ನವದೆಹಲಿ, ಜೂನ್ 27: ಮುಂಬರುವ ತಿಂಗಳಲ್ಲಿ ಹಬ್ಬ ಹರಿದಿನಗಳ ಸಂಖ್ಯೆ ಕಡಿಮೆ ಇದೆ. ಬ್ಯಾಂಕುಗಳಿಗೆ ರಜಾದಿನಗಳೂ (Bank Holidays) ಕಡಿಮೆ ಇವೆ. ಒಟ್ಟಾರೆ 13 ರಜಾ ದಿನಗಳು ಇವೆಯಾದರೂ ಹೆಚ್ಚಿನ ರಾಜ್ಯಗಳಲ್ಲಿ ಶನಿವಾರ ಮತ್ತು ಭಾನುವಾರಗಳು ಮಾತ್ರವೇ ರಜಾ ದಿನಗಳಾಗಿವೆ. ಮೊಹರಂ ಹಬ್ಬ ಜುಲೈ 6ರಂದು ಇದೆಯಾದರೂ, ಅಂದು ಭಾನುವಾರವಾದ್ದರಿಂದ ಬ್ಯಾಂಕುಗಳಿಗೆ ವಾರದ ರಜಾದಿನವೂ ಹೌದು. ಖರ್ಚಿ ಪೂಜೆ, ಗುರುಗೋವಿಂಗ್ ಜಯಂತಿ, ಹರೇಲಾ, ತಿರೋತ್ ಸಿಂಗ್ ಪುಣ್ಯ ತಿಥಿ, ಕೇರ್ ಪೂಜಾ ಇತ್ಯಾದಿ ಹಬ್ಬ ಹರಿದಿನಗಳಿಗೆ ರಜೆ ಇವೆಯಾದರೂ ಒಂದೊಂದು ರಾಜ್ಯಗಳಿಗೆ ಆ ರಜೆ ಸೀಮಿತವಾಗಿದೆ.
2025ರ ಜುಲೈ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ
- ಜುಲೈ 3, ಗುರುವಾರ: ಖರ್ಚಿ ಪೂಜೆ, (ತ್ರಿಪುರಾದಲ್ಲಿ ರಜೆ)
- ಜುಲೈ 5, ಶನಿವಾರ: ಗುರು ಹರಗೋಬಿಂದ್ಜಿ ಜಯಂತಿ (ಜಮ್ಮ ಕಾಶ್ಮೀರದಲ್ಲಿ ರಜೆ)
- ಜುಲೈ 6: ಭಾನುವಾರದ ರಜೆ
- ಜುಲೈ 12: ಎರಡನೇ ಶನಿವಾರದ ರಜೆ
- ಜುಲೈ 13: ಭಾನುವಾರದ ರಜೆ
- ಜುಲೈ 14, ಸೋಮವಾರ: ಬೇಹ ಡೀಂಖ್ಲಾಮ್ (ಮೇಘಾಲಯದಲ್ಲಿ ರಜೆ)
- ಜುಲೈ 16, ಬುಧವಾರ: ಹರೇಲಾ ಹಬ್ಬ (ಉತ್ತರಾಖಂಡ್ನ ಡೆಹ್ರಾಡೂನ್ನಲ್ಲಿ ರಜೆ)
- ಜುಲೈ 17, ಗುರುವಾರ: ಸ್ವಾತಂತ್ರ್ಯ ಯೋಧ ಯು ತಿರೋತ್ ಸಿಂಗ್ ಪುಣ್ಯತಿಥಿ (ಮೇಘಾಲಯದಲ್ಲಿ ರಜೆ)
- ಜುಲೈ 19, ಶನಿವಾರ: ಕೇರ್ ಪೂಜಾ (ತ್ರಿಪುರಾದಲ್ಲಿ ರಜೆ)
- ಜುಲೈ 20: ಭಾನುವಾರದ ರಜೆ
- ಜುಲೈ 26: ನಾಲ್ಕನೇ ಶನಿವಾರದ ರಜೆ
- ಜುಲೈ 27: ಭಾನುವಾರದ ರಜೆ
- ಜುಲೈ 28, ಸೋಮವಾರ: ದ್ರುಪಕ ಶೇಝಿ ಹಬ್ಬ (ಸಿಕ್ಕಿಂನಲ್ಲಿ ರಜೆ)
ಇದನ್ನೂ ಓದಿ: ಸೈಬರ್ ವಂಚನೆ ತಪ್ಪಿಸಲು ಟೆಲಿಕಾಂ ಇಲಾಖೆ ಹೊಸ ಕ್ರಮ; ಮೊಬೈಲ್ ಐಡಿ ಪರಿಶೀಲನೆಗೆ ಪ್ರತ್ಯೇಕ ಪ್ಲಾಟ್ಫಾರ್ಮ್?
ಕರ್ನಾಟಕದಲ್ಲಿ ಜುಲೈನಲ್ಲಿ ಬ್ಯಾಂಕ್ ರಜಾದಿನಗಳು
- ಜುಲೈ 6: ಭಾನುವಾರದ ರಜೆ
- ಜುಲೈ 12: ಎರಡನೇ ಶನಿವಾರದ ರಜೆ
- ಜುಲೈ 13: ಭಾನುವಾರದ ರಜೆ
- ಜುಲೈ 20: ಭಾನುವಾರದ ರಜೆ
- ಜುಲೈ 26: ನಾಲ್ಕನೇ ಶನಿವಾರದ ರಜೆ
- ಜುಲೈ 27: ಭಾನುವಾರದ ರಜೆ
ಕರ್ನಾಟಕದಲ್ಲಿ ಜುಲೈನಲ್ಲಿ ಎರಡು ಶನಿವಾರ ಮತ್ತು ನಾಲ್ಕು ಭಾನುವಾರ ಹೊರತುಪಡಿಸಿ ಬೇರೆ ಯಾವುದೇ ರಜೆಗಳಿಲ್ಲ. ಹೀಗಾಗಿ, ಜುಲೈನಲ್ಲಿ ಕರ್ನಾಟಕದಲ್ಲಿ ಬ್ಯಾಂಕುಗಳು 25 ದಿನ ಬಾಗಿಲು ತೆರೆದಿರುತ್ತವೆ.
ಇದನ್ನೂ ಓದಿ: Credit Score: ಸಂಬಳ ಹೆಚ್ಚಿದರೆ ಕ್ರೆಡಿಟ್ ಸ್ಕೋರ್ ಹೆಚ್ಚುತ್ತಾ? ಅಂಕ ನಿರ್ಧಾರ ಆಗೋದು ಹೇಗೆ?
ಬ್ಯಾಂಕ್ ಕಚೇರಿ ಬಾಗಿಲು ಮುಚ್ಚಿರೂ ಹೆಚ್ಚಿನ ಬ್ಯಾಂಕಿಂಗ್ ಸೇವೆಗಳು ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯ ಇರುತ್ತದೆ. ಕ್ಯಾಷ್ ಪಡೆಯಬೇಕೆಂದವರಿಗೆ ವರ್ಷದ 365 ದಿನವೂ ಇರುವ ಎಟಿಎಂಗಳನ್ನು ಬಳಸಬಹುದು. ನೆಟ್ಬ್ಯಾಂಕಿಂಗ್, ಯುಪಿಐ ಮೂಲಕ ಹಣ ರವಾನೆ ಮೊದಲಾದ ಟ್ರಾನ್ಸಾಕ್ಷನ್ ಮಾಡಬಹುದು. ಆನ್ಲೈನ್ನಲ್ಲಿ ಆರ್ಟಿಜಿಎಸ್, ನೆಫ್ಟ್ ಪೇಮೆಂಟ್ ಮಾಡಬಹುದಾದರೂ ರಜಾ ದಿನಗಳಲ್ಲಿ ಅವು ಪ್ರೋಸಸ್ ಆಗುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ