ನಿಮ್ಮ ಜೊತೆ ಮುದ್ದಿನ ನಾಯಿಯೂ ಬೆಡ್‌ ಮೇಲೆ ನಿದ್ದೆ ಮಾಡತ್ತಾ? ಹೀಗಿದ್ರೆ ಈ ವಿಷ್ಯ ಫಸ್ಟ್‌ ತಿಳ್ಕೊಳ್ಳಿ! | Sleeping With Your Dog Benefits And Considerations Here Is A List

ನಿಮ್ಮ ಜೊತೆ ಮುದ್ದಿನ ನಾಯಿಯೂ ಬೆಡ್‌ ಮೇಲೆ ನಿದ್ದೆ ಮಾಡತ್ತಾ? ಹೀಗಿದ್ರೆ ಈ ವಿಷ್ಯ ಫಸ್ಟ್‌ ತಿಳ್ಕೊಳ್ಳಿ! | Sleeping With Your Dog Benefits And Considerations Here Is A List



ಉಸಿರಾಟದ ತೊಂದ್ರೆ ಇದ್ರೆ ನಾಯಿ ಜೊತೆ ಮಲಗಬೇಡಿ.

ಎಷ್ಟೋ ಜನರಿಗೆ ಪ್ರಾಣಿಗಳೆಂದರೆ ತುಂಬ ಇಷ್ಟ. ಇನ್ನು ಶ್ವಾನಗಳನ್ನು ಇಷ್ಟಪಡುವವರು ತುಂಬ ಜನರಿದ್ದಾರೆ. ಕೆಲವರು ಶ್ವಾನಗಳನ್ನು ಆರೈಕೆ ಮಾಡೋದನ್ನು ನೋಡಿದರೆ ನಿಜಕ್ಕೂ ಅಚ್ಚರಿ ಆಗುತ್ತದೆ. ಶ್ವಾನಗಳಿಗೆ ಸ್ನಾನ ಮಾಡಿಸುವುದೊಂದೇ ಅಲ್ಲದೆ, ಲೋಶನ್‌ ಕೂಡ ಹಚ್ಚುವವರು ಇದ್ದಾರೆ. ಐಸ್‌ಕ್ರೀಂ ಸೇರಿ ವಿವಿಧ ಹಣ್ಣುಗಳನ್ನು ಕೂಡ ತಿನಿಸೋದುಂಟಯ. ಪ್ರಾಣಿ ಪ್ರಿಯರಿಗೆ ಅವು ಕುಟುಂಬದ ಭಾಗ. ಹಬ್ಬ, ಜನ್ಮದಿನ ಆಚರಣೆಗಳಲ್ಲಿ ನಾಯಿಗಳೂ ಭಾಗಿ. ಮಲಗುವಾಗಲೂ ಜೊತೆ ಇರ್ತಾವೆ. ಆದ್ರೆ ನಾಯಿ ಜೊತೆ ಮಲಗೋದು ಒಳ್ಳೆಯದೇ? ಹಲವು ಮನೆಗಳಲ್ಲಿ ಹೀಗೆ ಮಾಡ್ತಾರೆ. ಕೆಲವು ವಿಷ್ಯಗಳನ್ನ ಗಮನಿಸ್ಬೇಕು.

  1. ನಿಮ್ಮ ನಾಯಿ ಆರೋಗ್ಯ, ಸ್ವಚ್ಛತೆ, ನಡವಳಿಕೆ ನೋಡಿ ಜೊತೆ ಮಲಗಬೇಕಾ ಬೇಡ್ವಾ ಅಂತ ನಿರ್ಧರಿಸಿ.

2. ಚೆನ್ನಾಗಿ ನೋಡಿಕೊಳ್ಳುವ, ಪ್ರೀತಿ ತೋರಿಸುವ ಮನೆಗಳಲ್ಲಿ ಜೊತೆ ಮಲಗೋದು ಮನುಷ್ಯ-ಪ್ರಾಣಿ ಬಾಂಧವ್ಯ ಹೆಚ್ಚಿಸುತ್ತೆ.

3. ನಾಯಿ ಜೊತೆ ಮಲಗೋದ್ರಿಂದ ಮಾನಸಿಕ ನೆಮ್ಮದಿ ಸಿಗುತ್ತೆ.

4. ಪ್ರಾಣಿ ಪ್ರಿಯರಲ್ಲಿ ಅರ್ಧದಷ್ಟು ಜನ ತೃಪ್ತರಿದ್ದಾರೆ. ಪ್ರಾಣಿಗಳ ಜೊತೆ ಇದ್ರೆ ಒತ್ತಡ ಕಡಿಮೆಯಾಗುತ್ತೆ.

5. ನಾಯಿಗಳಿಗೂ ಭಾವನಾತ್ಮಕ ಭದ್ರತೆ ಸಿಗುತ್ತೆ. ಹಾಸಿಗೆಯಲ್ಲಿ ಅವು ಇದ್ರೆ ಆತಂಕ ಕಡಿಮೆ, ನಿದ್ರೆ ಚೆನ್ನಾಗಿ ಆಗುತ್ತೆ.

6. ಆದ್ರೆ ಎಲ್ಲಾ ನಾಯಿಗಳ ಜೊತೆ ಮಲಗೋಕೆ ಆಗಲ್ಲ. ಆಕ್ರಮಣಕಾರಿ ನಾಯಿಗಳನ್ನ ಪ್ರತ್ಯೇಕ ಇಡಬೇಕು.

7. ಕೆಲವು ನಾಯಿಗಳು ನಿದ್ರೆಗೆ ತೊಂದರೆ ಕೊಡಬಹುದು. ಅಂಥವುಗಳನ್ನ ಬೇರೆ ಕಡೆ ಮಲಗಿಸಿ.

8. ಸ್ವಚ್ಛತೆ, ಅಲರ್ಜಿ ಬಗ್ಗೆ ಗಮನವಿರಲಿ. ಉಸಿರಾಟದ ತೊಂದ್ರೆ ಇದ್ರೆ ನಾಯಿ ಜೊತೆ ಮಲಗಬೇಡಿ.

9. ನಾಯಿಗೆ ಸುರಕ್ಷಿತ, ಸ್ಥಿರ, ಆರಾಮದಾಯಕ ಜಾಗ ಕೊಡಿ. ಪ್ರತಿ ಮನೆಯೂ ಬೇರೆ. ನಾಯಿ ಭಾವನೆ, ನಿಮ್ಮ ಆರೋಗ್ಯಕ್ಕೆ ಪ್ರಾಮುಖ್ಯತೆ ಕೊಡಿ.



Source link

Leave a Reply

Your email address will not be published. Required fields are marked *