
ಶಿರಾ :- ಕ್ಷೇತ್ರದ ಶಾಸಕ
ಹಾಗೂ ರಾಜ್ಯ ಸರ್ಕಾರದ
ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ,ಅವರ 76ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರವನ್ನು ಯುವ ಕಾಂಗ್ರೆಸ್ ನಗರ ಅದ್ಯಕ್ಷ ಅಂಜನ್ ಕುಮಾರ್ ಅವರ ಮಿತ್ರ ವೃಂದ ವತಿಯಿಂದ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿತ್ತು,
ರಕ್ತದಾನ ಮಾಡುವ ಮೂಲಕ ನೆಚ್ಚಿನ ನಾಯಕನ ಹುಟ್ಟು ಹಬ್ಬವನ್ನು ಆಚರಿಸಿದರು. ಈ ರಕ್ತ ದಾನ ಶಿಬಿರ ಇನ್ನೊಬ್ಬರ ಜೀವ ಉಳಿಸುವ ನಿಟ್ಟಿನಲ್ಲಿ ಮಹಾದಾನ ಕಾರ್ಯಕ್ರಮ ಇದಾಗಿದ್ದು, ಇಂತಹ ಒಳ್ಳೆಯ ಕೆಲಸಗಳು ಶ್ಲಾಘನೀಯ ಎಂದು ರಕ್ತಧಾನಿಗಳು ಹೇಳಿದರು.
ಈ ವೇಳೆ ಮುಖಂಡರುಗಳು ಕಾರ್ಯ ಕರ್ತರು ಈ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ ಮಾನವೀಯತೆ ಮರೆತರು
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು ಜಿಷನ್., ನಗರಸಭೆ ಸದಸ್ಯ ರಾಧಾಕೃಷ್ಣ, ತಾಲ್ಲೂಕು ಯುವ ಕಾಗ್ರೇಸ್ ಅಧ್ಯಕ್ಷರು ಮಣಿಕಂಠ, ಗ್ರಾಮಾಂತರ ಅಧ್ಯಕ್ಷರು ಹೇಮಂತ್ ಗೌಡ, NSUI ರಂಗ, ಮಹಿಳಾ ಕಾಂಗ್ರೆಸ್ ನ ಮಂಜುಳಾ ಬಾಯಿ, ಜಯಲಕ್ಷ್ಮಿ, ಲಕ್ಷಿದೇವಮ್ಮ ಸೇರಿದಂತೆ
ಉಪಸ್ಥಿತರಿದ್ದರು.