ಪ್ರತಿದಿನ ಬೆಂಗಳೂರಿನಲ್ಲಿ 2500 ಹೊಸ ವಾಹನ ನೋಂದಣಿ! ಟ್ರಾಫಿಕ್, ವಾಯುಮಾಲಿನ್ಯದಲ್ಲಿ ದೆಹಲಿಯನ್ನೂ ಮೀರಿಸುವ ಆತಂಕ

ಪ್ರತಿದಿನ ಬೆಂಗಳೂರಿನಲ್ಲಿ 2500 ಹೊಸ ವಾಹನ ನೋಂದಣಿ! ಟ್ರಾಫಿಕ್, ವಾಯುಮಾಲಿನ್ಯದಲ್ಲಿ ದೆಹಲಿಯನ್ನೂ ಮೀರಿಸುವ ಆತಂಕ


ಬೆಂಗಳೂರು, ಜೂನ್ 23: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ರಸ್ತೆಗಿಳಿಯುತ್ತಿರುವ ಹೊಸ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ.ಕಳೆದ ವರ್ಷ ಪ್ರತಿದಿನ ಎರಡು ಸಾವಿರ ಹೊಸ ವಾಹನಗಳು ನೋಂದಣಿ (Vehicle Registration) ಆಗಿದ್ದರೆ, ಈ ವರ್ಷ 500 ಹೆಚ್ಚಾಗಿದ್ದು, ಪ್ರತಿದಿನ 2500 ಹೊಸ ವಾಹನಗಳು ರಿಜಿಸ್ಟ್ರೇಷನ್ ಆಗುತ್ತಿವೆ. ಅದರಲ್ಲಿ ಬೈಕ್​ಗಳದ್ದೇ ಸಿಂಹಪಾಲು. ಪ್ರತಿದಿನ ಸರಾಸರಿ 1580 ಬೈಕ್​ಗಳು ನೋಂದಣಿ ಆಗ್ತಿದ್ರೆ, 484 ಕಾರುಗಳು, 320 ಸಾರಿಗೆ ವಾಹನಗಳು ಸೇರಿದಂತೆ ಒಟ್ಟು ಪ್ರತಿದಿನ ಸರಾಸರಿ 2500 ರಷ್ಟು ಹೊಸ ವಾಹನಗಳು ನೋಂದಣಿ ಆಗ್ತಿವೆ.

ಈಗಾಗಲೇ ರಾಜ್ಯದಲ್ಲಿ 3.37 ಕೋಟಿ ಹೊಸ ವಾಹನಗಳಿದ್ದು, ಬೆಂಗಳೂರು ನಗರದಲ್ಲಿ 1,23,50,299 ವಾಹನಗಳಿವೆ. ಅದರಲ್ಲಿ ಬೈಕ್ ಗಳ ಸಂಖ್ಯೆ 82,83,952 ಲಕ್ಷ. ಕಾರುಗಳ ಸಂಖ್ಯೆ 25,37,799 ಲಕ್ಷ ಎಂದು ಅಪರ ಸಾರಿಗೆ ಆಯುಕ್ತ ಉಮಾಶಂಕರ್ ಮಾಹಿತಿ ನೀಡಿದ್ದಾರೆ.

ದೆಹಲಿಯನ್ನು ಹಿಂದಿಕ್ಕಲಿದೆ ಬೆಂಗಳೂರು

ಸಾರಿಗೆ ಇಲಾಖೆಯ ಅಂಕಿ-ಅಂಶಗಳು ಬೆಚ್ಚಿ ಬೀಳಿಸುತ್ತಿದ್ದು, ಕೆಲವೇ ಕೆಲವು ವರ್ಷಗಳಲ್ಲಿ ಬೆಂಗಳೂರಿನ ವಾಹನಗಳ ಸಂಖ್ಯೆ ದೆಹಲಿಯನ್ನೂ ಮೀರಿಸಲಿದೆ ಎಂಬ ಆತಂಕ ಮೂಡಿದೆ. ದೆಹಲಿಯಲ್ಲಿ ಬೈಕ್​ಗಳ ಸಂಖ್ಯೆ 98,97,769 ಲಕ್ಷ ಇದ್ರೆ, ಬೆಂಗಳೂರಲ್ಲಿ 82,83,952 ಲಕ್ಷ ಇದೆ. ಅಲ್ಲಿಗೆ ದೆಹಲಿಗೂ ನಮಗೂ ಕೇವಲ 16,13,817 ಲಕ್ಷ ಮಾತ್ರ ವ್ಯತ್ಯಾಸ. ಇತ್ತ ದೆಹಲಿಯಲ್ಲಿ 42,83,679 ಲಕ್ಷ ಕಾರುಗಳಿದ್ರೆ, ಬೆಂಗಳೂರಲ್ಲಿ 25,37,799 ಕಾರುಗಳಿವೆ. ದೆಹಲಿಗೂ ಬೆಂಗಳೂರಿಗೂ 17,45,880 ಲಕ್ಷ ಮಾತ್ರ ವ್ಯತ್ಯಾಸ. ದೆಹಲಿಯಲ್ಲಿ ಒಟ್ಟು ವಾಹನಗಳ ಸಂಖ್ಯೆ 1,54,18,980 ಲಕ್ಷ ಇದ್ರೆ, ಬೆಂಗಳೂರಲ್ಲಿ 1,23,50,299 ಲಕ್ಷ ವಾಹನಗಳಿವೆ. ಅಂದರೆ ದೆಹಲಿಗೂ ನಮಗೂ 30,68,681 ಲಕ್ಷ ವಾಹನಗಳ ವ್ಯತ್ಯಾಸವಿದೆ.

ಇದನ್ನೂ ಓದಿ

ದೆಹಲಿಯ ವಾಹನಗಳ ಸಂಖ್ಯೆಯನ್ನು ಕರ್ನಾಟಕದ ರಾಜಧಾನಿ ಬೆಂಗಳೂರು ಕೆಲವೇ ಕೆಲವು ವರ್ಷಗಳಲ್ಲಿ ಹಿಂದಿಕ್ಕಿ ಮುನ್ನುಗ್ಗುವ ಆತಂಕವನ್ನು ಈ ಅಂಕಿಅಂಶಗಳು ಬಿಚ್ಚಿಟ್ಟಿವೆ. ಈ ಬಗ್ಗೆ ಮಾತನಾಡಿದ ಟ್ರಾಫಿಕ್ ತಜ್ಞರು, ವಾಹನ ದಟ್ಟಣೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸರಿಯಾದ ನಿಯಮ ರೂಪಿಸಬೇಕು. ಇಲ್ಲವಾದರೆ, ಮುಂದೆ ತುಂಬಾ ಸಮಸ್ಯೆ ಆಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಪರ್ಯಾಯ ಬಸ್​ನಿಂದ ಉಂಟಾದ ಅಪಘಾತಕ್ಕೆ ವಿಮಾ ಕಂಪನಿಯೇ ಪರಿಹಾರ ನೀಡಬೇಕೆಂದು: ಕೋರ್ಟ್​

ಒಟ್ಟಿನಲ್ಲಿ, ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಸಾವಿರಾರು ಹೊಸ ಕಾರು, ಬೈಕ್​ಗಳು ರೋಡಿಗಿಳಿಯುತ್ತಿವೆ. ಕೆಲವೇ ಕೆಲವು ವರ್ಷಗಳಲ್ಲಿ ದೆಹಲಿಯನ್ನು ಹಿಂದಿಕ್ಕಿ ಬೆಂಗಳೂರು, ವಾಹನಗಳ ಸಂಖ್ಯೆಯಲ್ಲಿ ನಂ-1 ಆಗಬಹುದು. ಹಾಗಾಗಿ ಈಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲಾಂದರೆ ದೆಹಲಿ ಮಾದರಿಯಲ್ಲಿ ಜನರು ಉಸಿರಾಟದ ಸಮಸ್ಯೆ ಎದುರಿಸಬೇಕಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *