ಬಾಲಾಕೋಟ್ ದಾಳಿಯ ಸಮಯದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆಹಿಡಿದ ಪಾಕಿಸ್ತಾನಿ ಸೇನಾ ಅಧಿಕಾರಿಯನ್ನು ತಾಲಿಬಾನ್ ಉಗ್ರರು ಹತ್ಯೆ ಮಾಡಿದ್ದಾರೆ.
ನವದೆಹಲಿ: ಬಾಲ್‌ಕೋಟ್ ದಾಳಿ ( Balakot airstrike) ವೇಳೆ ಭಾರತೀಯ ವಾಯುಸೇನೆಯ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮನ್(Abhinandan Varthaman) ಅವರನ್ನು ಅಪಹರಿಸಿದ್ದ ಪಾಕಿಸ್ತಾನಿ ಯೋಧನನ್ನು ತಾಲಿಬಾನ್ ಉಗ್ರರು ಹತ್ಯೆ ಮಾಡಿದ್ದಾರೆ. ಪಾಕಿಸ್ತಾನದ ವಿಶೇಷ ಪಡೆಯ ಅಧಿಕಾರಿ ಮೇಜರ್ ಸಯ್ಯದ್ ಮುಯಿಜ್ ಅವರನ್ನು ಹತ್ಯೆ ಮಾಡಿದ್ದೇವೆ ಎಂದು ತೆಹ್ರೀಕ್-ಇ-ತಾಲಿಬಾನ್-ಪಾಕಿಸ್ತಾನ (Tehreek-i-Taliban-e-Pakistan) ಹೇಳಿಕೊಂಡಿದೆ.
ಪಾಕ್ ವಿಶೇಷ ಪಡೆ ಅಧಿಕಾರಿ ಮೇಜರ್ ಸಯ್ಯದ್ ಮುಯಿಜ್ ಹತ್ಯೆ:
2019ರ ಬಾಲ್‌ಕೋಟ್ ಏರ್ ಸ್ಟ್ರೈಕ್ ವೇಳೆ ಭಾರತೀಯ ಯುದ್ಧವಿಮಾನದ ಪೈಲಟ್ ಆಗಿದ್ದ ಅಭಿನಂದನ್ ವರ್ಧಮಾನ್‌ರನ್ನು ಪಾಕಿಸ್ತಾನದ ವಿಶೇಷ ಪಡೆಯ ಅಧಿಕಾರಿ ಮೇಜರ್ ಸಯ್ಯದ್ ಮುಯಿಜ್(Major Syed Muiz) ಸೆರೆಹಿಡಿದಿದ್ದಾಗಿ ವರದಿಯಾಗಿತ್ತು. ಆದರೆ ಈಗ ಆತನನ್ನು ತೆಹ್ರೀಕ್-ಇ-ತಾಲಿಬಾನ್-ಪಾಕಿಸ್ತಾನ ಹತ್ಯೆ ಮಾಡಿದೆ ಎಂದು ವರದಿಯಾಗಿದೆ. ತೆಹ್ರೀಕ್-ಇ-ತಾಲಿಬಾನ್-ಪಾಕಿಸ್ತಾನ ಸಂಘಟನೆಯೂ ಪಾಕ್-ಅಫ್ಘಾನ್ ಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಉಗ್ರ ಸಂಘಟನೆಯಾಗಿದೆ.
ಪಾಕಿಸ್ತಾನಿ ತಾಲಿಬಾನ್‌ನಿಂದ ಕೃತ್ಯ:
ಪಾಕಿಸ್ತಾನದ ವಿಶೇಷ ಸೇವಾ ಗುಂಪಿನ (ಎಸ್‌ಎಸ್‌ಜಿ) 6ನೇ ಕಮಾಂಡೋ ಬೆಟಾಲಿಯನ್‌ನಲ್ಲಿ ನಿಯೋಜಿತರಾಗಿದ್ದ ಮೇಜರ್ ಸಯ್ಯದ್ ಮುಯಿಜ್, ಪಾಕಿಸ್ತಾನದ ಖೈಬರ್ ಪಖ್ತೂನ್‌ಖ್ವಾ ಪ್ರಾಂತ್ಯದ(Khyber Pakhtunkhwa province) ಸರರ್ಘೋಹಾ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆ ವೇಳೆ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನಿ ತಾಲಿಬಾನ್ ಎಂದು ಕರೆಯಲ್ಪಡುವ ಟಿಟಿಪಿ ಮೇಜರ್ ಸಯ್ಯದ್ ಮುಯಿಜ್ ಸಾವಿನ ಹೊಣೆ ಹೊತ್ತುಕೊಂಡಿದೆ.
ಪಾಕಿಸ್ತಾನದ ಸೇನೆಯಿಂದ ಅಪಹರಿಸಲ್ಪಟ್ಟಿದ ಗ್ರೂಪ್ ಕ್ಯಾಪ್ಟನ್ ವರ್ಧಮಾನ್, ಆಗ ವಿಂಗ್ ಕಮಾಂಡರ್ ಆಗಿದ್ದರು. ಫೆಬ್ರವರಿ 27ರಂದು ನಡೆದ ಏರ್‌ಸ್ಟ್ರೈಕ್‌ನಲ್ಲಿ ಒಂದು ತಲೆಮಾರು ಹಳೆಯದಾದ ಮಿಗ್-21 (MiG 21) ವಿಮಾನದಲ್ಲಿ ಪಾಕಿಸ್ತಾನದ ಎಫ್-16 (Pak F-16 fighter jet) ಯುದ್ಧವಿಮಾನವನ್ನು ಹೊಡೆದು ಹಾಕಿದ ನಂತರ ನ್ಯಾಷನಲ್ ಹೀರೋ ಆದರು.
ಈ ಕಾರ್ಯಾಚರಣೆ ವೇಳೆ ಅವರು ಪಾಕಿಸ್ತಾನ ಅಕ್ರಮಿತ ಕಾಶ್ಮೀರದ ಭಾಗಗಳ ಮೇಲೆ ವಿಮಾನ ಹಾರಾಟ ನಡೆಸಿದ್ದರು. ಈ ವೇಳೆ ಅವರ ವಿಮಾನಕ್ಕೆ ಗುಂಡು ತಗುಲಿದ ಪರಿಣಾಮ ಅವರು ಶತ್ರು ರಾಷ್ಟ್ರದ ನೆಲದಲ್ಲಿ ವಿಮಾನದಿಂದ ಹಾರಾಬೇಕಾಯಿತು. ಹೀಗೆ ವಿಮಾನದಿಂದ ಹಾರಿದ ಅವರನ್ನು ಪಾಕ್ ಸೇನೆ ಸೆರೆಹಿಡಿದಿತ್ತು. ಹೀಗಾಗಿ ಸುಮಾರು 60 ಗಂಟೆಗಳ ಕಾಲ ಅವರು ಪಾಕಿಸ್ತಾನ ಸೈನಿಕರ ವಶದಲ್ಲಿರುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದಾದ ನಂತರ ಭಾರತ ಹಾಗೂ ವಿಶ್ವ ಸಮುದಾಯಗಳು ಅವರ ಬಿಡುಗಡೆಗೆ ಪಾಕಿಸ್ತಾನಕ್ಕೆ ತೀವ್ರ ಒತ್ತಾಯ ಮಾಡಿದವು. ನಂತರ ಪಾಕಿಸ್ತಾನ ಭಾರತದ ಈ ಹೆಮ್ಮೆಯ ಪುತ್ರನನ್ನು ಬಿಡುಗಡೆ ಮಾಡಿತ್ತು.
ಇದಾದ ನಂತರ ನವೆಂಬರ್ 2021ರಲ್ಲಿ ಅವರಿಗೆ ಗ್ರೂಪ್ ಕ್ಯಾಪ್ಟನ್ ಆಗಿ ಬಡ್ತಿ ನೀಡಲಾಯ್ತು ಮತ್ತು ಅವರ ಈ ಸಾಹಸಕ್ಕಾಗಿ ಅವರಿಗೆ ವೀರ ಚಕ್ರವನ್ನು ನೀಡಿ ಗೌರವಿಸಲಾಯ್ತು. ಪಾಕಿಸ್ತಾನದ ಬಾಲ್‌ಕೋಟ್ ಮೇಲೆ ನಡೆದ ದಾಳಿಯೂ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಭಾರತ ನೀಡಿದ ಪ್ರತಿಕ್ರಿಯೆಯಾಗಿತ್ತು. ಭಾರತದ ಭದ್ರತಾ ಸಿಬ್ಬಂದಿ ಸಾಗುತ್ತಿದ್ದ ಸಾಗುತ್ತಿದ್ದಸೇನಾ ವಾಹನದ ಮೇಲೆ ಮಾರುತಿ ಸುಜುಕಿ ಈಕೋ ವ್ಯಾನ್‌ನಲ್ಲಿ ಬಂದ ಆತ್ಮಾಹುತಿ ದಾಳಿಕೋರನೋಬ್ಬ ದಾಳಿ ನಡೆಸಿದ್ದ ಈ ದಾಳಿಯಲ್ಲಿ 40 ಸೈನಿಕರು ಹುತಾತ್ಮರಾಗಿದ್ದರು.
ಈ ಆತ್ಮಾಹುತಿ ದಾಳಿ ನಡೆಸಿದವರನನ್ನು ನಂತರ ಆದಿಲ್ ಅಹ್ಮದ್ ದಿರ್ ಎಂದು ಗುರುತಿಸಲಾಗಿತ್ತು. ಈತ ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್‌ನಿಂದ ತರಬೇತಿ ಪಡೆದಿದ್ದ. ಹೀಗಾಗಿ ಭಾರತ ಈ ಪಾಕಿಸ್ತಾನಿ ಉಗ್ರರು ನಡೆಸಿದ ಪುಲ್ವಾಮ ದಾಳಿಗೆ(Pulwama terror attack) ಪ್ರತೀಕಾರವಾಗಿ ನಡೆಸಿದ ಬಾಲ್‌ಕೋಟ್ ಏರ್ ಸ್ಟ್ರೈಕ್‌ನಲ್ಲಿ ಒಂದು ಡಜನ್ ಮಿರಾಜ್ ಜೆಟ್‌ಗಳು ಗಡಿರೇಖೆಯಿಂದ 20 ಕಿಮೀ ದೂರದಲ್ಲಿ ಪಾಕ್-ನಿಯಂತ್ರಿತ ಪ್ರದೇಶಕ್ಕೆ ನುಗ್ಗಿ JeM ಉಗ್ರ ಸಂಘಟನೆಯ ತರಬೇತಿ ಶಿಬಿರಗಳನ್ನು ಧ್ವಂಸಗೊಳಿಸಿದ್ದವು. ಈ ಇಡೀ ಕಾರ್ಯಾಚರಣೆ 20 ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ ಮುಗಿದು ಹೋಗಿತ್ತು.