ನೀರು ಭೂಮಿಯ ಮೇಲಿನ ಜೀವ ಸಂಕುಲದ ಅಮೃತಧಾರೆ….!

ಮಧುಗಿರಿ:- ನೀರು ಭೂಮಿಯ ಮೇಲಿನ ಜೀವ ಸಂಕುಲದ ಅಮೃತಧಾರೆ ಎಂದು ಸಾಹಿತಿ ಪ್ರೊ ಮಲನ ಮೂರ್ತಿ ತಿಳಿಸಿದರು
ಶ್ರೀ ಟಿ ವಿ ವಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶ್ವ ಜಲ ದಿನದಲ್ಲಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಮಾತನಾಡಿ ಮಾನವ ಪ್ರಾಣಿ ಪಕ್ಷಿ ಸಸ್ಯ ಸಂಪತ್ತು ಇವುಗಳ ಉಳಿವು ಬೆಳವಣಿಗೆಗೆ ಬಾವಿ ಹಳ್ಳಕೆರೆ ನದಿಯೇ ಆಧಾರ ಭೂಮಿಯ ಮೂರನೇ ಎರಡರಷ್ಟು ಭಾಗ ನೀರಿದ್ದು ಒಂದು ಭಾಗದಷ್ಟು ಮಾತ್ರ ಉಪಯೋಗವಾಗುತ್ತಿದೆ. ಶುದ್ಧ ನೀರಿಲ್ಲದೆ ಮಕ್ಕಳು ಮತ್ತು ರೋಗಿಗಳು ಸಾವಿಗೀಡಾಗುತ್ತಿದ್ದಾರೆ ಅನಗತ್ಯವಾಗಿ ಬಳಸದೆ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಎಲ್ಲರದ್ದು ಎಂದರು ಎಂದರು . ಬಿ ಎಡ್ ಸಹಾಯಕ ಪ್ರಾಧ್ಯಾಪಕ ಶಿವಾನಂದ ಮಾತನಾಡಿ ಜಲ ಸಂಪನ್ಮೂಲಗಳನ್ನು ಸಂರಕ್ಷಿಸಿ, ಯೋಗ್ಯ ರೀತಿಗಳಲ್ಲಿ ಬಳಸುವುದರ ಜೊತೆಗೆ ವಿಶೇಷ ಗಮನ ಹರಿಸಬೇಕೆಂದು ತಿಳಿಸಿದರು
ಉಪನ್ಯಾಸಕ ಮಂಜು ಪ್ರಸಾದ್ ಮಾತನಾಡಿ ಸಂಸ್ಕೃತಿ, ನಾಗರಿಕತೆ ಉಳಿವಿಗೆ ನೀರು ಅವಶ್ಯ ನೀರಿಲ್ಲದೆ ವಿಶ್ವವನ್ನು ಊಹಿಸಿಕೊಳ್ಳಲು ಸಹ ಅಸಾಧ್ಯ ನೀರನ್ನು ಮಿತವಾಗಿ ಬಳಸಬೇಕು ಎಂದು ತಿಳಿಸಿದರು.
ಉಪನ್ಯಾಸಕ ಸತೀಶ್ ಮಾತನಾಡಿ ನೀರು ಕೈಗಾರಿಕೆ ಕೃಷಿಯಿಂದ ಲಕ್ಷಾಂತರ ಜನರಿಗೆ ಉದ್ಯೋಗ ನಿರ್ಮಾಣ ಮಾಡಿ ಆರ್ಥಿಕ ಮಟ್ಟ ಸುಧಾರಿಸುತ್ತದೆ ಎಂದರು.
ಗ್ರಂಥಪಾಲಕ ನಾಗಭೂಷಣ್ ಮಾತನಾಡಿ ನೀರಿಗಾಗಿ ರಾಜ್ಯ ರಾಜ್ಯಗಳ ನಡುವೆ ಸಾಕಷ್ಟು ವಿವಾದಗಳು ಸೃಷ್ಟಿಯಾಗಿದ್ದು ಕಾನೂನು ಮೊರೆ ಹೊಕ್ಕಿರುವರು ಎಂದರು. ಪ್ರಾಂಶುಪಾಲರಾದ ಹನುಮಂತರಾಯಪ್ಪ ಮಾತನಾಡಿ ಜಲ ಸಂರಕ್ಷಣೆಯ ಹೊಣೆ ನಮ್ಮೆಲ್ಲರದ್ದು ಪೋಲು ಮಾಡುವುದನ್ನು ನಿಲ್ಲಿಸಿ ಸಕಲ ಜೀವಿಗಳನ್ನು ಪೋಷಿಸಿ ಎಂದರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು
ಉಪನ್ಯಾಸಕಿ ಪವಿತ್ರ ನಿರೂಪಿಸಿ ವಂದಿಸಿದರು

Leave a Reply

Your email address will not be published. Required fields are marked *