Headlines

ಡಾ ಶ್ಯಾಮಾ ಪ್ರಸಾದ್ ಮುಖರ್ಜಿ ದೇಶದ ಐಕ್ಯತೆ ಮತ್ತು ಅಖಂಡತೆಗಾಗಿ ತಮ್ಮ ಬದುಕನ್ನೇ ಮುಡುಪಿಟ್ಟವರು: ಯಡಿಯೂರಪ್ಪ

ಡಾ ಶ್ಯಾಮಾ ಪ್ರಸಾದ್ ಮುಖರ್ಜಿ ದೇಶದ ಐಕ್ಯತೆ ಮತ್ತು ಅಖಂಡತೆಗಾಗಿ ತಮ್ಮ ಬದುಕನ್ನೇ ಮುಡುಪಿಟ್ಟವರು: ಯಡಿಯೂರಪ್ಪ


ಬೆಂಗಳೂರು, ಜೂನ್ 23: ಇವತ್ತು ಡಾ ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆ (ಬಲಿದಾನ್ ದಿವಸ್) ಮತ್ತು ಜಗನ್ನಾಥ್ ಜೋಶಿಯವರ ಜನ್ಮ ವಾರ್ಷಿಕೋತ್ಸವ. ಈ ವಿಶೇಷ ಸಂದರ್ಭಕ್ಕಾಗಿ ನಗರದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ, ಶ್ಯಾಮಾ ಪ್ರಸಾದ್ ಮುಖರ್ಜಿ ಅವರು ಬಿಜೆಪಿಯ ಮೂಲಪಕ್ಷವಾದ ಜನಸಂಘದ ಸಂಸ್ಥಾಪಕರು ಮತ್ತು ದೇಶದ ಅಖಂಡತೆ ಮತ್ತು ಏಕತೆಗಾಗಿ ಪ್ರಾಣವನ್ನು ಬಲಿಕೊಟ್ಟವರು ಎಂದು ಹೇಳಿದರು. ರಾಷ್ಟ್ರವಾದಿ ರಾಜಕಾರಣವನ್ನು ಪ್ರತಿಪಾದಿಸಿದ ಮುಖರ್ಜಿಯವರು, ಏಕ್ ವಿಧಾನ್ ಏಕ್ ಪ್ರಧಾನ್ ಮತ್ತು ಏಕ್ ಸಂವಿಧಾನ್ ಘೋಷಣೆಯನ್ನು ಮಾಡಿದವರು ಎಂದು ಯಡಿಯೂರಪ್ಪ ಹೇಳಿದರು.

ಇದನ್ನೂ ಓದಿ:  ಸಿದ್ದರಾಮಯ್ಯ ಮುಂದೆಯೇ ಯಡಿಯೂರಪ್ಪರನ್ನು ಟೀಕಿಸಿದ ಬಿಜೆಪಿ ನಾಯಕ ಅರವಿಂದ ಲಿಂಬಾವಳಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *