ಭುವನೇಶ್ವರ್, ಜೂನ್ 26: ಇತ್ತೀಚೆಗೆ ದೆಹಲಿ ಸಮೀಪದ ಪ್ರಯಾಗ್ರಾಜ್ನಲ್ಲಿ ನಡೆದಿದ್ದ ಮಹಾಕುಂಭ ಮೇಳದಲ್ಲಿ ಲಕ್ಷಾಂತರ ಮಂದಿಗೆ ವಿವಿಧ ಸೇವೆಗಳನ್ನು ನೀಡಿದ್ದ ಅದಾನಿ ಗ್ರೂಪ್ ಈಗ ತಮ್ಮ ಸೇವಾ ಕೈಂಕರ್ಯವನ್ನು ಪುರಿ ಜಗನ್ನಾಥ ರಥಯಾತ್ರೆಯಲ್ಲೂ ಮುಂದುವರಿಸಲಿದೆ. ಒಡಿಶಾದ ಪುರಿ ನಗರದಲ್ಲಿ ಇವತ್ತು ಆರಂಭವಾಗಿರುವ ರಥಯಾತ್ರೆ ಜುಲೈ 8ರವರೆಗೂ ನಡೆಯಲಿದೆ. ಅಷ್ಟೂ ದಿನ ಅದಾನಿ ಗ್ರೂಪ್ ಭಕ್ತಾದಿಗಳ ಸೇವೆ ನಡೆಸಲಿದೆ.
ಒಂಬತ್ತು ದಿನಗಳ ಕಾಲ ನಡೆಯುವ ರಥಯಾತ್ರೆಯಲ್ಲಿ ಅದಾನಿ ಗ್ರೂಪ್ ದೊಡ್ಡ ಸಂಖ್ಯೆಯಲ್ಲಿ ಸ್ವಯಂಸೇವಕರನ್ನು ಸೇವೆಗೆ ನಿಯೋಜಿಸಿದೆ. ಈ ವಿಶ್ವವಿಖ್ಯಾತ ಉತ್ಸವಕ್ಕೆ ಬರುವ ಲಕ್ಷಾಂತರ ಭಕ್ತರು, ಕಾರ್ಯಕರ್ತರಿಗೆ ಸೇವೆಯ ವ್ಯವಸ್ಥೆ ಮಾಡಿದೆ. 40 ಲಕ್ಷ ಉಚಿತ ಊಟ ಮತ್ತು ಪಾನೀಯಗಳನ್ನು ಜನರಿಗೆ ಹಂಚಲಿದೆ.
ಇದನ್ನೂ ಓದಿ: ಮುಂಬೈ ಏರ್ಪೋರ್ಟ್ ವಿಸ್ತರಣೆ ಯೋಜನೆಗೆ ಜಾಗತಿಕ ಹೂಡಿಕೆದಾರರಿಂದ 1 ಬಿಲಿಯನ್ ಡಾಲರ್ ಬಂಡವಾಳ ಪಡೆದ ಅದಾನಿ ಏರ್ಪೋರ್ಟ್ಸ್
ಪುರಿ ನಗರದಾದ್ಯಂತ ಅದಾನಿ ಗ್ರೂಪ್ ವಿಶೇಷ ಫೂಡ್ ಕೌಂಟರ್ಗಳನ್ನು ಸ್ಥಾಪಿಸಿದೆ. ಇಲ್ಲಿ ರುಚಿಕರವಾದ ಮತ್ತು ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ. ಪಾನೀಯ ಶಾಪ್ಗಳೂ ಕೂಡ ಸ್ಥಾಪನೆಯಾಗಿದ್ದು, ಬಿಸಿಲಿನ ಝಳದಲ್ಲಿ ಜನರಿಗೆ ತಂಪೆರೆಯುವ ತಂಪು ಪಾನೀಯಗಳನ್ನು ಇಲ್ಲಿ ಉಚಿತವಾಗಿ ನೀಡಲಾಗುತ್ತದೆ.

ಅದಾನಿ ಗ್ರೂಪ್ನಿಂದ ಅನ್ನದಾನ ಸೇರಿ ವಿವಿಧ ಸೇವೆ
ಅದಾನಿ ಗ್ರೂಪ್ ಪುರಿಯಲ್ಲಿ ಆಹಾರ ಮತ್ತು ಪಾನೀಯ ಹಂಚುವಿಕೆಗೆ ಮಾತ್ರ ಸೀಮಿತವಾಗಿಲ್ಲ, ಪರಿಸರ ಸಂರಕ್ಷಣೆ, ಭದ್ರತೆ ಇತ್ಯಾದಿ ಕಾರ್ಯಗಳನ್ನೂ ಕೈಗೊಂಡಿದೆ. ವಿವಿಧೆಡೆ ನಿಯೋಜಿಸಲಾದ ಸ್ವಯಂಸೇವಕರು ಪುರಿ ಬೀಚ್ನಲ್ಲಿ ಪ್ಲಾಸ್ಟಿಕ್ ಇತ್ಯಾದಿ ಕಸಗಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಲಿದ್ದಾರೆ. ಈ ಸ್ವಯಂಸೇವಕರಿಗೆ ಉಚಿತವಾಗಿ ಟಿ-ಶರ್ಟ್ಗಳನ್ನು ಕೊಡಲಾಗಿದೆ. ಸ್ವಚ್ಛತಾ ಕಾರ್ಮಿಕರಿಗೆ ಸುರಕ್ಷಿತ ಜಾಕೆಟ್ಗಳನ್ನು ಒದಗಿಸಿದೆ. ಪೌರ ಕಾರ್ಮಿಕರು ಮತ್ತು ಭಕ್ತರಿಗೆ ಮಳೆಯಿಂದ ರಕ್ಷಣೆ ನೀಡುವ ರೈನ್ ಕೋಟ್, ಕ್ಯಾಪ್, ಛತ್ರಿ ಇತ್ಯಾದಿ ಸಾಮಗ್ರಿಗಳನ್ನು ವ್ಯವಸ್ಥೆ ಮಾಡಿದೆ.
ಇದನ್ನೂ ಓದಿ: ರಿಲಾಯನ್ಸ್ ಸಂಸ್ಥೆಯ ಯಶಸ್ವಿನ ಹಿಂದಿವೆ ಐದಾರು ಮೌಲ್ಯಗಳು: ಮುಕೇಶ್ ಅಂಬಾನಿ
ಈ ಕಾರ್ಯಗಳನ್ನು ಮಾಡಲು ಅದಾನಿ ಗ್ರೂಪ್ ಜೊತೆಗೆ ಪುರಿ ಜಿಲ್ಲಾಡಳಿತ, ಇಸ್ಕಾನ್, ಸ್ಥಳೀಯ ಸಮುದಾಯ ಸಂಘಟನೆಗಳೂ ಭಾಗಿಯಾಗಿವೆ.
ಅದಾನಿ ಗ್ರೂಪ್ ಪ್ರಯಾಗ್ರಾಜ್ ಮಹಾಕುಂಭದಲ್ಲೂ ವಿವಿಧ ಸೇವೆಗಳನ್ನು ನೀಡಿ ಗಮನ ಸೆಳೆದಿತ್ತು. ಒಡಿಶಾ ರಾಜ್ಯದಲ್ಲಿ ಅದಾನಿ ಗ್ರೂಪ್ ವಿವಿಧ ಸಾಮಾಜಿಕ ಕೈಂಕರ್ಯಗಳನ್ನು ನಡೆಸುತ್ತಿದೆ. ಆರೋಗ್ಯ, ಶಿಕ್ಷಣ, ಗ್ರಾಮೀಣ ಕ್ಷೇತ್ರದಲ್ಲಿ ವಿವಿಧ ಯೋಜನೆಗಳನ್ನು ಅದು ನೆರವೇರಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On – 7:12 pm, Thu, 26 June 25