Headlines

ನಗರದ ಜನರ ಕುಡಿಯುವ ನೀರಿನ ದಾಹ ನೀಗಿಸುವ ಹೇಮಾವತಿ ನೀರು ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ.ಜಯಚಂದ್ರ

ಶಿರಾ : ನಗರದ ಜನರ ಕುಡಿಯುವ ನೀರಿನ ದಾಹ ನೀಗಿಸುವ ಹೇಮಾವತಿ ನೀರು ಶಿರಾ ದೊಡ್ಡ ಕೆರೆಯತ್ತ ಹರಿಯುತ್ತಿದ್ದು, ದೊಡ್ಡ ಕೆರೆ ಭರ್ತಿಯಾದ ತಕ್ಷಣ ಮದಲೂರು ಕೆರೆಗೆ ನೀರು ಹರಿಯಲಿದೆ. ಕಳೆದ 22 ವರ್ಷಗಳಿಂದ ಸತತವಾಗಿ ಶಿರಾ ಭಾಗಕ್ಕೆ ಹೇಮಾವತಿ ನೀರು ಹರಿದ ಕಾರಣ , ಶಿರಾ ನಗರ ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ, ಇದಲ್ಲದೆ 85.ಕೋಟಿ ರೂಪಾಯಿ ವೆಚ್ಚದಲ್ಲಿ ಮನೆಮನೆಗೂ ಗಂಗೆ ನೀಡುವಂತಹ ಮಹತ್ವದ ಕೆಲಸ ಸರ್ಕಾರ ಮಾಡುತ್ತಿದೆ ಎಂದು ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.


ಶಿರಾ ನಗರದ ಜಾಮಿಯಾ ಶಾದಿ ಮಹಲ್ ನಲ್ಲಿ ದಿವಂಗತ ಅಲ್ಲಾ ಬಕಾಶ್ ಎಂಎಲ್ಎ ಪ್ಯಾರು ಸಾಬ್ ರವರ 2.ನೇ ವರ್ಷದ ಸ್ಮರಣಾರ್ಥ ಶಿರಾ ನಗರದ ಪ್ರತಿಷ್ಠಿತ ZBS ಗ್ರೂಪ್ ಬುಧವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ದಿವಂಗತ ಅಲ್ಲಾ ಬಕಷ್ ಪ್ಯಾರು ಸಾಬ್ ರವರ ಸೇವೆಯನ್ನು ಎಂದು ಮರೆಯಲು ಸಾಧ್ಯವಿಲ್ಲ, ತಂದೆಯ ಹಾದಿಯಲ್ಲಿ ಶಿರಾ ನಗರಸಭೆ ಅಧ್ಯಕ್ಷ ಜಿಶಾನ್ ಮೊಹಮ್ಮದ್ ಸಹೋದರರು ಸಮಾಜಮುಖಿ ಚಿಂತನೆ ಯೊಂದಿಗೆ ಅಂಬುಲೆನ್ಸ್ ಸೇವೆ, ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಸಮಾಜ ಸೇವೆ ಮಾಡುತ್ತಿದೆ. ಸಾಮಾಜಿಕ ಕಳಕಳಿರುವ ಪ್ರತಿಯೊಬ್ಬ ತಂದೆಗೆ ಇಂತಹ ಮಕ್ಕಳು ಇದ್ದರೆ, ಸಮಾಜದ ಅಭಿವೃದ್ಧಿಗೆ ಬಹುದೊಡ್ಡ ಹುಡುಗಿ ಸಿಗಲಿದೆ. ಝೆಡ್ ಬಿ ಎಸ್ ಗ್ರೂಫ್ ಜನಪರ ಸೇವೆ ಮೆಚ್ಚುವಂತಹದ್ದು.
ಅಲ್ಪಸಂಖ್ಯಾತರು ಶೈಕ್ಷಣಿಕವಾಗಿ ಮುಖ್ಯವಹಿನಿಗೆ ಬರಬೇಕೆಂಬ ಉದ್ದೇಶದಿಂದ ಶಿರಾದಲ್ಲಿ ಮತ್ತೊಂದು ಮೌಲಾನಾ ಆಜಾದ್ ಶಾಲೆ ಮಂಜೂರು ಮಾಡಲಾಗಿದೆ ಎಂದರು.


ಶಿರಾ ನಗರ ಸಭೆ ಅಧ್ಯಕ್ಷ ಜಿಶಾನ್ ಮೊಹಮ್ಮದ್ ಮಾತನಾಡಿ ಬಡವರು, ಕಷ್ಟದಲ್ಲಿರುವ ವ್ಯಕ್ತಿಗಳು, ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಗುರಿ ಸದಾ ನಿಮ್ಮದಾಗಿರಬೇಕು ಎಂದು ನಮ್ಮ ತಂದೆ ಅಲ್ಲಾ ಬಕಷ್ ಪ್ಯಾರು ಸಾಬ್ ರವರು ಹೇಳುತ್ತಿದ್ದರು, ಇವರ ಕನಸು ಸಕಾರ ಗೊಳಿಸಲು ಇಂತಹ ಸಮಾಜ ಮುಖಿ ಚಿಂತನೆಯ ಸೇವೆಗಳನ್ನು ಮಾಡುತ್ತಿದ್ದೇವೆ, ಇಂತಹ ಸೇವೆಗಳು ಸದಾ ಕಾಲಕ್ಕೂ ಇರಲಿವೇ ಎಂದರು.
ಕಾಂಗ್ರೆಸ್ ಯುವ ನಾಯಕ ಸಂಜಯ್ ಜಯಚಂದ್ರ ಮಾತನಾಡಿ ಝೆಡ್ .ಬಿ. ಎಸ್ ಗ್ರೂಫ್ ಸಹೋದರರು ತಮ್ಮ ತಂದೆಗೆ ಒತ್ತಾಸೆಯಂತೆ ಸಮಾಜ ಸೇವೆ ಮಾಡುತ್ತಿರುವುದು ಉತ್ತಮ ಕಾರ್ಯ. ಕಾಂಗ್ರೆಸ್ ಪಕ್ಷ ಎಂದೆಂದಿಗೂ ಮರೆಯಲಾರದ ವ್ಯಕ್ತಿ ಅಂದರೆ ಎಂಎಲ್ಎ ಪ್ಯಾರು ರವರು ಎಂದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ 200. ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಆರ್ಥಿಕ ನೆರವು ನೀಡಲಾಯಿತು.
ನಗರಸಭೆ ಸದಸ್ಯ ಬರಾನ್ ಮೊಹಮ್ಮದ್ , ಝೆಡ್ ಬಿಎಸ್ ಫಿಲ್ಲರ್ಸ್ ನ ಸಲ್ಮಾನ್ ಮೊಹಮ್ಮದ್, ಶಿರಾ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ಎಸ್. ಅಜಯ್ ಕುಮಾರ್ , ಸದಸ್ಯರಾದ ರಫಿಉಲ್ಲಾ, ಮಾಜಿ ನಗರ ಸಭೆ ಸದಸ್ಯ ಹಬೀಬ್ ಖಾನ್, ನಗರಸಭೆ ಆಯುಕ್ತ ರುದ್ರೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಮಣಿ, ಕಾಂಗ್ರೆಸ್ ಮುಖಂಡ ಕೊಟ್ಟ ಶಂಕರ್, ಡಿ. ಸಿ. ಅಶೋಕ್, ಎಪಿಎಂಸಿ ಮಾಜಿ ಅಧ್ಯಕ್ಷ ಸತ್ಯನಾರಾಯಣ, ಪಿ. ಬಿ.ನರಸಿಂಹಯ್ಯ, ವಕೀಲ ಗುರುಮೂರ್ತಿ, ನಗರಸಭೆ ಮಾಜಿ ಸದಸ್ಯ ಶೇಕ್ ಅಹಮದಿ, ಮುಖಂಡ ಮಜರ್, ಆಶ್ರಯ ಸಮಿತಿ ಸದಸ್ಯರಾದ ವಾಜರಹಳ್ಳಿ ರಮೇಶ್, ನೂರುದ್ದೀನ್, ಫರ್ಮಾನ್, ರಘು
ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *