಹೇಳಿದರು.

ನಂತರ ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಫೌಂಡೇಶನ್ ಅಂಡ್ ಅಕಾಡೆಮಿ ಸಂಸ್ಥಾಪಕರಾದ ನಿಸಾರ್ ಅಹ್ಮದ್ ಎನ್.ಕೆ.ನಿಧಿಕುಮಾರ್‌ರವರ ಮಾತುಗಳಿಗೆ ಧ್ವನಿಗೂಡಿಸಿ ಬಾಲಗಂಗಾಧರ ತಿಲಕರು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಭಾರತೀಯ ಸ್ವಾಯತ್ತತೆಗಾಗಿ ಚಳವಳಿ ನಡೆಸುವ ಮೂಲಕ ತಮ್ಮ ದೀರ್ಘ ರಾಜಕೀಯ ಜೀವನವನ್ನು ನಡೆಸಿದಂತಹ ವ್ಯಕ್ತಿ. ಅವರು ಅತ್ಯಂತ ಪ್ರಸಿದ್ಧ ಭಾರತೀಯ ರಾಜಕೀಯ ನಾಯಕರಾಗಿದ್ದರು. ಅವರ ಸಹ ಮಹಾರಾಷ್ಟçದ ಸಮಕಾಲೀನ ಗೋಖಲೆಯವರಂತಲ್ಲದೆ, ತಿಲಕರನ್ನು ತೀವ್ರಗಾಮಿ ರಾಷ್ಟಿçÃಯವಾದಿ ಎಂದು ಪರಿಗಣಿಸಲಾಗಿತ್ತು ಆದರೆ ಸಾಮಾಜಿಕ ಸಂಪ್ರದಾಯವಾದಿ ಎಂದು ಪರಿಗಣಿಸಲಾಗಿತ್ತು. ಮಂಡಲೆಯಲ್ಲಿ ದೀರ್ಘಾವಧಿಯ ಅವಧಿ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಅವರನ್ನು ಬಂಧಿಸಲಾಯಿತು. ಅವರ ರಾಜಕೀಯ ಜೀವನದ ಒಂದು ಹಂತದಲ್ಲಿ ಬ್ರಿಟಿಷ್ ಲೇಖಕ ಸರ್ ವ್ಯಾಲೆಂಟೈನ್ ಚಿರೋಲ್ ಅವರನ್ನು “ಭಾರತೀಯ ಅಶಾಂತಿಯ ಪಿತಾಮಹ” ಎಂದು ಸಹ ಕರೆದರು ಎಂದು ಓದಿ ತಿಳಿದಿದ್ದೇನೆ ಎಂದು ಧ್ವನಿಗೂಡಿಸಿದರು.

ನಂತರ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷರು ಹಾಗೂ ಅಖಿಲ ಭಾರತ ಡಾ ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಡಿ.ಕೆ.ಇಂದ್ರುಕುಮಾರ್‌ರವರು ಚಂದ್ರಶೇಖರ್ ಆಜಾದ್‌ರವರ ಕುರಿತು ಮಾತನಾಡಿ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್‌ನ ಸ್ಥಾಪಕರುಗಳಾದ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಪಕ್ಷದ ಇತರ ಮೂವರು ಪ್ರಮುಖ ನಾಯಕರಾದ ರೋಷನ್ ಸಿಂಗ್, ರಾಜೇಂದ್ರ ನಾಥ್ ಲಾಹಿರಿ ಮತ್ತು ಅಶ್ಫಾಕುಲ್ಲಾ ಖಾನ್ ಅವರ ಮರಣದ ನಂತರ ಇದೇ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ಅನ್ನು ಅದರ ಹೊಸ ಹೆಸರಿನಲ್ಲಿ ಮರು ಸಂಘಟಿಸಿದ ಭಾರತೀಯ ಕ್ರಾಂತಿಕಾರಿ ವ್ಯಕ್ತಿ ಎಂದರೇ ಚಂದ್ರಶೇಖರ್ ಆಜಾದ್. ಇವರು ಯುನೈಟೆಡ್ ಪ್ರಾಂತ್ಯಗಳ ಉನ್ನಾವೊ ಜಿಲ್ಲೆಯ ಬರ್ದಾರ್ಕಾ ಗ್ರಾಮದವರು ಮತ್ತು ಅವರ ಪೋಷಕರು ಸೀತಾರಾಮ್ ತಿವಾರಿ ಮತ್ತು ಜಾಗಾರಾಣಿ ದೇವಿ. ಹೆಚ್.ಎಸ್.ಆರ್.ಎ.ನ ಕಮಾಂಡರ್-ಇನ್-ಚೀಫ್ ಆಗಿ ಹೊರಡಿಸಲಾದ ಕರಪತ್ರಗಳಿಗೆ ಸಹಿ ಹಾಕುವಾಗ ಅವರು ಹೆಚ್ಚಾಗಿ “ಬಲರಾಜ್” ಎಂಬ ಗುಪ್ತನಾಮವನ್ನು ಬಳಸುತ್ತಿದ್ದರು, ಏಕೆಂದರೆ ಬ್ರಿಟೀಷರಿಗೆ ತಾವು ಯಾರು ಎಂಬ ಸುಳಿವು ಸಿಗದ ರೀತಿಯಲ್ಲಿ ಕ್ರಾಂತಿಕಾರಿ ಕಾರ್ಯಗಳನ್ನು ಮಾಡುತ್ತಿದ್ದ ವ್ಯಕ್ತಿ ಆಜಾದ್ ಆಗಿದ್ದರು.

ಆಜಾದ್ ರವರು ೧೯೨೨ ರಲ್ಲಿ ಮಹಾತ್ಮ ಗಾಂಧಿಯವರು ಅಸಹಕಾರ ಚಳುವಳಿಯನ್ನು ಸ್ಥಗಿತಗೊಳಿಸಿದ್ದರಿಂದ ನಿರಾಶೆಗೊಳಪಟ್ಟು ಯುವ ಕ್ರಾಂತಿಕಾರಿ ಮನ್ಮಥ್‌ನಾಥ್ ಗುಪ್ತಾ ಅವರನ್ನು ಭೇಟಿಯಾಗಿ ಅವರನ್ನು ರಾಮ್ ಪ್ರಸಾದ್ ಬಿಸ್ಮಿಲ್ ಅವರಿಗೆ ಪರಿಚಯಿಸಿದರು, ಅವರು ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ಎಂಬ ಕ್ರಾಂತಿಕಾರಿ ಸಂಘಟನೆಯನ್ನು ರಚಿಸಿದ್ದರು. ನಂತರ ಅವರು ಹೆಚ್.ಎಸ್.ಆರ್.ಎ.ನ ಸಕ್ರಿಯ ಸದಸ್ಯರಾದರು ಮತ್ತು ಇದೇ ಸಂಘಟನೆಗೆ ಹಣವನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಹೆಚ್ಚಿನ ನಿಧಿ ಸಂಗ್ರಹವು ಸರ್ಕಾರಿ ಆಸ್ತಿಯ ದರೋಡೆಗಳ ಮೂಲಕ ಮಾಡಿದರು ನಂತರ ೧೯೨೫ರ ಕಾಕೋರಿ ರೈಲು ದರೋಡೆ, ಲಾಲಾ ಲಜಪತ್ ರಾಯ್ ಅವರ ಹತ್ಯೆಗೆ ಪ್ರತೀಕಾರವಾಗಿ ೧೯೨೮ ರಲ್ಲಿ ಲಾಹೋರ್‌ನಲ್ಲಿ ಜಾನ್ ಪಿ. ಸೌಂಡರ್ಸ್ ಅವರ ಗುಂಡಿನ ದಾಳಿ ಮತ್ತು ಅಂತಿಮವಾಗಿ ೧೯೨೯ ರಲ್ಲಿ ಭಾರತದ ವೈಸ್‌ರಾಯ್ ರೈಲನ್ನು ಸ್ಫೋಟಿಸುವ ಪ್ರಯತ್ನದಲ್ಲಿ ಭಾಗಿಯಾಗಿದ್ದರು. ಆಜಾದ್ ಅವರು ತಮ್ಮ ಒಡನಾಡಿ ಶಿವವರ್ಮಾ ಅವರಿಂದ ಕಾರ್ಲ್ ಮಾರ್ಕ್್ಸ ಅವರ ಕಮ್ಯುನಿಸ್ಟ್ ಪಕ್ಷದ ಪ್ರಣಾಳಿಕೆಯನ್ನು ಓದಲು ಅವಕಾಶ ಪಡೆದರು. ಆಜಾದ್ ಕ್ರಾಂತಿಕಾರಿ ಪಕ್ಷದ ಸರ್ವೋಚ್ಚ ಸೇನಾಧಿಪತಿಯಾಗಿದ್ದಾಗ, ತಮ್ಮ ಕಾರ್ಯಕರ್ತರಿಗೆ ಸಮಾಜವಾದವನ್ನು ಕಲಿಸಲು ಅವರು ಆಗಾಗ್ಗೆ ಬರಹಗಾರ ಸತ್ಯಭಕ್ತರಿಂದ “ಎಬಿಸಿ ಆಫ್ ಕಮ್ಯುನಿಸಂ” ಎಂಬ ಪುಸ್ತಕವನ್ನು ಎರವಲು ಪಡೆಯುತ್ತಿದ್ದರು. ಭಾರತೀಯ ರಾಷ್ಟಿçÃಯ ಕಾಂಗ್ರೆಸ್ ಸದಸ್ಯರಾಗಿ ಮೋತಿಲಾಲ್ ನೆಹರು ಅವರು ಆಜಾದ್ ಅವರನ್ನು ಬೆಂಬಲಿಸಲು ನಿಯಮಿತವಾಗಿ ಹಣವನ್ನು ದಾನ ಮಾಡಿದರು, ಹೀಗೆ ಅಜಾದ್ ಅವರು ದೇಶದ ಸ್ವಾತಂತ್ರö್ಯಕ್ಕಾಗಿ ಹಲವಾರು ಕ್ರಾಂತಿಕಾರಿ ಕೆಲಸಗಳನ್ನು ಮಾಡಿ ದೇಶಕ್ಕೆ ಸ್ವಾತಂತ್ರö್ಯ ಸಂಗ್ರಾಮದಲ್ಲಿ ತಮ್ಮದೇ ಆದ ವಿಶಿಷ್ಠ ಕೊಡುಗೆಯನ್ನು ನೀಡಿದ್ದಾರೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್, ರಾಜ್ಯ ಉಪಾಧ್ಯಕ್ಷರಾದ ಡಿ.ಕೆ.ಇಂದ್ರುಕುಮಾರ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಇಲ್ಲಸ್ ಅಹ್ಮದ್, ತುಮಕೂರು ನಗರ ಅಧ್ಯಕ್ಷರಾದ ಮನು ಟಿ.ಎಲ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಯುವ ಘಟಕ ಅಧ್ಯಕ್ಷರು ಮೊಯಿನ್ ಅಹ್ಮದ್, ಅಲ್ಪಸಂಖ್ಯಾತರ ಘಟಕದ ನಗರ ಅಧ್ಯಕ್ಷರಾದ ತನ್ವೀರ್ ಅಹ್ಮದ್, ಡಾ. ಎ.ಪಿ.ಜಿ ಅಬ್ದುಲ್ ಕಲಾಂ ಫೌಂಡೇಶನ್ ಅಂಡ್ ಅಕಾಡೆಮಿ ಸಂಸ್ಥಾಪಕರಾದ ನಿಸಾರ್ ಅಹ್ಮದ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷರಾದ ಮಾನಂಗಿ ಚಂದ್ರಯ್ಯ ಎಸ್., ಮುಖಂಡರುಗಳಾದ ಜೆ.ಪಿ ನೇಶನ್, ಮಂಜು ಕುಮಾರ್, ನರಸಯ್ಯ ಉಪ್ಪಾರಹಳ್ಳಿ, ಕಿರಣ್ ಕುಮಾರ್ ವೈ.ಎಸ್, ರಂಗಸ್ವಾಮಯ್ಯ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *