ಇದೀಗ ಯುವಕರಿಗೆ ಬದುಕಿನ ಜತೆಗೆ ದೇಹವು ಭಾರವಾಗಿದೆ. ಹೌದು ಇಂದಿನ ದಿನದಲ್ಲಿ ಜೀವನ ಒಂದು ದಿಕ್ಕಿಗೆ ಚಲಿಸಿದರೆ, ದೇಹ ಇನ್ನೊಂದು ಕಡೆ ಚಲಿಸುತ್ತದೆ. ಈ ಒತ್ತಡ ಜೀವನದ (stressful life) ನಡುವೆ ದೇಹದ ಆರೋಗ್ಯ ಹಾಗೂ ಫಿಟ್‌ನೆಸ್ ಬಗ್ಗೆ ಕಾಳಜಿ ವಹಿಸುವುದು ದೊಡ್ಡ ತಲೆನೋವು. ಈ ಎರಡನ್ನು ಸಮತೋಲನದಲ್ಲಿ ಇಡುವುದು ಕಷ್ಟ ಎಂದುಕೊಂಡರೆ ಅದು ತಪ್ಪು, ಪ್ರತಿದಿನ ಮಾಡಬೇಕಾದ ಎಲ್ಲ ಕ್ರಿಯೆಗಳನ್ನು ಮಾಡಿಯೇ ಮಾಡುತ್ತೇವೆ. ಆ ಕಾರ್ಯಯೋಜನೆಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಿ ಅಷ್ಟೇ. ಪೂರಕ ಆಹಾರಗಳು ಅಥವಾ ಕಟ್ಟುನಿಟ್ಟಿನ ಆಹಾರ ಪದ್ಧತಿ ಇಲ್ಲದೆ ನೈಸರ್ಗಿಕವಾಗಿ 35 ಕಿಲೋಗ್ರಾಂಗಳಷ್ಟು ತೂಕವನ್ನು ಕಳೆದುಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಫಿಟ್‌ನೆಸ್ ಬ್ಲಾಗರ್ ಜಿತಿನ್ ವಿಎಸ್, ತಮ್ಮ ಸರಳ, ಪ್ರೋಟೀನ್-ಭರಿತ ದಕ್ಷಿಣ ಭಾರತೀಯ ಉಪಾಹಾರಗಳನ್ನು ಸೇವನೆ ಮಾಡುವ ಮೂಲಕ ತೂಕ ಇಳಿಸಿಕೊಂಡಿದ್ದಾರೆ.
ಜಿತಿನ್ ವಿಎಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಪ್ರತಿದಿನ ಮಾಡುವ ಅಡುಗೆಯಲ್ಲೇ ಅವರು ತಮ್ಮ ತೂಕ ಇಳಿಸಿಕೊಂಡಿರುವ ಗುಟ್ಟನ್ನು ಹೇಳಿಕೊಂಡಿದ್ದಾರೆ. ಯಾವುದೇ ಅನಗತ್ಯವಾದ ಪದ್ಧತಿಗಳನ್ನು ಉಪಯೋಗ ಮಾಡದೇ ನೈಸರ್ಗಿಕ ಆಹಾರಗಳನ್ನು ಬಳಸಿಕೊಂಡು ತೂಕ ಇಳಿಸಿಕೊಂಡಿದ್ದಾರೆ. ಇಲ್ಲಿ ಅವರು ಏಳು ಸಸ್ಯಹಾರಿ ಆಹಾರಗಳನ್ನು ತಿಳಿಸಿದ್ದಾರೆ. ಅದರಲ್ಲೇ ರುಚಿಯಾಗಿ ಹಾಗೂ ಸುಲಭವಾಗಿ ಮಾಡಬಹುದಾದ ಅಡುಗೆಯನ್ನು ಹೇಳಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ.
ಪೋಸ್ಟ್ ಇಲ್ಲಿದೆ ನೋಡಿ:
- ಪನೀರ್-ಸ್ಟಫ್ಡ್ ಗೋಧಿ ದೋಸೆ : ಪ್ರತಿದಿನ ದೊಸೆ ತಿನ್ನುವ ಅಭ್ಯಾಸವಿದ್ದರೆ, ಅಕ್ಕಿ ಹಿಟ್ಟಿನ ದೊಸೆಗಿಂತ, ಗೋಧಿ ಹಿಟ್ಟಿನ ದೊಸೆಯನ್ನು ಮಾಡಿ. ಇದಕ್ಕೆ ಪನೀರ್ ಮಸಾಲೆ, ಈ ಮಸಾಲೆಗೆ ಈರುಳ್ಳಿ, ಹಸಿ ಮೆಣಸಿಕಾಯಿ, ಕೊತ್ತಂಬರಿ ಸೊಪ್ಪುನ್ನು ಸೇರಿಸಿ. ಇದನ್ನು ಗೋಧಿ ದೋಸೆ ಜತೆಗೆ ಸೇವನೆ ಮಾಡಿದ್ರೆ ರುಚಿ ಇರುತ್ತದೆ, ದೇಹಕ್ಕೂ ಒಳ್ಳೆಯದು. ಇದು ಸುಮಾರು 18 ಗ್ರಾಂ ಪ್ರೋಟೀನ್ ಮತ್ತು 300 ಕ್ಯಾಲೊರಿಗಳನ್ನು ನೀಡುತ್ತದೆ. ಇನ್ನು ತೂಕ ಇಳಿಸಿಕೊಳ್ಳುವಾಗ, ಸ್ನಾಯುಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತದೆ.
- ಮೊಟ್ಟೆ ಮಸಾಲೆ ಜೊತೆ ರಾಗಿ ರೊಟ್ಟಿ: ಮಾಂಸಾಹಾರಿಗಳಿಗೆ ಈ ಖಾದ್ಯ ಒಳ್ಳೆಯದು, ಈರುಳ್ಳಿ, ಟೊಮೆಟೊ, ಮೊಟ್ಟೆ ಮಸಾಲೆಗೆ ಎರಡು ಬೇಯಿಸಿದ ಮೊಟ್ಟೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಮೇಲೆ ಕೊತ್ತಂಬರಿ ಸೊಪ್ಪು ಹಾಕಿ. ಇದರ ಜತೆಗೆ ರಾಗಿ, ಬಾಜ್ರಾ ಅಥವಾ ಜೋಳದಿಂದ ತಯಾರಿಸಿದ ರಾಗಿ ರೊಟ್ಟಿ ಕೂಡ ಸೇರಿಸಿದ್ರೆ, ಒಳ್ಳೆಯ ರುಚಿ ನೀಡುತ್ತದೆ. ಇದು 18 ಗ್ರಾಂ ಪ್ರೋಟೀನ್ ಮತ್ತು ಕೇವಲ 230 ಕ್ಯಾಲೊರಿಗಳನ್ನು ಹೊಂದಿರುತ್ತದೆ. ರಾಗಿಗಳಿಂದ ಬರುವ ಹೆಚ್ಚಿನ ಫೈಬರ್ ಜೀರ್ಣಕ್ರಿಯೆಯ ಪ್ರಯೋಜನಗಳನ್ನು ಹೆಚ್ಚಿಸುತ್ತದೆ, ಇದು ಶುದ್ಧ ಆಹಾರ ಪದ್ಧತಿಯಾಗಿರುತ್ತದೆ.
- ಪುದೀನ ಚಟ್ನಿಯೊಂದಿಗೆ ಬೇಸನ್ ದೋಸೆ : ಕಡಲೆ ಹಿಟ್ಟಿನಿಂದ (ಬೇಸನ್) ತಯಾರಿಸಲಾದ ಈ ಹಗುರವಾದ ಮತ್ತು ಗರಿಗರಿಯಾದ ದೋಸೆಯನ್ನು ಬೆಳಿಗ್ಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಈ ಹಿಟ್ಟಿನಲ್ಲಿ ಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಬೇಕು. ಇದರ ಜತೆಗೆ ಮೊಸರು ಬಳಸಿ ಮಾಡಿದ ಪುದೀನ ಚಟ್ನಿ ಕೂಡ ಒಳ್ಳೆಯ ಕಾಂಬಿನೇಷನ್. ಇದರಲ್ಲಿ 12 ಗ್ರಾಂ ಪ್ರೋಟೀನ್ ಮತ್ತು 240 ಕ್ಯಾಲೋರಿ ಇರುತ್ತದೆ ಹಾಗೂ ಇದು ತೂಕವನ್ನು ಇಳಿಸಿ, ಕಡಿಮೆ-ಕೊಬ್ಬಿನ, ಹೆಚ್ಚಿನ-ಪ್ರೋಟೀನ್ ಆಯ್ಕೆಯನ್ನು ನೀಡುತ್ತದೆ.
- ತೊಗರಿ ಬೇಳೆ ತರಕಾರಿ ಖಿಚಡಿ; ತೊಗರಿ ಬೇಳೆ ಮತ್ತು ಕ್ಯಾರೆಟ್ , ಬೀನ್ಸ್‌ನಂತಹ ತರಕಾರಿ ಮಿಶ್ರಣದ ಖಿಚಡಿ ಮಾಡಿ, ಅನ್ನದ ಜತೆಗೆ ಸೇವನೆ ಮಾಡಿದ್ರೆ ಒಳ್ಳೆಯ ರುಚಿ ನೀಡುತ್ತದೆ. ಖಿಚಡಿಗೆ ಸಾಸಿವೆ, ಕರಿಬೇವು ಮತ್ತು ಶುಂಠಿ ಮಸಾಲೆ ಒಗ್ಗರಣೆ ಹಾಕಿದ್ರೆ ಇನ್ನು ಅದ್ಭುತವಾಗಿರುತ್ತದೆ. ಇದು 14 ಗ್ರಾಂ ಪ್ರೋಟೀನ್ ಮತ್ತು 350 ಕ್ಯಾಲೋರಿಯನ್ನು ದೇಹಕ್ಕೆ ನೀಡುತ್ತದೆ.
- ಓಟ್ಸ್ ಪೊಂಗಲ್ : ದಕ್ಷಿಣ ಭಾರತದ ಸಾಂಪ್ರದಾಯಿಕ ಪೊಂಗಲ್, ಇದನ್ನು ಸ್ವಲ್ಪ ಬದಲಾವಣೆ ಮಾಡಿ ತಿನ್ನುವುದು ಒಳ್ಳೆಯದು. ಓಟ್ಸ್ ಅನ್ನು ಹೆಸರುಬೇಳೆಯೊಂದಿಗೆ ಸಂಯೋಜನೆ ಮಾಡಿ. ಮೆಣಸು, ಜೀರಿಗೆ, ಕರಿಬೇವು ಮತ್ತು ಒಂದು ಚಮಚ ತುಪ್ಪದ ಒಗ್ಗರಣೆಯನ್ನು ನೀಡಿ. ಇದು 250 ಕ್ಯಾಲೋರಿಗಳು ಮತ್ತು 11 ಗ್ರಾಂ ಪ್ರೋಟೀನ್ ನೀಡುತ್ತದೆ.
- ರಾಗಿ ದೋಸೆ ಜೊತೆ ಕಡಲೆಕಾಯಿ ಚಟ್ನಿ: ಪ್ರೋಟೀನ್ ಅಧಿಕವಾಗಿರುತ್ತದೆ ಈ ಖಾದ್ಯದಲ್ಲಿ. ಇದು 30 ಗ್ರಾಂ ಪ್ರೋಟೀನ್ ನೀಡುತ್ತದೆ. ರಾಗಿ ಹಿಟ್ಟಿನಿಂದ ತಯಾರಿಸಿದ ರಾಗಿ ದೋಸೆಯನ್ನು ಇದರ ಜತೆಗೆ ಸವಿಯಿರಿ. ಹುರಿದ ಕಡಲೆಕಾಯಿ, ತೆಂಗಿನಕಾಯಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಈ ಚಟ್ನಿಯನ್ನು ಮಾಡಿ. ಸಾಸಿವೆ ಮತ್ತು ಕರಿಬೇವಿನ ಎಲೆ ಒಗ್ಗರಣೆಯನ್ನು ಕೂಡ ನೀಡಿ, ಇನ್ನೂ ಅದ್ಭುತವಾಗಿರುತ್ತದೆ.
- ಮೊಸರಿನೊಂದಿಗೆ ಮೂಂಗ್ ದಾಲ್ ಚೀಲಾ: ನೆನೆಸಿದ ಮತ್ತು ಬೆರೆಸಿದ ಹಳದಿ ಹೆಸರುಕಾಳುಗಳಿಂದ ಇದನ್ನು ತಯಾರಿಸಲಾಗುವುದು. ಶುಂಠಿ ಮತ್ತು ಮೆಣಸಿನಕಾಯಿ ಮಸಾಲೆ ಹಾಕಿ. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. 14 ಗ್ರಾಂ ಪ್ರೋಟೀನ್ ಮತ್ತು 230 ಕ್ಯಾಲೋರಿಯನ್ನು ಹೊಂದಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ