ಸಿಸಿಟಿವಿಯಲ್ಲಿ ಖದೀಮರ ಕೈಚಳಕ ಸೆರೆ
ರಾಯಚೂರು, ಜೂನ್ 29: ಡೆಪಾಸಿಟ್ ಮಷಿನ್ಗೆ ಅಸಲಿ ನೋಟುಗಳ ಜೊತೆಗೆ ಕಂತೆ ಕಂತೆ ಖೋಟಾ ನೋಟುಗಳನ್ನ (Fake Currency) ಹಾಕಿ ಅಸಲಿ ಮಾಡುವ ದಂಧೆಯೊಂದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲೆಯ ಮಾನ್ವಿ ಪೊಲೀಸರು ಹತ್ತು ಜನರನ್ನು ಬಂಧಿಸಿದ್ದಾರೆ (Arrested). ರಾಯಚೂರು ಮೂಲದ ವಿರೂಪಾಕ್ಷ, ಶೇಖರ್, ಖಾಜಾ ಹುಸೇನ್, ಕೊಪ್ಪಳ ಮೂಲದ ಭೀಮೇಶ್ ಸೇರಿ 10 ಜನರನ್ನು ಬಂಧಿಸಲಾಗಿದ್ದು, ಒಂದು ಕಾರು, ನಾಲ್ಕು ಬೈಕ್ ಜಪ್ತಿ ಮಾಡಲಾಗಿದೆ.
ಸಾರ್ವಜನಿಕವಾಗಿ ಖೋಟಾ ನೋಟು ಚಲಾವಣೆಗೆ ಯತ್ನ
ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಘಟನೆ ನಡೆದಿದೆ. ಇದೇ ಮೇ ತಿಂಗಳಲ್ಲಿ ಮಾನ್ವಿ ಠಾಣೆಯಲ್ಲಿ ಎರಡು ಎಫ್ಐಆರ್ ದಾಖಲಾಗಿದ್ದವು. ಆರೋಪಿ ಶೇಖರ್ನಿಂದ ತನ್ನ ಸಹೋದರ ವಿರೂಪಾಕ್ಷ ಖಾತೆಗೆ 20,500 ರೂ ಖೋಟಾ ನೋಟುಗಳನ್ನು ಡೆಪಾಸಿಟ್ ಮಾಡಿ, ಸಾರ್ವಜನಿಕವಾಗಿ ಚಲಾವಣೆಗೆ ಯತ್ನಿಸಲಾಗಿದೆ.
ಇದನ್ನೂ ಓದಿ: ಕಂದನ ನಾಮಕಣರಕ್ಕೆ ಕೂಡಿಟ್ಟದ್ದ ಹಣವೂ ಬಿಡದ ಖದೀಮರು: ಮನೆಯವರು ಕಂಗಾಲು
ಇದನ್ನೂ ಓದಿ
ಈ ಪೈಕಿ 2500 ಅಸಲಿ ನೋಟು ಮಾತ್ರ ಡೆಪಾಸಿಟ್ ಮಷಿನ್ನಲ್ಲಿ ಜಮೆ ಆಗಿದೆ. ಬಾಕಿ 18 ಸಾವಿರ ಮೌಲ್ಯದ 500 ಮುಖ ಬೆಲೆಯ 36 ಖೋಟಾ ನೋಟುಗಳು ಮಷಿನ್ನಲ್ಲಿ ಸಿಕ್ಕಿಕೊಂಡಿವೆ. ಆಗ ಹಣ ಜಮೆ ಆಗಿಲ್ಲ ಅಂತ ತನ್ನ ಖಾಸಗಿ ಬ್ಯಾಂಕ್ಗೆ ಆರೋಪಿ ವಿರುಪಾಕ್ಷ ದೂರು ನೀಡಿದ್ದ.
ಈ ವೇಳೆ ಪರಿಶೀಲಿಸಿದಾಗ ಡೆಪಾಸಿಟ್ ಮಷಿನ್ನಲ್ಲಿ ಖೋಟಾ ನೋಟುಗಳು ಸಿಲುಕಿರುವುದು ಪತ್ತೆ ಆಗಿದೆ. ಕೂಡಲೇ ಬ್ಯಾಂಕ್ ಸಿಬ್ಬಂದಿಯಿಂದ ಮಾನ್ವಿ ಠಾಣೆ ಪೊಲೀಸರಿಗೆ ವಿರೂಪಾಕ್ಷ ವಿರುದ್ಧ ದೂರು ನೀಡಲಾಗಿದೆ. ಇದೇ ಮಾದರಿಯಲ್ಲಿ ಮಾನ್ವಿ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಸದ್ಯ ಮಾನ್ವಿ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಪೆಟ್ರೋಲ್ ಸುರಿದು ಎಟಿಎಂ ಒಡೆಯಲು ಕಳ್ಳರ ಯತ್ನ: ಪರಾರಿ
ಪೆಟ್ರೋಲ್ ಸುರಿದು ಎಟಿಎಂ ಒಡೆಯಲು ಕಳ್ಳರು ಮುಂದಾಗಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಬಳಿಕ ಪರಾರಿ ಆಗಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಮಧ್ಯರಾತ್ರಿ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ಇದನ್ನೂ ಓದಿ: ಬಹುದಿನಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಜಾರಕಿಹೋಳಿ ಅಣ್ತಮ್ಮಸ್, ಮಾತಿಲ್ಲ ಕಥೆಯಿಲ್ಲ..
ಕೆನರಾ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ನುಗ್ಗಿದ್ದ ಕಳ್ಳರು, ಕಬ್ಬಿಣದ ಸರಳು ಬಳಸಿ ಎಟಿಎಂ ಒಡೆಯಲು ಯತ್ನಿಸಿದ್ದಾರೆ. ಇದು ಸಾಧ್ಯವಾಗದೇ ಇದ್ದಾಗ ಪೆಟ್ರೋಲ್ ಸುರಿದಿದ್ದಾರೆ. ಈ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತುಕೊಂಡಿದ್ದು, ದಟ್ಟ ಹೊಗೆ ಆವರಿಸುತ್ತಿದ್ದಂತೆ ಎಸ್ಕೇಪ್ ಆಗಿದ್ದಾರೆ. ಬಿಳಿಚೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 12:53 pm, Sun, 29 June 25