Headlines

ಡ್ರೈವಿಂಗ್‌ ಲೈಸೆನ್ಸ್‌ ಪಡೆಯಲು ಬಂದು ರಾತ್ರೋರಾತ್ರಿ ಸ್ಟಾರ್‌ ಆಗೋದ್ಲು ಈ ಮಹಿಳೆ! | Funny Video Of Woman In Rto Riding Two Wheeler For Driving Licence Suc

ಡ್ರೈವಿಂಗ್‌ ಲೈಸೆನ್ಸ್‌ ಪಡೆಯಲು ಬಂದು ರಾತ್ರೋರಾತ್ರಿ ಸ್ಟಾರ್‌ ಆಗೋದ್ಲು ಈ ಮಹಿಳೆ! | Funny Video Of Woman In Rto Riding Two Wheeler For Driving Licence Suc



 ಡ್ರೈವಿಂಗ್‌ ಲೈಸೆನ್ಸ್‌ ಪಡೆಯಲು ಪ್ರತಿನಿತ್ಯವೂ ಸಾವಿರಾರು ಜನ ಕ್ಯೂನಲ್ಲಿ ಇರುತ್ತಾರೆ. ಆದರೆ ಈ ಮಹಿಳೆ ಮಾತ್ರ ರಾತ್ರೋರಾತ್ರಿ ಸಕತ್​ ಫೇಮಸ್​ ಆಗೋದ್ರು. ಕಾರಣ ಕೇಳಿದ್ರೆ ನೀವೂ ಶಾಕ್​ ಆಗ್ತೀರಾ! 

ಇಂದು ಯಾವುದೇ ಕೆಲಸಕ್ಕೆ ಹೋಗುವುದಿದ್ದರೂ ಸಾರ್ವಜನಿಕ ವಾಹನಗಳ ಸೌಲಭ್ಯ ಎಷ್ಟೇ ಇದ್ದರೂ ಮನೆಯಲ್ಲಿ ವಾಹನ ಇದ್ದರೇನೇ ಒಳ್ಳೆಯದು ಎನ್ನುವ ಸ್ಥಿತಿ ಇದೆ. ಇದೇ ಕಾರಣಕ್ಕೆ ಪ್ರತಿ ಮನೆಯಲ್ಲಿಯೂ ದ್ವಿಚಕ್ರ ವಾಹನಗಳು ಎಲ್ಲರ ಬಳಿ ಇದ್ದರೆ ಒಂದೊಂದು ಮನೆಯಲ್ಲಿಯೂ 2-3 ಕಾರುಗಳು ಇರುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿಯೂ ಬೆಂಗಳೂರಿನಂಥ ಮಹಾನಗರಗಳಲ್ಲಿ ಆಗುತ್ತಿರುವ ಟ್ರಾಫಿಕ್‌ ಜಾಂ ಗಮನಿಸಿದರೆ, ಸ್ವಂತ ವಾಹನಗಳು ಎಷ್ಟು ದೊಡ್ಡ ಕೊಡುಗೆ ನೀಡುತ್ತಿದೆ ಎನ್ನುವುದನ್ನು ನೋಡಬಹುದಾಗಿದೆ.

ಅದೇ ಇನ್ನೊಂದೆಡೆ ವಾಹನಗಳಿಗೆ ಲೈಸೆನ್ಸ್‌ ಕೂಡ ಈಗ ಸುಲಭದಲ್ಲಿ ಸಿಗುತ್ತವೆ. ಮುಂಚಿನಂತೆ ಲೈಸೆನ್ಸ್‌ಗೆ ಕಠಿಣ ನಿಯಮಗಳೇನೂ ಸದ್ಯ ಇಲ್ಲ. ರಸ್ತೆಗಳ ಮೇಲೆ ವಾಹನ ತರುವ ಕೆಲವರನ್ನು ನೋಡಿದಾಗ, ಅವರು ಪಾರ್ಕಿಂಗ್‌ ಮಾಡುವ ವಿಧಾನ, ರಸ್ತೆಯಲ್ಲಿ ಗಾಡಿ ಓಡಿಸುವ ವಿಧಾನ ನೋಡಿದಾಗ ಉಳಿದ ಸವಾರರು ಗರಂ ಆಗುವುದು ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ದೊಡ್ಡ ಕಾರಣ, ಎಂತೆಂಥವರಿಗೋ ಸುಲಭದಲ್ಲಿ ಲೈಸೆನ್ಸ್ ಸಿಗುವುದು. ಕೆಲವರು ಸರಿಯಾಗಿ ಗಾಡಿ ಓಡಿಸಲು ಬರದಿದ್ದರೂ ಲೈಸೆನ್ಸ್‌ ಪಡೆಯುವಲ್ಲಿ ಯಶಸ್ವಿಯಾದರೆ, ಮತ್ತೆ ಕೆಲವರು ದುಡ್ಡು ಕೊಟ್ಟು ಆರ್‌ಟಿಒಗೆ ಹೋಗದೆ ಲೈಸೆನ್ಸ್‌ ಪಡೆದುಕೊಳ್ಳುವ ಗೋಲ್‌ಮಾಲ್‌ಗಳೂ ನಡೆಯುತ್ತಿವೆ ಎನ್ನುವ ಆರೋಪ ಇದೆ.

ಆರೋಪ ಏನೇ ಇರಲಿ. ಆದರೆ ಇಲ್ಲಿ ಲೈಸೆನ್ಸ್ ಪಡೆಯಲು ಬಂದ ಮಹಿಳೆಯೊಬ್ಬಳು ಮಾತ್ರ ಲೈಸೆನ್ಸ್‌ ಪಡೆಯಲು ಬಂದು ರಾತ್ರೋರಾತ್ರಿ ಸೋಷಿಯಲ್‌ ಮೀಡಿಯಾ ಸ್ಟಾರ್‌ ಆಗಿದ್ದಾರೆ. ಅಂಥದ್ದೇನು ಈಕೆ ಮಾಡಿದ್ದಾರೆ ಎಂದು ನೋಡಬೇಕಿದ್ದರೆ ಇಲ್ಲಿ ಇರುವ ವಿಡಿಯೋ ಅನ್ನು ಒಮ್ಮೆ ನೋಡಲೇಬೇಕು. ಇಲ್ಲದಿದ್ದರೆ ಸುಲಭದಲ್ಲಿ ಅದು ಅರ್ಥವಾಗುವುದು ಕಷ್ಟವಾದೀತು. ಸೋಷಿಯಲ್‌ ಮೀಡಿಯಾದಲ್ಲಿ ಇದೀಗ ಭಾರಿ ವೈರಲ್‌ ಆಗುತ್ತಿದೆ. ಈ ಮಹಿಳೆ ಯಾರು ಎನ್ನುವ ಬಗ್ಗೆ ತಡಕಾಡುತ್ತಿದ್ದಾರೆ ನೆಟ್ಟಿಗರು.

ಅಷ್ಟಕ್ಕೂ ಆಗಿದ್ದೇನೂ ಇಲ್ಲ. ಲೈಸೆನ್ಸ್‌ ಟ್ರಾಕ್‌ನಲ್ಲಿ ಈ ಮಹಿಳೆ ಬೈಕ್‌ನಲ್ಲಿ ಕುಳಿತುಕೊಂಡಿದ್ದಾರೆ ಬಿಟ್ಟರೆ, ಗಾಡಿ ಮುಂದಕ್ಕೆ ಓಡಿಸಲು ಬರುವುದೇ ಇಲ್ಲ. ಎರಡೂ ಕಾಲುಗಳನ್ನು ನೆಲಕ್ಕೆ ಇಟ್ಟು ಗಾಡಿಯನ್ನು ತಳ್ಳಿಕೊಂಡು ಹೋಗುತ್ತಿದ್ದಾರೆ. ಕೆಲವೊಮ್ಮೆ ಗಾಡಿ ಓಡಿಸಲು ಬಂದರೂ ಲೈಸೆನ್ಸ್‌ ಪಡೆಯುವ ವೇಳೆ, ಅಲ್ಲಿರುವ ಸ್ಥಿತಿ ನೋಡಿದ ಬಳಿಕವೋ ಇಲ್ಲವೇ ಸೊಟ್ಟಪಟ್ಟ ಟ್ರಾಕ್‌ ನೋಡಿದ ಹೆದರಿಕೊಳ್ಳುವುದೂ ಇದೆ. ಈ ಮಹಿಳೆಗೆ ಏನಾಯ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಈಕೆ ಗಾಡಿಯನ್ನು ಟ್ರಾಕ್‌ನಲ್ಲಿ ತಳ್ಳಿಕೊಂಡು ಹೋಗುವುದನ್ನು ನೋಡಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಕೊನೆಯ ಪಕ್ಷ ಗಾಡಿ ಸ್ಟಾರ್ಟ್ ಮಾಡಲು ಬರದಿದ್ದರೂ ಲೈಸೆನ್ಸ್‌ ಪಡೆಯಲು ಬಂದಿರುವ ಬಗ್ಗೆ ಹಲವರು ಆತಂಕವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇಂಥವರಿಗೆ ಲೈಸೆನ್ಸ್ ಕೊಟ್ಟರೆ, ರಸ್ತೆಯ ಮೇಲೆ ಹೋಗುವ ಇತರ ವಾಹನ ಸವಾರರ ಕಥೆಯೇನು ಎಂದು ಪ್ರಶ್ನಿಸುತ್ತಿದ್ದಾರೆ.

 

 



Source link

Leave a Reply

Your email address will not be published. Required fields are marked *