ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿ ಎಂದರೆ ಅದು ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಗಳ ಅಪರೂಪದ ಫೋಟೊಗಳು ವೈರಲ್ ಆಗುತ್ತಿವೆ.

ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಜೋಡಿ ಅಂದ್ರೆ ಅದು ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ. ರಾಜಕುಮಾರ್ ನಟನೆ ಮತ್ತು ಗಾಯನದ ಮೂಲಕ ಸದ್ದು ಮಾಡಿದ್ರೆ, ಪಾರ್ವತಮ್ಮ ಅವರು ಸಿನಿಮಾದ ನಿರ್ಮಾಣದ ಮೂಲಕ ಹೆಸರು ಮಾಡಿದ್ದರು.

ಜೂನ್ 25ರಂದು ರಾಜಕುಮಾರ್ (Dr Rajkumar) ಮತ್ತು ಪಾರ್ವತಮ್ಮ ಅವರ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿಈ ಜೋಡಿಗಳ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಜೋಡಿಯ ದಾಂಪತ್ಯ ಜೀವನದ ಮಧುರ ಕಥೆ ಇಲ್ಲಿದೆ.

ಡಾ. ರಾಜ್ ಮತ್ತು ಪಾರ್ವತಮ್ಮ ಮದುವೆ ಕಥೆ (marriage story) ಇಂಟ್ರೆಸ್ಟಿಂಗ್ ಆಗಿದೆ. ಪಾರ್ವತಮ್ಮ ರಾಜಕುಮಾರ್ ಅವರ ತಂದೆಯ ಕುಟುಂಬದವರು. ಅವರು ಹುಟ್ಟಿದಾಗಲೇ ರಾಜಕುಮಾರ್ ಅವರ ತಂದೆ ನಾಮಕರಣಕ್ಕೆ ಹೋಗಿ, ಇವಳು ನಮ್ಮ ಮುತ್ತುರಾಜು ಹೆಂಡ್ತಿ ಎಂದು ಹೇಳಿದ್ದರಂತೆ.

ಒಂದು ಸಲ ರಾಜ್ ಅವರಿಗೆ ಅವರ ತಂದೆ ಪಾರ್ವತಿಯನ್ನು ಕರೆದುಕೊಂಡು ಬಾ ಎಂದಿದ್ದರಂತೆ. ಪಾರ್ವತಮ್ಮ ಅಂದು ಬೀದಿಯಲ್ಲಿ ಹೊರಳಾಡುತ್ತಾ ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಅವರಿಗೆ ಆವಾಗ ಕೇವಲ 7 ವರ್ಷ ವಯಸ್ಸಾಗಿತ್ತು.

ಆ ಸಮಯದಲ್ಲಿ ಡಾ. ರಾಜ್ ಅವರಿಗೆ ಸೈಕಲ್ ಸವಾರಿಗೆ ಶೋಕಿ ಇತ್ತಂತೆ. ಸೈಕಲ್ ಏರಿ, ಯಡಿಯೂರಿಗೆ ಹೋದ ರಾಜ್ ಗೆ ಅಲ್ಲೇ ಬೀದಿಯಲ್ಲಿ ಪಾರ್ವತಿ ಕಾಣಸಿಕ್ಕರು. ಅವರನ್ನು ನೋಡಿ ರಾಜ್ ಅಯ್ಯೋ ಈಕೆ ಒಳ್ಳೆ ಹೆಗ್ಗಣದ ಹಾಗೆ ಇದ್ದಾರೆ, ಬಣ್ಣ ಹೇಗಿದೆ. ಇವಳನ್ನು ಅಪ್ಪಾಜಿ ನನಗೆ ಮದುವೆ ಮಾಡಿಸ್ತಾರ ಎಂದು ಹೇಳಿ ನಕ್ಕಿದ್ದರಂತೆ.

ಕೊನೆಗೆ ಅಪ್ಪಾಜಿಯ ಆಸೆಯಂತೆ, ಕೊಟ್ಟ ಮಾತಿನಂತೆ 1953ನೇ ಇಸವಿಯಲ್ಲಿ ಜೂನ್ 25ರಂದು ಪಾರ್ವತಿಯ ಕೈ ಹಿಡಿದರು ಡಾ. ರಾಜ್. ಮದುವೆಯಾದಾಗ ಅವರಿಗೆ 24 ವರ್ಷವಾಗಿದ್ದರೆ, ಪಾರ್ವತಮ್ಮ (Parvathamma Rajkumar) ಅವರಿಗೆ ಕೇವಲ 13 ವರ್ಷ ವಯಸ್ಸಾಗಿತ್ತು.

ಡಾ. ರಾಜಕುಮಾರ್ ಅವರು 2006ರ ಏಪ್ರಿಲ್ 12 ರಂದು ನಿಧನ ಹೊಂದಿದ್ದರೆ, 2017ರ ಮೇ 31ರಂದು ಪಾರ್ವತಮ್ಮ ರಾಜ್ಕುಮಾರ್ ಅಗಲಿದರು. ಆದರೂ ಇಂದಿಗೂ ಅವರ ಮಕ್ಕಳು ನಾವು ಕಂಡ ಅತ್ಯುತ್ತಮ ಜೋಡಿಗಳು ಅಂದರೆ ಅದು ಅಪ್ಪಾಜಿ ಮತ್ತು ಅಮ್ಮ ಅಂತಾನೆ ಹೇಳುತ್ತಾರೆ. ಇವರಿಬ್ಬರು ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದವರೂ ಕೂಡ ಹೌದು.

ಡಾ. ರಾಜ್ ಕುಮಾರ್ ಬ್ಲ್ಯಾಕ್ ಆಂಡ್ ವೈಟ್ ಸಿನಿಮಾದಿಂದ ಹಿಡಿದು, ಕೊನೆಯ ಶಬ್ಧವೇದಿ ಸಿನಿಮಾದವರೆಗೂ ಸೂಪರ್ ಸ್ಟಾರ್ ಆಗಿಯೇ ಮೆರೆದಿದ್ದರು. ಇವರ ಪ್ರತಿಯೊಂದು ಸಿನಿಮಾಗಳನ್ನು ಜನರು ಇಷ್ಟಪಟ್ಟು ನೋಡುತ್ತಿದ್ದರು. ಇವರ ಗಾಯನಕ್ಕೆ ಮನಸೋಲದವರೇ ಇರಲಿಲ್ಲ.

ಡಾ. ರಾಜಕುಮಾರ್ ಅವರನ್ನು ವೀರಪ್ಪನ್ ಕಿಡ್ನಾಪ್ ಮಾಡಿದ್ದ ನಂತರ ಅವರು ಕುಗ್ಗುತ್ತಾ ಸಾಗಿ ಕೊನೆ ತಮ್ಮ 76ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದರು ರಾಜಕುಮಾರ್ ಎಂದೇ ಖ್ಯಾತಿ ಪಡೆದ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್ ಅವರು.

ಪಾರ್ವತಮ್ಮ ರಾಜಕುಮಾರ್, ಪ್ರತಿಕ್ಷಣ ಗಂಡನ ಬೆನ್ನೆಲುಬಿನಂತೆ ನಿಂತವರು. ಪೂರ್ಣಿಮಾ ಎಂಟರ್ ಪ್ರೈಸರ್ ಮೂಲಕ ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿ, ಹೊಸ ಹೊಸ ನಾಯಕಿಯರನ್ನು ಕನ್ನಡಕ್ಕೆ ಪರಿಚಯಿಸಿದ ಕೀರ್ತಿ ಪಾರ್ವತಮ್ಮನವರದ್ದು.

Source link
ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ಜೋಡಿಯ ಅಪರೂಪದ ಫೋಟೊಗಳು