ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್, ಪ್ರತಿ ದಿನ ನಿಮ್ಮ ಪ್ರಯಾಣದ ಸಮಯದಲ್ಲಿ 45 ನಿಮಿಷ ಉಳಿಸಬಹುದು. ಸರಿಸುಮಾರು 17 ಕಿಲೋಮೀಟರ್ ಉದ್ದರ ಸುರಂಗ ರಸ್ತೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಒಂದಷ್ಟು ಪರಿಹಾರ ನೀಡಲಿದೆ.
ಬೆಂಗಳೂರು (ಜೂ.23) ಬೆಂಗಳೂರಿನಲ್ಲಿ ಪ್ರತಿ ದಿನ ಕಚೇರಿ, ಶಾಲೆ, ಕಾಲೇಜು, ವ್ಯವಹಾರ, ಉದ್ಯೋಗ ಸೇರಿದಂತೆ ಇತರ ಕೆಲಸ ಕಾರ್ಯಗಳಿಗೆ ತೆರಳವವರು ಹೆಚ್ಚಿನ ಸಮಯ ಟ್ರಾಫಿಕ್‌ನಲ್ಲೇ ಕಳಬೆಯಬೇಕು. ಆದರೆ ಹೊಸ ಸುರಂಗ ಮಾರ್ಗದಿಂದ ಪ್ರತಿ ದಿನ 45 ನಿಮಿಷ ಸಯಮ ಉಳಿತಾಯವಾಗಲಿದೆ. ಈ ಕುರಿತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್ ಸುರಂಗ ಮಾರ್ಗ ಬೆಂಗಳೂರಿನ ಟ್ರಾಫಿಕ್ ಸಮಸ್ಸೆಯನ್ನು ಬಗೆಹರಿಸಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
16.75 ಕಿಮಿ ಸುರಂಗ ಮಾರ್ಗ
ಸದ್ಯ ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್ ಪ್ರಯಾಣ ದುಸ್ತರವಾಗಿದೆ. ಹೆಚ್ಚಿನ ಸಿಗ್ನಲ್, ಟ್ರಾಫಿಕ್ ಕಂಜೆಶನ್‌ಗಳಿಂದ ಸುಮಾರು 1 ರಿಂದ 1.30 ಗಂಟೆ ಸಮಯ ಪ್ರಯಾಣದಲ್ಲಿ ಕಳೆಯಬೇಕು. ಆದರೆ ಸುರಂಗ ಮಾರ್ಗದಿಂದ ಪ್ರತಿ ದಿನ 45 ನಿಮಿಷಕ್ಕೂ ಹೆಚ್ಚು ಸಮಯ ಪ್ರತಿ ದಿನ ಉಳಿಸಬಹುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. 16.75 ಕಿಮೀ ತಡೆರಹಿತ, ಸಿಗ್ನಲ್-ಮುಕ್ತ ಪ್ರಯಾಣ ಸಾಧ್ಯವಾಗಲಿದೆ ಎಂದಿದ್ದಾರೆ. ನಿಮ್ಮ ಸಮಯ, ನಿಮ್ಮನ್ನ ಗಮನದಲ್ಲಿಟ್ಟುಕೊಂಡು ಸುರಂಗ ನಿರ್ಮಾಣ ಮಾಡುತ್ತಿದ್ದೇವೆ ಎಂದು ಡಿಕ ಶಿವಕುಮಾರ್ ಹೇಳಿದ್ದಾರೆ. ಹೆಬ್ಬಾಳ ದಿಂದ ಸಿಲ್ಕ್ ಬೋರ್ಡ್ ನಡುವಿನ ಟನಲ್ ರೋಡ್, 25ಕ್ಕೂ ಹೆಚ್ಚು ಸಂಚಾರ ಅಡಚಣೆಗಳು ತಪ್ಪಲಿದೆ.
ಟೆಂಡರ್ ಆಹ್ವಾನಿಸಲು ಪಾಲಿಕೆ ಸಿದ್ಧತೆ
ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್ ವರೆಗಿನ ಸುರಂಗ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲು ಪಾಲಿಕೆ ಸಜ್ಜಾಗಿದೆ. ಎರಡು ಪ್ಯಾಕೇಜ್ ಗಳಲ್ಲಿ ಸುರಂಗ ನಿರ್ಮಾಣಕ್ಕೆ ಟೆಂಡರ್ ಕರೆಯಲು ಪೂರ್ವಭಾವಿ ಸಿದ್ಧತೆ ಮಾಡಲಾಗಿದೆ. ಹೆಬ್ಬಾಳದ ಎಸ್ಟೀಮ್‌ಮಾಲ್ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಟನಲ್ ರಸ್ತೆ ಪ್ಯಾಕೇಜ್-1ರಡಿ 8.748 ಕಿಲೋಮೀಟರ್ ರಸ್ತೆ ಕಾಮಗಾರಿ ನಡೆಯಲಿದೆ. ಇನ್ನು ಪ್ಯಾಕೇಜ್-2ರಲ್ಲಿ ಶೇಷಾದ್ರಿ ರಸ್ತೆಯಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೆ ಟೆಂಡರ್ ನೀಡಲಾಗುತ್ತದೆ. ಎರಡನೇ ಪ್ಯಾಕೇಜ್ 8.748ಕಿ.ಮೀ. ಉದ್ದದ ಸುರಂಗ ನಿರ್ಮಾಣಕ್ಕೆ ಭಾರಿ ತಯಾರಿ ನಡೆಸಲಾಗಿದೆ.
ಸುರಂಗ ಮಾರ್ಗದ ವೆಚ್ಚ 17,780 ಕೋಟಿ ರೂಪಾಯಿ
ಹೆಬ್ಬಾಳ-ಸಿಲ್ಕ್‌ಬೋರ್ಡ್ ನಡುವಿನ ಸುರಂಗ ಮಾರ್ಗದ ವೆಚ್ಚ 17,780 ಕೋಟಿ ರೂಪಾಯಿ. ಅಂದಾಜುವೆಚ್ಚಕ್ಕೆ ಸಚಿವ ಸಂಪುಟವು ಅನುಮೋದನೆ ನೀಡಿದೆ. ಈ ಪೈಕಿ ಪ್ಯಾಕೇಜ್ 1ಕ್ಕೆ ಬಿಬಿಎಂಪಿ ಪಾಲು 3,508 ಕೋಟಿ ರೂಪಾಯಿ ಖಾಸಗಿ ಪಾಲು 5,262 ಕೋಟಿ ರೂಪಾಯಿ ಎಂದು ವಿಂಗಡಿಸಲಾಗಿದೆ. ಪ್ಯಾಕೇಜ್ 2ರಲ್ಲಿ ಬಿಬಿಎಂಪಿಪಾಲು 3,571.37 ಕೋಟಿ ರೂಪಾಯಿ ಹಾಗೂ ಖಾಸಗಿ ಪಾಲು 5,357 ಕೋಟಿ ರೂಪಾಯಿ ಆಗಿದೆ.
ಪ್ರತಿ ಕಿ.ಮಿಗೆ 19 ರೂ ಟೋಲ್ ಶುಲ್ಕ
ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್ ವರೆಗಿನ ಸುರಂಗ ಮಾರ್ಗಕ್ಕೆ ಟೋಲ್ ಶುಲ್ಕ ವಿಧಿಸಲು ಚರ್ಚೆ ನಡೆದಿದೆ. ಪ್ರತಿ ಕಿಲೋಮೀಟರ್‌ಗೆ 19 ರೂಪಾಯಿಂತೆ ವಸೂಲಿ ಮಾಡಲಾಗುತ್ತದೆ. ಒಟ್ಟ 16.75 ಕಿ.ಮಿ ಸುರಂಗ ಮಾರ್ಗದಲ್ಲಿ ಪ್ರಯಾಣಿಸಲು ಸರಿಸುಮಾರು 323 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಗುತ್ತಿಗೆ ಪಡೆಯುವ ಕಂಪನಿಗೆ 30 ವರ್ಷಗಳ ಕಾಲ ಸುರಂಗರಸ್ತೆಯಲ್ಲಿ ಟೋಲ್‌ಸಂಗ್ರಹಿಸಲು ಅವಕಾಶಅವಳಿ ಸುರಂಗ ಮಾರ್ಗವು 33.490 ಕಿ.ಮೀ. ಉದ್ದವಿರಲಿದೆ. ಜೋಡಿ ಸುರಂಗವನ್ನು 26 ತಿಂಗಳಲ್ಲಿ ಕೊರೆದು, ನಂತರ 12 ತಿಂಗಳೊಳಗೆ ನಿರ್ಮಾಣ ಪೂರ್ಣಗೊಳಿಸುವ ಯೋಜನೆ ರೂಪಿಸಲಾಗಿದೆ. ಆರ್ಥಿಕ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವನೆಗೆ ಅನುಮೋದನೆ ದೊರೆಯುತ್ತಿದ್ದಂತೆ ಟೆಂಡರ್ ಆಹ್ವಾನಿಸಿಲು ಬಿಬಿಎಂಪಿ ಸಿದ್ದತೆ ನಡೆಸಿದೆ.
8 ಸುರಂಗ ಬೋರಿಂಗ್ ಯಂತ್ರ ಬಳಕೆ
ಸುರಂಗ ಮಾರ್ಗ ಯೋಜನೆ ರೂಪಿಸಲು 3 ವರ್ಷಗಳ ಟಾರ್ಗೆಟ್ ಇಡಲಾಗಿದೆ. ನಿಗಧಿತ ಅವದಿಯಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹಿನ್ನೆಲೆಯಲ್ಲಿ 8 ಸುರಂಗ ಬೋರಿಂಗ್ ಯಂತ್ರ (ಟಿಬಿಎಂ)ಗಳನ್ನು ಬಳಸಲು ಟೆಂಡರ್ ನಲ್ಲಿಸೂಚಿಸಲು ಬಿಬಿಎಂಪಿ ನಿರ್ಧರಿಸಿದೆ. ಬೆಂಗಳೂರು ಸ್ಟಾರ್ಟ್ ಇನ್ನಾಸ್ಪೆಕ್ಟರ್ ಲಿಮಿಟೆಡ್ 8 ಸುರಂಗ ಬೋರಿಂಗ್ ಯಂತ್ರಗಳನ್ನು ಬಳಸಲು ಟೆಂಡರ್ ನಲ್ಲಿ ಪ್ರಸ್ತಾವಿಸಲಾಗಿದೆ. ಪ್ರತಿ ಯಂತ್ರಗಳು ವರ್ಷಕ್ಕೆ 2 ಕಿ.ಮೀ. ಸುರಂಗ ಕೊರೆಯಲಿದ್ದು, ಒಟ್ಟು 8 ಯಂತ್ರಗಳಿಂದ ಯೋಜನೆ ತ್ವರಿತಗತಿಯಲ್ಲಿ ನಡೆಸಲು ಚಿಂತನೆ ನಡೆಸಲಾಗಿದೆ.