Headlines

ಜೀವಂತ, ವಿಷಕಾರಿ ಹಾವನ್ನು ನೇರವಾಗಿ ಒಂಟೆಯ ಬಾಯಿಯೊಳಗೆ ಬಿಡ್ತಾರೆ..ಯಾಕೆ?

ಜೀವಂತ, ವಿಷಕಾರಿ ಹಾವನ್ನು ನೇರವಾಗಿ ಒಂಟೆಯ ಬಾಯಿಯೊಳಗೆ ಬಿಡ್ತಾರೆ..ಯಾಕೆ?

ಒಂಟೆ ಸಸ್ಯಾಹಾರಿ ಪ್ರಾಣಿ. ಆದರೆ ಜೀವಂತ ಮತ್ತು ವಿಷಕಾರಿ ಹಾವುಗಳನ್ನು ತಿನ್ನಲು ಹಿಂದಿನ ಕಾರಣವೇನು?.

’ಮರುಭೂಮಿಯ ಹಡಗು’ ಎಂದೂ ಕರೆಯಲ್ಪಡುವ ಒಂಟೆ ಒಂದು ವಿಶಿಷ್ಟ ಮತ್ತು ಶಕ್ತಿಶಾಲಿ ಪ್ರಾಣಿ. ಇದು ಮರುಭೂಮಿಯ ಬಿಸಿಲು ವಾತಾವರಣದಲ್ಲಿಯೂ ಸಹ ಹಲವು ದಿನಗಳವರೆಗೆ ನೀರು ಮತ್ತು ಆಹಾರವಿಲ್ಲದೆ ಬದುಕುವ ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಏಕೆ ಎಂಥ ಬಿಸಿಲಿದ್ದರೂ ಒಂಟೆ ಏಕಕಾಲದಲ್ಲಿ ಸಾಕಷ್ಟು ಆಹಾರ ತಿನ್ನಬಹುದು. ಇದರೊಂದಿಗೆ 100-150 ಲೀಟರ್ ನೀರನ್ನು ಸಹ ಕುಡಿಯಬಹುದು ಮತ್ತು ಗಂಟೆಗೆ 60 ಕಿ.ಮೀ ವೇಗದಲ್ಲಿ ಓಡಬಹುದು.

ಒಂಟೆಯ ಬಗ್ಗೆ ಮತ್ತೊಂದು ವಿಶಿಷ್ಟ ವಿಷಯವೆಂದರೆ ಒಂಟೆ ಸಸ್ಯಾಹಾರಿ ಪ್ರಾಣಿ, ಆದರೆ ಇದರ ಹೊರತಾಗಿಯೂ ಅದು ಜೀವಂತ ಮತ್ತು ವಿಷಕಾರಿ ಹಾವುಗಳನ್ನು ತಿನ್ನುತ್ತದೆ. ಹೌದು ಇದರ ಹಿಂದಿನ ಕಾರಣವೇನೆಂದು ಇಲ್ಲಿ ತಿಳಿಯೋಣ ಬನ್ನಿ…

ವಾಸ್ತವವಾಗಿ ಒಂಟೆಗಳು ವಿಚಿತ್ರವಾದ ಕಾಯಿಲೆಯನ್ನು ಹೊಂದಿದ್ದು, ಕಾಯಿಲೆಯ ಪರಿಣಾಮವಾಗಿ ಅವು ತಿನ್ನುವುದು ಮತ್ತು ಕುಡಿಯುವುದನ್ನು ನಿಲ್ಲಿಸುತ್ತವೆ. ಅಷ್ಟೇ ಅಲ್ಲ, ಒಂಟೆಯ ದೇಹವು ಗಟ್ಟಿಯಾಗಲು ಪ್ರಾರಂಭಿಸುತ್ತದೆ. ಆಲಸ್ಯ, ಊತ, ಜ್ವರ ಮತ್ತು ರಕ್ತಹೀನತೆಯಂತಹ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತವೆ.

ಇದೇ ಕಾರಣಕ್ಕಾಗಿ ಒಂಟೆಗಳಿಗೆ ಈ ಕಾಯಿಲೆಗೆ ಔಷಧಿಯಾಗಿ ಅವುಗಳ ಮಾಲೀಕರು ಜೀವಂತ ಮತ್ತು ವಿಷಕಾರಿ ಹಾವನ್ನು ತಿನ್ನಿಸುತ್ತಾರೆ. ಚಿಕಿತ್ಸೆ ಕೊಡುವಾಗ ಒಂಟೆಯ ಮಾಲೀಕರು ಅದರ ಬಾಯಿಯನ್ನು ತೆರೆದು ನೇರವಾಗಿ ಜೀವಂತ ಮತ್ತು ವಿಷಕಾರಿ ಹಾವನ್ನು ಅದರ ಬಾಯಿಗೆ ಹಾಕುತ್ತಾರೆ.

ಒಂಟೆಯ ಬಾಯಿಯಲ್ಲಿ ಹಾವನ್ನು ಹಾಕುವುದರ ಜೊತೆಗೆ, ಹಾವು ನೇರವಾಗಿ ಒಂಟೆಯ ಹೊಟ್ಟೆಗೆ ಹೋಗುವಂತೆ ಅದರ ಬಾಯಿಯಲ್ಲಿ ನೀರನ್ನು ಸಹ ಸುರಿಯಲಾಗುತ್ತದೆ.

ಒಂಟೆಗಳಲ್ಲಿ ಬರುವ ಈ ಅಪರೂಪದ ರೋಗವನ್ನು ‘ಹ್ಯಾಮ್’ ಎಂದು ಕರೆಯಲಾಗುತ್ತದೆ, ಇದರರ್ಥ ‘ಜೀವಂತ ಹಾವನ್ನು ನುಂಗುವುದು’. ಈ ಕಾಯಿಲೆಯಿಂದ ಬಳಲುತ್ತಿರುವ ಒಂಟೆಗಳಿಗೆ ಚಿಕಿತ್ಸೆ ನೀಡಲು, ಒಂಟೆ ಮಾಲೀಕರು ಒಂಟೆಯ ಬಾಯಿಯಲ್ಲಿ ಜೀವಂತ ವಿಷಕಾರಿ ಹಾವಿನಂತಹ ನಾಗರಹಾವನ್ನು ಹಾಕುತ್ತಾರೆ. ವಿಷಪೂರಿತ ಹಾವಿನ ವಿಷವು ಈ ರೋಗವನ್ನು ಗುಣಪಡಿಸುತ್ತದೆ ಎಂದು ನಂಬಲಾಗಿದೆ.

Source link

Leave a Reply

Your email address will not be published. Required fields are marked *