Headlines

ಟಾಯ್ಲೆಟ್​​ನಲ್ಲಿ ಕುಳಿತು ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಹಾಜರಾದ ಆರೋಪಿ; ವಿಡಿಯೋಗೆ ನೆಟ್ಟಿಗರ ಆಕ್ರೋಶ

ಟಾಯ್ಲೆಟ್​​ನಲ್ಲಿ ಕುಳಿತು ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಹಾಜರಾದ ಆರೋಪಿ; ವಿಡಿಯೋಗೆ ನೆಟ್ಟಿಗರ ಆಕ್ರೋಶ


ಅಹಮದಾಬಾದ್, ಜೂನ್ 27: ಗುಜರಾತ್ ಹೈಕೋರ್ಟ್‌ನ (Gujarat High Court) ವರ್ಚುವಲ್ ವಿಚಾರಣೆಗೆ ಹಾಜರಾದ ವ್ಯಕ್ತಿಯೊಬ್ಬರು ಟಾಯ್ಲೆಟ್ ಸೀಟಿನ ಮೇಲೆ ಕುಳಿತು ವಿಚಾರಣೆಯಲ್ಲಿ ಭಾಗಿಯಾದ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜೂನ್ 20ರಂದು ನ್ಯಾಯಮೂರ್ತಿ ನಿರ್ಜಾರ್ ಎಸ್ ದೇಸಾಯಿ ಅವರ ಪೀಠದ ಮುಂದೆ ಈ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಆ ವ್ಯಕ್ತಿ “ಸಮದ್ ಬ್ಯಾಟರಿ” ಎಂಬ ಹೆಸರಿನಲ್ಲಿ ವರ್ಚುವಲ್ ಕೋರ್ಟ್ ವಿಚಾರಣೆಗೆ ಲಾಗಿನ್ ಆಗಿದ್ದಾನೆ. ಆತ ಕುತ್ತಿಗೆಗೆ ಬ್ಲೂಟೂತ್ ಇಯರ್‌ಫೋನ್ ಧರಿಸಿರುವುದು ಕಂಡುಬಂದಿದೆ.

ಕೋರ್ಟ್ ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ಅವನು ಆರಂಭದಲ್ಲಿ ತನ್ನ ಫೋನ್ ಅನ್ನು ದೂರದಲ್ಲಿ ಇರಿಸಿದನು. ಆಗ ಆತ ಟಾಯ್ಲೆಟ್​​​ನಲ್ಲಿ ಕುಳಿತಿರುವುದು ಕಂಡಿತು. ಹಾಗೇ, ಬಾತ್​​ರೂಂನಿಂದ ಹೊರಬರುವ ಮೊದಲು ಅವನು ತನ್ನನ್ನು ತಾನು ಒರೆಸಿಕೊಳ್ಳುವುದನ್ನು ದೃಶ್ಯಗಳು ತೋರಿಸುತ್ತವೆ. ಅವನು ಮತ್ತೊಂದು ರೂಂನಲ್ಲಿ ಕುಳಿತು ವಿಚಾರಣೆಗೆ ಹಾಜರಾಗುವ ಮೊದಲು ಸ್ವಲ್ಪ ಹೊತ್ತು ಮೊಬೈಲನ್ನು ಮೇಜಿನ ಮೇಲಿಟ್ಟು ಕಣ್ಮರೆಯಾಗುತ್ತಾನೆ.

ಇದನ್ನೂ ಓದಿ: ವಿದ್ಯುತ್ ಕನಿಷ್ಠ ಶುಲ್ಕಕ್ಕೆ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ವಿಚಾರಣೆಯ ಸಮಯದಲ್ಲಿ ನ್ಯಾಯಾಲಯದ ಕೊಠಡಿಯಲ್ಲಿ ವಕೀಲರು ತಮ್ಮ ವಾದಗಳನ್ನು ಮಂಡಿಸುತ್ತಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು. ನ್ಯಾಯಾಲಯವು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದ ವಿಷಯದ ವಿಚಾರಣೆ ನಡೆಸುತ್ತಿತ್ತು. ಅನುಚಿತವಾಗಿ ವರ್ತಿಸಿದ ಆ ವ್ಯಕ್ತಿ ಕ್ರಿಮಿನಲ್ ಪ್ರಕರಣದಲ್ಲಿ ದೂರುದಾರರಾಗಿದ್ದರು.

ಕೊವಿಡ್ -19 ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ವರ್ಚುವಲ್ ಮೀಟಿಂಗ್ ದೈನಂದಿನ ಜೀವನದ ಭಾಗವಾಗಿದ್ದು, ವೈಯಕ್ತಿಕ ಮತ್ತು ವೃತ್ತಿಪರ ಸ್ಥಳಗಳ ನಡುವಿನ ಗೆರೆಗಳನ್ನು ಮಸುಕುಗೊಳಿಸುತ್ತಿವೆ.

ಇದನ್ನೂ ಓದಿ: ಲಿವ್-ಇನ್ ರಿಲೇಶನ್​ಶಿಪ್ ಭಾರತೀಯ ಮಧ್ಯಮ ವರ್ಗದ ಮೌಲ್ಯಗಳಿಗೆ ವಿರುದ್ಧವಾಗಿದೆ: ಅಲಹಾಬಾದ್ ಹೈಕೋರ್ಟ್

ಕೋರ್ಟ್ ಕಲಾಪಕ್ಕೆ ಬೆಲೆ ಕೊಡದೆ ವರ್ಚುವಲ್ ಕೋರ್ಟ್ ವಿಚಾರಣೆಗಳ ಸಮಯದಲ್ಲಿ ಅನುಚಿತ ವರ್ತನೆ ಸಂಭವಿಸಿದ್ದು ಇದೇ ಮೊದಲಲ್ಲ. ಏಪ್ರಿಲ್‌ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾಗುವಾಗ ಸಿಗರೇಟ್ ಸೇದುತ್ತಿದ್ದ ದಾವೆದಾರರೊಬ್ಬರಿಗೆ ಗುಜರಾತ್ ಹೈಕೋರ್ಟ್ 50,000 ರೂ. ದಂಡ ವಿಧಿಸಿತ್ತು. ಮಾರ್ಚ್‌ನಲ್ಲಿ ಗುಜರಾತ್ ಹೈಕೋರ್ಟ್ ಶೌಚಾಲಯದಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾದ ವ್ಯಕ್ತಿಗೆ 2 ಲಕ್ಷ ರೂ. ದಂಡ ವಿಧಿಸಿತ್ತು. ಆ ಘಟನೆಗೆ ಒಂದು ತಿಂಗಳ ಮೊದಲು ತನ್ನ ಹಾಸಿಗೆಯ ಮೇಲೆ ಮಲಗಿ ವಿಚಾರಣೆಯಲ್ಲಿ ಭಾಗವಹಿಸಿದ್ದಕ್ಕಾಗಿ ಇನ್ನೊಬ್ಬ ವ್ಯಕ್ತಿಗೆ 25,000 ರೂ. ದಂಡ ವಿಧಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 4:28 pm, Fri, 27 June 25





Source link

Leave a Reply

Your email address will not be published. Required fields are marked *