Headlines

*ನಾಡ ಹಿರಿಮೆಯ ಹೂಗುಚ್ಛ*

ಹಿರಿಮೆ ನೋಡು ನಮ್ಮ ನಾಡು,

ನುಡಿ ಗರಿಮೆಯ ಆಸ್ವಾದಿಸಿ ಹಾಡು,

ಓ ಒಡನಾಡಿ ಕಣ್ಮಣಿ

ಕರುನಾಡ ಮಡಿಲಲ್ಲೇ,

ಸೇವೆ ಮಾಡಿ ನೋಡು.!

ನಾಡ ತುಂಬಾ ಸಂಪತ್ತು,

ಮಧುರ ನುಡಿ ನಮ್ಮ ಸ್ವತ್ತು,

ಹಿಂಜರಿಯದೇ ಮುಂದಾಗು,

ಸಿರಿನಾಡ ಒಳಿತಿಗೆ ಭೇದ ಮರೆತು ಒಂದಾಗು.!

ನಾಡಿಗಾಗಿ ಸವೆದು ಹೋದ,

ಮಡಿಲಲ್ಲೇ ಮಡಿದು ಹೋದ,

ಕವಿ-ಸಾಹಿತಿ ಸತ್ಪುರುಷರ,

ಗುಣಗಾನದ ಹೂಗುಚ್ಛ ಪರಿಮಳವು ಬೀರುತಿದೆ.!

ನಾಡ ಸಂಸ್ಕೃತಿಗೆ ನಮಿಸುತ್ತಾ,

ಕನ್ನಡಾಂಬೆ ಪಾದಚರಣ

ಸವಿಜೇನಿನ ಹೂರಣ,

ನಾಡ ಹಿರಿಮೆ

ಗುಣಗಾನಕೆ,

ಸಮರ್ಪಿಸು ಹೂಗುಚ್ಛ.!

   ✍️ _ಬರಹ_

 *ಕೆವಿನ್ ಪಾವಗಡ* ಶಿಕ್ಷಕ-ಸಾಹಿತಿ ಹಾಗೂ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.

Leave a Reply

Your email address will not be published. Required fields are marked *